ತುಮಕೂರು,ತಿಪಟೂರು,ಸಿರಾದಲ್ಲಿ ಕೆಎಸ್ ಆರ್ ಟಿಸಿ ಪಾರ್ಸೆಲ್ ಸೇವೆ ಜಾರಿ.

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತುಮಕೂರು, ತಿಪಟೂರು ಮತ್ತು ಸಿರಾ ಬಸ್ ನಿಲ್ದಾಣಗಳಿಂದ ಕೆ.ಎಸ್.ಆರ್.ಟಿ.ಸಿ ಲಾಜಿಸ್ಟಿಕ್ಸ್‌ನಡಿ ಹೊಸ ಪಾರ್ಸಲ್ ಮತ್ತು ಲೈಟ್ ಪಾರ್ಸಲ್ ಸಾಗಾಣೆ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಸಾರ್ವಜನಿಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾ.ಕ.ರ.ಸಾ ಸಂಸ್ಥೆ ಮತ್ತು ಈ.ಕ.ರ.ಸಾ. ಸಂಸ್ಥೆಯ ಬಸ್‌ಗಳಲ್ಲಿ ನೂತನ ಪಾರ್ಸಲ್ ಮತ್ತು ಲೈಟ್ ಪಾರ್ಸಲ್‌ಗಳನ್ನು ಸಾಗಿಸಬಹುದಾಗಿದೆ. ನಿಗಮದ ಬಸ್‌ಗಳಲ್ಲಿ ಕೈಗೆಟುಕುವ ದರದಲ್ಲಿ ಶೀಘ್ರ, ಸುರಕ್ಷಿತ ಸರಕು ಸಾಗಾಣಿಕೆ ಸೌಲಭ್ಯ ಒದಗಿಸಲು ತುಮಕೂರು, ತಿಪಟೂರು ಮತ್ತು ಸಿರಾ ಬಸ್ ನಿಲ್ದಾಣಗಳಲ್ಲಿ ಈ ಕಾರ್ಗೋ ಸೇವೆ ಆರಂಭಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಸಾಗಾಣೆ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುವ ನಿಗಮದ ಚಾಲಕ ಮತ್ತು ನಿರ್ವಾಹಕ ಸಿಬ್ಬಂದಿಗಳಿಗೆ ಕೆ.ಎಸ್.ಆರ್.ಟಿ.ಸಿ ವತಿಯಿಂದ ಪ್ರೋತ್ಸಾಹ ಧನ ನೀಡಲಾಗುತ್ತದೆ. ಬಸ್ ನಿಲ್ದಾಣಗಳಿಂದ ವಿವಿಧ ಕಡೆಗಳಿಗೆ ಪಾರ್ಸಲ್ ಸಾಗಿಸುವ ಸಲುವಾಗಿ ತುಮಕೂರು ಬಸ್ ನಿಲ್ದಾಣ-9900990096 (ರಾಜಣ್ಣ), ತಿಪಟೂರು ಬಸ್ ನಿಲ್ದಾಣ-7022191844(ಹರೀಶ್), ಸಿರಾ ಬಸ್ ನಿಲ್ದಾಣ-9742477766(ಮೋಹನ್)ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!