ನಿರ್ಮಾಪಕಿ ಏಕ್ತಾ ಕಪೂರ್‌ಗೆ ಕೋವಿಡ್ ದೃಢ

ನವದೆಹಲಿ: ಜನವರಿ 03: ದೂರದರ್ಶನ ಮತ್ತು ಚಲನಚಿತ್ರ ನಿರ್ಮಾಪಕಿ ಏಕ್ತಾ ಕಪೂರ್ ಅವರಿಗೆ ಸೋಮವಾರ ಕೋವಿಡ್-19 ದೃಢಪಟ್ಟಿದೆ. ದೂರದರ್ಶನದ ಮೊಗಲ್ ಈ ಸುದ್ದಿಯನ್ನು ಇನ್‍ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.

“ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ನನಗೆ ಕೋವಿಡ್ ಪಾಸಿಟಿವ್ ಆಗಿದೆ. ನಾನು ಚೆನ್ನಾಗಿದ್ದೇನೆ ಮತ್ತು ನನ್ನೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ದಯವಿಟ್ಟು ತಾವು ಪರೀಕ್ಷಿಸಿಕೊಳ್ಳುವಂತೆ ನಾನು ವಿನಂತಿಸುತ್ತೇನೆ, ”ಎಂದು ಹೇಳಿದ್ದಾರೆ.

ಏಕ್ತಾ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅನೇಕ ಸೆಲೆಬ್ರಿಟಿಗಳು ಕಮೆಂಟ್ ಮಾಡಿದ್ದಾರೆ. “ಓಹ್.. ಕಾಳಜಿ ವಹಿಸಿ ಮತ್ತು ಬೇಗ ಗುಣಮುಖರಾಗಿ” ಎಂದು ನಟಿ ಶ್ವೇತಾ ತಿವಾರಿ ಬರೆದಿದ್ದಾರೆ. ನಟಿ ಹಿನಾ ಖಾನ್, ಬೇಗ ಆರಾಮಾಗಿ ಎಂದು ಕಮೆಂಟ್ ಮಾಡಿದ್ದಾರೆ. ನಾಗಿನ್ ನಟಿ ಮೌನಿ ರಾಯ್ “ಬೇಗ ಗುಣಮುಖರಾಗಿ ಎಂದು ಹೇಳಿದರೆ ನಿರ್ದೇಶಕ ಹನ್ಸಲ್ ಮೆಹ್ತಾ ಅವರು “ಹುಷಾರಾಗಿ ಏಕ್ತಾ” ಎಂದು ಬರೆದಿದ್ದಾರೆ.

ಗೌತಮಿ ಕಪೂರ್, ವಿಕ್ರಾಂತ್ ಮೆಸ್ಸಿ, ಕ್ರತಿಕಾ ಸೆಂಗರ್ ಧೀರ್, ಅರ್ಸಲನ್ ಗೋನಿ ಅವರು ಏಕ್ತಾ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಕೋವಿಡ್‍ಗೆ ಧನಾತ್ಮಕ ಪರೀಕ್ಷೆಗೆ ಒಳಪಡುವ ಒಂದು ದಿನದ ಮೊದಲು, ಏಕ್ತಾ ಅವರು ‘ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ಲೈವ್ಸ್’ ತಾರೆ ನೀಲಮ್ ಕೊಠಾರಿ ಮತ್ತು ಹುಡುಗಿಯರ ಗುಂಪಿನೊಂದಿಗೆ ಹ್ಯಾಂಗ್ ಔಟ್ ಮಾಡಿದ್ದರು. ಇನ್ಸ್ಟಗ್ರಾಮ್ ನಲ್ಲಿ ಅವರೊಂದಿಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದರು.

error: Content is protected !!