ಗುಬ್ಬಿ. ಜವರೇಗೌಡನ ಪಾಳ್ಯದ ರಸ್ತೆ ಸರಿಪಡಿಸಲು ಗ್ರಾಮಸ್ಥರ ಒತ್ತಾಯ.

ಗುಬ್ಬಿ ತಾಲೂಕಿನ ಜವರೇಗೌಡನ ಪಾಳ್ಯ ಗ್ರಾಮದ ರಸ್ತೆ ನೋಡಿ ಜನತೆ ನಗಬೇಕೋ… ಅಳಬೇಕೋ… ತಿಳಿಯದ ಸ್ಥಿತಿ ಯಲ್ಲಿ ಗ್ರಾಮಸ್ಥರು ಮುಖ ಪ್ರೇಕ್ಷಕರಾಗಿದ್ದಾರೆ.

ಈ ಗ್ರಾಮದಲ್ಲಿ ಸರಿ ಸುಮಾರು 100 ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಗ್ರಾಮವಾಗಿದ್ದು ಈ ಗ್ರಾಮದ ರಸ್ತೆ ಸರಿಸುಮಾರು ಹತ್ತರಿಂದ ಹದಿನೈದು ವರ್ಷಗಳಿಂದಲು ಈ ಜನರು ಓಡಾಡಲು ಯೋಗ್ಯವಲ್ಲದ ರಸ್ತೆಯಾಗಿದೆ.

ಮಳೆಗಾಲದಲ್ಲಿ ಜನರ ಸ್ಥಿತಿ ಅಧೋಗತಿ.ಮಳೆಗಾಲ ಬಂತೆಂದರೆ ಗ್ರಾಮದ ನಿವಾಸಿಗಳು ರಸ್ತೆಯಲ್ಲಿ ಓಡಾಡಲು ನರಕ ಯಾತನೆಯನ್ನು ಅನುಭವಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಈ ಗ್ರಾಮಕ್ಕೆ ಚುನಾವಣೆ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಗ್ರಾಮದ ಜನತೆಯ ಬಳಿ ಮತ ಕೇಳಲು ಬರುತ್ತಾರೆ ಅದರೆ ಗ್ರಾಮದ ಅಭಿವೃದ್ಧಿ ಮತ್ತು ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ನಿಡುವಲ್ಲಿ ಯಾರು ಸಹ ಚಿಂತನೆ ಮಾಡಿರು ಈ ರಸ್ತೆ ಯ ಸ್ಥಿತಿ ನೋಡಿದರೆ ತಿಳಿಯುತ್ತದೆ.

ಚುನಾವಣೆ ಗೆ ಮಾತ್ರ ಸಿಮೀತವಾದ ಗ್ರಾಮ.ಈ ನಮ್ಮ ಬಹುಶಃ ಗ್ರಾಮ ಪಂಚಾಯಿತಿ. ಚುನಾವಣೆಯ ಸಂದರ್ಭದಲ್ಲಿ ಮತಕ್ಕೆ ಮಾತ್ರವೇ ಸಿಮಿತವಾಗಿದೆ ಗ್ರಾಮದ ಜನತೆ ಹಲವು ಬಾರಿ ರಸ್ತೆ ಅಭಿವೃದ್ಧಿ ಮಾಡುವಂತೆ ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿದಿಗಳಿಗೆ ಮನವಿಯನ್ನು ನೀಡಿದರು ಇಲ್ಲಿಯ ವರೆಗೂ ಮೊಂಡುತನ ತೋರಿಸಿ ರಸ್ತೆ ಅಭಿವೃದ್ಧಿ ಮಾಡುವಲ್ಲಿ ಜನನಾಯಕರು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ನೇರ ಆರೋಪ ಮಾಡಿದ್ದಾರೆ.


ಸುಳ್ಳು ಭರವಸೆ ನೀಡಿದ ಅಧಿಕಾರಿಗಳು. ಈ ಗ್ರಾಮದ ರಸ್ತೆ ಅಭಿವೃದ್ಧಿ ಮತ್ತು ನಮ್ಮ ಗ್ರಾಮದ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಚುನಾವಣಾ ಸಂದರ್ಭದಲ್ಲಿ ಮತದಾನ ಬಹಿಷ್ಕರಿಸಿ ಹೋರಾಟ ಮಾಡಲಾಗಿತ್ತು ಆ ಸಂದರ್ಭದಲ್ಲಿ ನಮ್ಮ ಗ್ರಾಮಕ್ಕೆ ಬೇಟಿ ನಿಡಿದ ತಹಶೀಲ್ದಾರ್ ಹಾಗೂ ತಾಲೋಕು ಮಟ್ಟದ ಅಧಿಕಾರಿಗಳು ಹದಗೆಟ್ಟ ರಸ್ತೆಯನ್ನು ಸರಿಪಡಿಸುವುದಾಗಿ ಭರವಸೆಯ ಮಹಾಪೋರವನ್ನೆ ನೀಡಿದ್ದರು ಅದರೆ ಅಂದಿನಿಂದ ಇಂದಿನವರೆಗೂ ನಮ್ಮೂರಿನ ರಸ್ತೆಯ ಅಭಿವೃದ್ಧಿ ಕೆಲಸವನ್ನು ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.


ಕಣ್ಮುಚ್ಚಿ ಕುಳಿತ ಅಧಿಕಾರಿಗಳು. ಈಗಾಗಲೇ ಸಾಕಷ್ಟು ಬಾರಿ ನಮ್ಮ ಗ್ರಾಮದ ರಸ್ತೆಯ ಅಭಿವೃದ್ಧಿ ವಿಚಾರವಾಗಿ ಅಲವಾರು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ವರದಿಯನ್ನು ಪ್ರಸಾರ ಮಾಡಲಾಗಿದ್ದರು ಅಧಿಕಾರಿಗಳು ಮಾತ್ರ ಇದ್ಯಾವುದನ್ನು ಲೆಕ್ಕಿಸದೆ ಕಣ್ಮುಚ್ಚಿ ಕುಳಿತಿದ್ದಾರೆ ನಂತರದ ಅಲವು ದಿನಗಳ ಹಿಂದೆ ನಮ್ಮ ಕ್ಷೇತ್ರದ ಶಾಸಕರಿಗೆ ಗ್ರಾಮಸ್ಥರು ಮನವಿ ಮಾಡಿದ್ದೆವು.

ಶಾಸಕರ ಭರವಸೆ ಹಿಡೇರಿಲ್ಲ. ಶಾಸಕರು ಈ ಗ್ರಾಮದ ರಸ್ತೆ ಅಭಿವೃದ್ಧಿ ಕೆಲಸಕ್ಕೆ ಸುಮಾರು ತಿಂಗಳುಗಳ ಹಿಂದೆ 60 ಲಕ್ಷ ರೂಪಾಯಿ ಹಣವನ್ನು ಹಾಕಲಾಗಿದೆ ಎಂದು ಹೇಳಿದರು ಆದರೆ ಇಲ್ಲಿಯ ತನಕ ನಮ್ಮ ಗ್ರಾಮದ ರಸ್ತೆ ಅಭಿವೃದ್ಧಿ ಕಾರ್ಯ ನೆಡೆದಿಲ್ಲಾ ಈ ಕೂಡಲೇ ನಮ್ಮ ಗ್ರಾಮದ ರಸ್ತೆ ಅಭಿವೃದ್ಧಿ ಕೆಲಸ ಸರಿಪಡಿಸಬೇಕು ಇಲ್ಲವಾದರೆ ಸಂಬಂಧ ಪಟ್ಟ ಇಲಾಖೆಯ ಮುಂಭಾಗದಲ್ಲಿ ನಮ್ಮ ಗ್ರಾಮದ ಜನತೆ ಹೋರಾಟ ನಡೆಸಲು ಮುಂದಾಗಿದ್ದೆವೆ ಎಂದು ಗ್ರಾಮಸ್ಥರು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!