ಕೆ ಎನ್ ರಾಜಣ್ಣನ ಗೆಲ್ಲಿಸಿದ್ರೆ ಸಚಿವ ಸ್ಥಾನ ಗ್ಯಾರಂಟಿ: ಮದುಗಿರಿಯಲ್ಲಿ ಸಿದ್ದರಾಮಯ್ಯ ಹೇಳಿದ್ದೇನು.

ಮದುಗಿರಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೆಎನ್ ರಾಜಣ್ಣ ಅವರಿಗೆ ಸಚಿವ ಸ್ಥಾನ ಸಿಗುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದರು.

ತಾಲ್ಲೂಕು ಕಾಂಗ್ರೇಸ್ ಸಮೀತಿ ಏರ್ಪಡಿಸಿದ್ದ ಗ್ರಾಮ ಪಂಚಾಯ್ತಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷ, ಹಾಗೂ ಸದಸ್ಯರುಗಳಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಾಲ್ಲೂಕಿನ 39 ಗ್ರಾಮಪಂಚಾಯಿಗಳಲ್ಲಿ  ಕಾಂಗ್ರೆಸ್ 34 ಸ್ಥಾನಗಳನ್ನ ಗೆದ್ದಿರುವುದು ಸಂತೋಷದ ವಿಚಾರ ಎಲ್ಲರಿಗೂ ಪಕ್ಷದ ವತಿಯಿಂದ ಹಾಗೂ ವೈಯಕ್ತಿವಾಗಿ ಅಭಿನಂದನೆಗಳನ್ನ ಸಲ್ಲಿಸುತ್ತೆನೆ. ಇದರ ನಾಯಕತ್ವ ವಹಿಸಿದ್ದ ಕೆಎನ್ ರಾಜಣ್ಣಗೂ ಅಭಿನಂದನೆ ತಿಳಿಸುತ್ತೆನೆ.

ರಾಜಣ್ಣ ಬಡವರ ಪರವಾಗಿ ಕೆಲಸ ಮಾಡುವ ಚಿಂತನೆಯುಳ್ಳವರಾಗಿದ್ದಾರೆ ನಮ್ಮ ಸಂವಿಧಾನ ಕೂಡ ಅದನ್ನೆ ಹೇಳುತ್ತದೆ. ಆದರೆ ನೀವು ಕೆಎನ್ ರಾಜಣ್ಣನ ಸೋಲಿಸಿಬಿಟ್ರಲ್ಲಾ…ರಾಜಣ್ಣ ಏನು ಅನ್ಯಾಯ ಮಾಡಿದ್ರು..ಎಂದರು. ಜೆಡಿಎಸ್ ನ ವೀರಭದ್ರಯ್ಯನ್ನ ಗೆಲ್ಲಿಸಿದ್ರಿ ಕ್ಷೇತ್ರದ ಅಭಿವೃದ್ದಿ, ಸಮಸ್ಯೆಗಳ ಕುರಿತು ಆತ ಒಂದು ದಿನನೂ ಕೂಡ ಸದನದಲ್ಲಿ ಮಾತಾಡಲಿಲ್ಲ. ಎಲ್ಲಿಸಿಗುತ್ತೋ ಅಲ್ಲಿ ಕೆರ್ಕಳ್ತಾನೆ ಎಂದರು.

ಆದರೆ ನಾನು ನೋಡಿದ ಒಬ್ಬ ಅದ್ಬುತ ರಾಜಕಾರಣಿ ಕೆ ಎನ್ ರಾಜಣ್ಣ. ಮುಂದಿನ ಚುನಾವಣೆಯಲ್ಲಿ ರಾಜಣ್ಣ ಗೆಲ್ಲಲೇ ಬೇಕು. ಅವರ ಮುಂದಿನ ರಾಜಕೀಯ ಭವಿಷ್ಯ ಚೆನ್ನಾಗಿದೆ. ನೀವು ಗೆಲ್ಲಿಸಿದ್ರೆ ಪಕ್ಷ ಅವರನ್ನ ಮಾನ್ಯತೆ ಮಾಡುತ್ತದೆ ಎಂದು ಹೇಳುವ ಮೂಲಕ ಮುಂದಿನ ಭಾರಿ ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಕೆಎನ್ ಆರ್ ಗೆ ಸಚಿವ ಸ್ಥಾನ ಲಭ್ಯವಾಗುವ ಬಗ್ಗೆ ಸುಳಿವು ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ಸಂಸದರು ತಮ್ಮ ಭಾಷಣದ ವೇಳೆ ಮುಂದಿನ ಭಾರಿ ಪಕ್ಷ ಅಧಿಕಾರಕ್ಕೆ ಬಂದರೆ ಕೆ ಎನ್ ರಾಜಣ್ಣ ಅವರಿಗೆ ಸಹಕಾರಿ ಸಚಿವರನ್ನಾಗಿ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿ ಎಂ ಸಿದ್ದರಾಮಯ್ಯ ಅವರಿದ್ದ ವೇದಿಕೆಯಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!