ಡಿಸೆಂಬರ್ 31ರ ಕರ್ನಾಟಕ ಬಂದ್‌ಗೆ ಜಯಕರ್ನಾಟಕ ಸಂಘಟನೆಯ ಬೆಂಬಲವಿಲ್ಲ:ಆನೆಕಲ್ ತಾಲ್ಲೂಕು ಅಧ್ಯಕ್ಷ ಕಿರಣ್ ಪ್ರಭಾಕರ್ ರೆಡ್ಡಿ

ಆನೇಕಲ್: ಎಂಇಎಸ್ ಸಂಘಟನೆ ನಿಷೇಧ ಮಾಡುವಂತೆ ಆಗ್ರಹಿಸಿ ಕನ್ನಡಪರ ಒಕ್ಕೂಟಗಳು ಡಿಸೆಂಬರ್ 31 ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಜಯ ಕರ್ನಾಟಕ ಸಂಘಟನೆ ಬೆಂಬಲ ಇಲ್ಲ ಎಂದು ಆನೇಕಲ್ ನಲ್ಲಿ ಸ್ಪಷ್ಟನೆ ನೀಡಲಾಗಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಕಿರಣ್ ಪ್ರಭಾಕರ್ ರೆಡ್ಡಿ ಎಂಇಎಸ್ ಸಂಘಟನೆ ನಿಷೇಧ ಮಾಡಲು ಕನ್ನಡ ಪರ ಸಂಘಟನೆಗಳ ನಡೆಸುತ್ತಿರುವ ಹೋರಾಟದಲ್ಲಿ ಜಯಕರ್ನಾಟಕ ಸಂಘಟನೆ ಸದಾ ಮಂಚೂಣಿಯಲ್ಲಿದ್ದು ಹಲವು ಹೊರಾಟಗಳಲ್ಲಿ ಭಾಗಿಯಾಗಿದೆ. ಆದರೆ ಕರ್ನಾಟಕ‌ ಬಂದ್ ವಿಚಾರದಲ್ಲಿ ತಮ್ಮ ಬೆಂಬಲ ನೀಡುತ್ತಿಲ್ಲ ಎಂದು ತಮ್ಮ ನಿಲುವನ್ನು ಜಯಕರ್ನಾಟಕ ಸಂಘಟನೆ ಸ್ಪಷ್ಟಪಡಿಸಿದೆ.

ಅಲ್ಲದೇ ಕಳೆದ ಬಾರಿ ಕನ್ನಡಪರ ಒಕ್ಕೂಟಗಳು ಕರೆ ಕೊಟ್ಟಿದ್ದ ಕರ್ನಾಟಕ ಬಂದ್ ಗೆ ಜನರಿಂದ ನಡುವೆ ನಿರಸ ಪ್ರತಿಕ್ರಿಯೆ ‌ವ್ಯಕ್ತವಾಗಿತ್ತು. ಅಲ್ಲದೆ ಪದೇ ಪದೇ ಕರ್ನಾಟಕ ಬಂದ್ ನಿಂದ ಜನ ರೋಸಿ ಹೋಗಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಹಾಗಾಗಿ ಈ ಬಾರಿಯ ಬಂದ್‌ಗೆ ಜಯ ಕರ್ನಾಟಕ ‌ಸಂಘಟನೆಯಿಂದ ಯಾವುದೇ ಬೆಂಬಲವನ್ನು ನೀಡುತ್ತಿಲ್ಲ ಎಂದು ಆನೇಕಲ್ ನಲ್ಲಿ ತಾಲೂಕು ಅಧ್ಯಕ್ಷ ಕಿರಣ್ ಪ್ರಭಾಕರ್ ರೆಡ್ಡಿ ಹೇಳಿಕೆ ನೀಡಿದ್ದಾರೆ.

ರಾಜಕೀಯ ಲೆಕ್ಕಚಾರ ಹಾಗೂ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷ ಮೇಕೆದಾಟು ವಿಚಾರವಾಗಿ ಪಾದಯಾತ್ರೆ ನಡೆಸುತ್ತಿದೆ

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪಾದಯಾತ್ರೆಯು ರಾಜಕೀಯ ಲೆಕ್ಕಚಾರ ಹಾಗೂ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಕಿರಣ್ ಪ್ರಭಾಕರ್ ರೆಡ್ಡಿ ಆಕ್ರೋಶವನ್ನ ಹೊರಹಾಕಿದ್ದಾರೆ. ಮೇಕೆದಾಟು ವಿಚಾರವಾಗಿ ಸಾಕಷ್ಟು ವರ್ಷಗಳಿಂದ ಕನ್ನಡಪರ ಸಂಘಟನೆಗಳು ಹೋರಾಟಗಳನ್ನ ಮಾಡಿಕೊಳ್ಳುತ್ತ ಬಂದಿದೆ. ಕಳೆದ ಐದು ವರ್ಷಗಳ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ವಿಚಾರ ಆಗ ನೆನಪಿಗೆ ಬಾರದೆ ಮೇಕೆದಾಟು ಯೋಜನೆಯನ್ನ ಜಾರಿಗೆಗೊಳಿಸಲಾಗದೆ, ಈಗ ಪಾದಯಾತ್ರೆ ಮಾಡುತ್ತೇವೆ ಎಂದು ಹೊರಟಿದ್ದಾರೆ.

ಈಗ ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಮಾಡುತ್ತೇವೆ ಎನ್ನುತ್ತಿರುವುದು ಕೇವಲ ರಾಜಕೀಯ ಲೆಕ್ಕಚಾರ ಹಾಗೂ ಲಾಭ ಪಡೆದುಕೊಳ್ಳಲು ಮಾಡುತ್ತಿದೆ. ಮೇಕೆದಾಟು ಯೋಜನೆ ಜಾರಿಗೊಂಡರೆ ಪ್ರತಿಯೊಬ್ಬ ಕನ್ನಡಿಗನು ಸಹ ಹೆಮ್ಮೆಯಿಂದ ಸಂತೋಷ ಪಡುವಂತಹ ವಿಚಾರ, ಆದ್ರೆ ಅವರ ಅಧಿಕಾರ ಅವಧಿಯಲ್ಲಿ ಸುಮ್ಮನಿದ್ದು ಈಗ ಪಾದಯಾತ್ರೆ ಮಾಡುತ್ತೇವೆ ಎನ್ನುವುದು ರಾಜಕೀಯ ಲಾಭಕ್ಕಾಗಿಯೇ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದರು.

error: Content is protected !!