ಒಳಾಡಳಿತ ಇಲಾಖೆಗೆ ಕನ್ನಡ ಬಳಸುವಂತೆ ಎಚ್ಚರಿಕೆ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ

ರಾಜ್ಯದಲ್ಲಿ ಕನ್ನಡ ಬಳಸದ ಸರ್ಕಾರದ ಒಳಾಡಳಿತ ಇಲಾಖೆಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರ ಎಚ್ಚರಿಕೆ ನೀಡಿದ್ದು ಕಡ್ಡಾಯವಾಗಿ ಕನ್ನಡ ಬಳಸುವಂತೆ ಪತ್ರ ಬರೆದು ಸೂಚನೆ ನೀಡಿದೆ.

ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಪ್ರಥಮ ಭಾಷೆ ಹಾಗೂ ಪ್ರಾದೇಶಿಕ ಭಾಷೆ ಎಂದು ಕರ್ನಾಟಕ ಸರ್ಕಾರ 350ಕ್ಕೂ ಅಧಿಕ ಅದೇಶ, ಆಜ್ಞೆ ಹೊರಡಿಸಿದ್ದು, ಕೇಂದ್ರ ಸರ್ಕಾರ ಕೂಡ ಅಧಿಕೃತ ಜ್ಞಾಪನ ಹೊರಡಿಸಿ ಕೇಂದ್ರ ಸರ್ಕಾರದ ಕೇಂದ್ರ ಕಛೇರಿಗಳು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕೆಂದು ಹೇಳಿದೆ.

ಇತ್ತೀಚೆಗೆ ಭದ್ರಾವತಿ ಮತ್ತು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಮಾಡದಿರುವ ಬಗ್ಗೆ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸಿದ್ದಲಿಂಗೇಗೌಡರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯದಲ್ಲಿ ಕಡ್ಡಾಯವಾಗಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಬಳಸಲು ಎಚ್ಚರಿಕೆಯ ಪತ್ರ ಬರೆದು ಅನುಷ್ಠಾನಕ್ಕೆ ಆದೇಶಿಸಿದ್ದಾರೆ.

ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಕಚೇರಿ/ಸಂಸ್ಥೆಗಳು ದೈನಂದಿನ ಆಡಳಿತ ವ್ಯವಹಾರದಲ್ಲಿಯೂ ಕೂಡ ಕನ್ನಡ ಕಟ್ಟು ನಿಟ್ಟಾಗಿ ಬಳಸುವಂತೆ ಸೂಚನೆ ನೀಡಿದೆ.

error: Content is protected !!