ಕೆಎನ್ ಆರ್ ಬಳಿ ಮೈಕ್ ಕೇಳಿ ಮುಜುಗರಕ್ಕೀಡಾದ ಕೆ ಟಿ ಶಾಂತಕುಮಾರ್.

ತಿಪಟೂರು: ಜಿಲ್ಲೆಯ ರೆಬೆಲ್ ರಾಜಕಾರಣಿ ಕೆಎನ್ ರಾಜಣ್ಣ ಕೋಪಕ್ಕೆ ಇಂದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ತಿಪಟೂರಿನ ಕೆ ಟಿ ಶಾಂತಕುಮಾರ್ ಗುರಿಯಾಗಿದ್ದಾರೆ.

ವೀಡಿಯೋ ವೀಕ್ಷಿಸಲು ಇಲ್ಲಿ‌ ಕ್ಲಿಕ್ ಮಾಡಿ.

ತಾಲ್ಲೂಕಿನ ಕೆ ಬಿ ಕ್ರಾಸ್ ನಲ್ಲಿ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆ ಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಮಾಜಿ ಶಾಸಕ ಜಿಲ್ಲೆಯ ಕೆಎನ್ ರಾಜಣ್ಣ, ಶಾಸಕ ರಂಗನಾಥ್, ಮಾಜಿ ಶಾಸಕ ಕೆ‌.ಷಡಕ್ಷರಿ ಸೇರಿದಂತೆ ಜಿಲ್ಲೆಯ ಹಲವು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು. ಈ ವೇಳೆ ಬಿಜೆಪಿ‌ ಸರ್ಕಾರದ ವೈಪಲ್ಯಗಳನ್ನ ಕುರಿತು ವೇದಿಕೆಯಲ್ಲಿ ಮಾತನಾಡುತ್ತಿದ್ದ ಕೆ ಎನ್ ರಾಜಣ್ಣ ಅವರ ಬಳಿ ಕೆ ಟಿ ಶಾಂತಕುಮಾರ್ ಮೈಕ್ ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ರಾಜಣ್ಣ ಶಾಂತಕುಮಾರ್ ಗೆ ಗುದ್ದುವ ರೀತಿಯಲ್ಲಿ ತಮ್ಮ ಬಲಗೈನ ಮಣಕೈ ತೋರಿಸಿ ಅಸಮಾಧಾನ ವ್ಯಕ್ತ ಪಡಿಸಿದರು. ಮುಂಬರುವ ವಿಧಾನಸಭಾ ಚುನಾವಣೆಗೆ ತಿಪಟೂರು ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿಯಾಗಿರುವ ಕೆ ಟಿ‌ ಶಾಂತಕುಮಾರ್ ಗೆ ಪಕ್ಷದ ರಾಜ್ಯ ನಾಯಕರ ಎದುರೇ ಈ ಘಟನೆ ನಡೆದಿದ್ದು ತೀವ್ರ ಮುಜುಗರಕ್ಕೀಡುಮಾಡಿದೆ.

ತಕ್ಷಣ ಪಕ್ಕದಲ್ಲೆ ಕುಳಿತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಶಾಸಕ ಕೆ‌ ಷಡಕ್ಷರಿ ಮುಖಂಡ ಶಾಂತಕುಮಾರ್ ಗೆ ಸುಮ್ಮನಿರುವಂತೆ‌ ಕೈ ಸನ್ನೆ ಮಾಡಿದ್ದಾರೆ. ನೂರಾರು ಕಾರ್ಯಕರ್ತರು, ಅಧಿಕಾರಿಗಳು, ರಾಜ್ಯ ನಾಯಕರ ಸಮ್ಮುಖದಲ್ಲೆ ಕೆ ಎನ್ ರಾಜಣ್ಣರ ಕೋಪಕ್ಕೆ ಗುರಿಯಾದ ಕೆ ಟಿ ಶಾಂತಕುಮಾರ್ ತೀವ್ರ ಮುಜುಗರವುಂಟುಮಾಡಿದೆ.

Leave a Reply

Your email address will not be published. Required fields are marked *

error: Content is protected !!