ಜಿಗಣಿ ಪುರಸಭಾ ಚುನಾವಣೆ:ಶಾಸಕ ಕೃಷ್ಣಪ್ಪ ರವರಿಂದ ರೊಡ್ ಶೋ: ಅಭ್ಯರ್ಥಿಗಳ ಪರ ಮತಯಾಚನೆ

ಆನೇಕಲ್: ಡಿಸೆಂಬರ್ 27 ರಂದು ನಡೆಯುತ್ತಿರುವ ಜಿಗಣಿ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ಎಂ ಕೃಷ್ಣಪ್ಪ ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ ಅದ್ದೂರಿ ಪ್ರಚಾರವನ್ನ ಹಮ್ಮಿಕೊಂಡಿದ್ದರು.

ಪುರಸಭಾ ವ್ಯಾಪ್ತಿಯ 23 ವಾರ್ಡ್ ಗಳಲ್ಲಿ ರೊಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಶಾಸಕರು ಮತಯಾಚನೆಯನ್ನು ಮಾಡಿದರು. ಜಿಗಣಿ ಪುರಸಭಾ ವ್ಯಾಪ್ತಿಯಲ್ಲಿ ಈ ಹಿಂದೆ ಬಿಜೆಪಿ ಆಡಳಿತವಿದ್ದು , ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು, ಕೆಲವು ಕಡೆ ನೂತನ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ.

ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಅತ್ಯಧಿಕ ಮತಗಳನ್ನು ನೀಡುವ ಮೂಲಕ ಬಿಜೆಪಿ ಪಕ್ಷ ಮತ್ತೆ ಪುರಸಭೆಯ ಅಧಿಕಾರಿದ ಚುಕ್ಕಾಣಿ ಹಿಡಿಯಲು ಎಲ್ಲರು ಕೈ ಜೋಡಿಸಿ ಎಂದು ಬೆಂ. ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಮತದಾರರಲ್ಲಿ ಮನವಿ ಮಾಡಿದರು.

error: Content is protected !!