ತುಮಕೂರು (ಜುಲೈ 2):ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿಚಾರವಾಗಿ ತುರುವೇಕೆರೆ ಶಾಸಕ ಶಾಸಕ ಎಂ ಟಿ ಕೃಷ್ಣಪ್ಪ ಸರ್ಕಾರಕ್ಕೆ ಎಡೆಮಟ್ಟೆ ಸೇವೆಯ ಎಚ್ಚರಿಕೆ ಕೊಟ್ಟಿದ್ದಾರೆ.

ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ಶಾಸಕ ಎಂ ಟಿ ಕೃಷ್ಣಪ್ಪ ಸರ್ಕಾರದ ವಿರುದ್ದ ಎಡೆಮಟ್ಟೆ ಹೋರಾಟಕ್ಕೆ ರೈತರಿಗೆ ಕರೆ ನೀಡಿದ್ದಾರೆ. ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಮೂಲಕ ರಾಮನಗರಕ್ಕೆ ನೀರನ್ನ ಕೊಂಡೊಯ್ಯಲು ಸರ್ಕಾರ ತೀರ್ಮಾನಿಸಿದೆ. ಇದನ್ನ ವಿರೋಧಿಸಿ ಸುಮಾರು ಹೋರಾಟ ಮಾಡಿದ್ದೇವೆ.

ನಮ್ಮ ಹೋರಾಟ ಸಮೀತಿ ಖುದ್ದಾಗಿ ಹೋಗಿ ಕಾಮಗಾರಿಯನ್ನ ನಿಲ್ಲಿಸಿದೆ, ಇದೀಗ ಕಾಮಗಾರಿ ಪ್ರಾರಂಭಿಸಲು ರಕ್ಷಣೆ ಕೊಡಿ ಎಂದು ಎಇಇ ಪೊಲೀಸರಿಗೆ ದೂರು ನೀಡಿದ್ದಾರೆ‌. ಸರ್ಕಾರ ಜನರ ಹಿತದೃಷ್ಟಿಯಿಂದ ಕಾರ್ಯಕ್ರಮ ಮಾಡಬೇಕು. ಇಡೀ ಜಿಲ್ಲೆ ಈ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸುತ್ತಿದೆ. ಆದರೆ ಒಬ್ಬ ಎಇಇ ಹೋಗಿ ಕಾಮಗಾರಿ ಪ್ರಾರಂಭಿಸುತ್ತಾನೆ ಅಂದ್ರೆ ಇದು ಸರ್ಕಾರದ ಆಡಳಿತದ ನಾಚಿಕೆಗೇಡಿತನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಮೀಟಿಂಗ್ ನಲ್ಲಿ ಹೇಳಿದ್ದೆ ತಾಂತ್ರಿಕ ಕಮಿಟಿ ಮಾಡಿ, ನಾವು ಸಲಹೆ ಕೊಡುತ್ತೆವೆ ಎಂದು ತಿಳಿಸಿದ್ದೆವು. ಕಮೀಟಿ ತೀರ್ಮಾನ ಬರುವವರೆಗೂ ಕಾಮಗಾರಿ ಪ್ರಾರಂಭಿಸಬೇಡಿ ಎಂದಿದ್ದೆವು ಆದರೂ ಸರ್ಕಾರ ಏಕಾಏಕಿ ಕಾಮಗಾರಿ ಪ್ರಾರಂಭಿಸಲು ಹೊರಟಿರುವುದು ಖಂಡನೀಯ ಎಂದರು.

ರಾಮನಗರಕ್ಕೆ 3 ಟಿ ಎಂ ಸಿ ನೀರು ಕೊಡಲಿಕ್ಕೆ ನಮ್ಮ ವಿರೋಧವಿಲ್ಲ ಆದರೆ 700 ರಿಂದ 800 ಕೋಟಿ ಖರ್ಚು ಮಾಡಿ ಮೂಲ ನಾಲೆ ಆದುನಿಕರಣಗೊಂಡಿದೆ ಅದರ ಮೂಲಕವೇ ತೆಗೆದುಕೊಂಡು ಹೋಗಲು ನಾವು ಹೇಳಿದ್ದೆವೆ. ಆದರೆ ಈ ಸರ್ಕಾರ ಹಠಕ್ಕೆ ಬಿದ್ದು ಶಾಸಕರನ್ನ ಹೋಲೈಕೆ ಮಾಡಲು ಇಂತಹ ಕೆಟ್ಟ ನಿರ್ಧಾರ ಕೈಗೊಂಡಿದೆ ಇದು ಖಂಡನೀಯ ನಾವು ಇದನ್ನ ತೀವ್ರವಾಗಿ ವಿರೋಧಿಸುತ್ತೆವೆ‌ ಎಂದರು.

ಸರ್ಕಾರ ಪೊಲೀಸರನ್ನ ಬಳಸಿ ಕೆಲಸಮಾಡಲು ಹೊರಟಿರೊದು ಸಂವಿಧಾನ ವಿರೋಧಿ ಕೆಲಸ, ಪೊಲೀಸರ ಲಾಠಿಗೆ ನಾವು ನಮ್ಮ ರೈತರು ಹೆದರುವುದಿಲ್ಲ, ನಾನು ರೈತರಿಗೆ 500 ಟ್ರಕ್ ಎಡೆ ಮಟ್ಟೆ ತರಲು ಕರೆ ಕೊಡ್ತಿನಿ, ನೋಡೆ ಬಿಡೋಣ ಪೊಲೀಸರ ಲಾಠಿ ಮುರಿಯುತ್ತೋ, ರೈತರ ಎಡೆಮಟ್ಟೆ ಮುರಿಯುತ್ತೊ ಎಂದು ಸವಾಲು ಹಾಕಿದ್ದಾರೆ.

ಪೊಲೀಸರು ಯಾರೂ ಹೋರಾಟ ಹತ್ತಿಕ್ಕಲು ಬರಬೇಡಿ ರೈತರು ನಿಮಗೆ ಎಡೆಮಟ್ಟೆ ಸೇವೆ ಮಾಡಿ‌ ಕಳಿಸುತ್ತಾರೆ ಎಂದು ಪೊಲೀಸರಿಗೂ ಎಚ್ಚರಿಕೆ ನೀಡಿರುವ ಶಾಸಕ ಎಂ ಟಿ ಕೃಷ್ಣಪ್ಪ ನಮ್ಮ ಹೋರಾಟ ಎಂದಿಗೂ ನಿಲ್ಲುವುದಿಲ್ಲ‌‌, ಇನ್ನೂ ಎರಡು ಮೂರು ದಿನದಲ್ಲಿ ಸಭೆ ಮಾಡಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡಲಿದ್ದೆವೆ ಎಂದಿದ್ದಾರೆ.

LEAVE A REPLY

Please enter your comment!
Please enter your name here