ಜಾಕ್ವೆಲಿನ್ ಡ್ಯಾನ್ಸ್ ಇನ್ಮುಂದೆ ತುಂಬಾ ದುಬಾರಿ

ಬಾಲಿವುಡ್ ಹೀರೋಯಿನ್ ಜಾಕ್ವೆಲಿನ್ ಫರ್ನಾಂಡಿಸ್ ತಿಳಿಯದವರು ಯಾರು ಇಲ್ಲ. ಈ ಚೆಲುವೆ ತನ್ನ ನಟನೆ ಮತ್ತು ನೃತ್ಯದಿಂದ ಎಲ್ಲರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಆದರೆ, ಇತ್ತೀಚೆಗಷ್ಟೇ ತಮ್ಮ ಸಂಭಾವನೆಯನ್ನ ಹೆಚ್ಚಿಸಿಕೊಂಡು ಸುದ್ದಿಯಲ್ಲಿದ್ದಾರೆ. ದೇಸಿ ಮ್ಯೂಸಿಕ್‌ನ ಹೊಸ ಪ್ರಾಜೆಕ್ಟ್ ಗೆ ಸಹಿ ಮಾಡಿದ್ದಾರೆ.

ಹೀಗಾಗಿ ಸಹಿ ಹಾಕಿರುವ ಹೊಸ ಪ್ರಾಜೆಕ್ಟ್ ಸಂಬಂಧಿಸಿ ದುಬೈನ ಸುಂದರ ಸ್ಥಳಗಳಲ್ಲಿ ಈಗಾಗಲೇ ಶೂಟಿಂಗ್ ಮುಗಿದಿದೆ. ಈ ಆಲ್ಬಂನಲ್ಲಿ ನೃತ್ಯ ಮಾಡಲು ಪ್ರತಿ ಹಾಡಿಗೆ 4 ರಿಂದ -5 ಕೋಟಿ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ. ವಿಕ್ರಾಂತ್ ರೋನಾ ದೇಶದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳಲ್ಲಿ ಒಬ್ಬರು ಎಂದು ಬಿಟೌನ್ ಹೇಳಿಕೊಂಡಿದೆ.

error: Content is protected !!