ತುಮಕೂರು: ಮುಡಾ ಹಗರಣದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಹಾಗೂ ರೈಲ್ವೆ ಜಲ ಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ತುಮಕೂರಿನಲ್ಲಿ ಯಶವಂತಪುರ-ತುಮಕೂರು ಮಾರ್ಗ ದಲ್ಲಿ ಸಂಚರಿಸುವ ನೂತನ ಮೆಮೂ ರೈಲಿಗೆ ಚಾಲನೆ ನೀಡಿ ಅವರು ಮಾದ್ಯಮ ಗಳೊಂದಿಗೆ ಮಾತನಾಡಿದರು. ರಾಜ್ಯದ ಪ್ರಕರಣಗಳ ತನಿಖೆಗೆ ಸಂಭಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ ಸಿಬಿಐ ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯುವ ವಿಚಾರವಾಗಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಅವರ ಕಾಲು ಮೇಲೆ ಅವರೇ ಕಲ್ಲು ಹಾಕಿಕೊಳ್ತಿದ್ದಾರೆ ಎಂದರು.
ಸಿದ್ದರಾಮಯ್ಯನಂತ ನುರಿತ ರಾಜಕಾರಣಿ ಹಠಕ್ಕೆ ಬೀಳ್ತಾರೆ ಅಂದ್ರೆ ಕಷ್ಟವಾಗುತ್ತದೆ.
ರಾಜ್ಯ ಸರ್ಕಾರ ಸಿಬಿಐ ಬೇಡಾ ಅಂದಾಗ ಅದರ ಮೇಲೆ ನ್ಯಾಯಾಂಗವಿದೆ ಅಲ್ಲಿ ತನಿಖೆ ನಡೆಯಲಿದೆ. ಸರ್ಕಾರ ದೀಡಿರ್ ತೆಗೆದುಕೊಳ್ಳುವ ತೀರ್ಮಾನದಿಂದ ಮುಂದೆ ಏನಾಗಲಿದೆ…? ಇದು ಆಗಬಾರದಿತ್ತು. ಸಿದ್ದರಾಮಯ್ಯ ನವರು ಅದ್ಯಾಕೆ ಹೀಗೆ ಮಾಡ್ತಾ ಇದ್ದಾರೋ ಗೊತ್ತಿಲ್ಲ. ಒಂದು ತಪ್ಪು ಮಾಡಲು ಹೋಗಿ ನೂರಾರು ತಪ್ಪು ಮಾಡೊದಕ್ಕೆ ಇಂತಹ ಚಿಂತನೆ ಒಳ್ಳೆಯದಲ್ಲ, ಸಿದ್ದರಾಮಯ್ಯ ನಂತಹ ನುರಿತ ರಾಜಕಾರಣಿ ಕೂಡ ಹಠಕ್ಕೆ ಬೀಳ್ತಾರೆ ಅಂದ್ರೆ ಸ್ವಲ್ಪ ಕಷ್ಟವಾಗುತ್ತದೆ. ಅವರು ಅರ್ಥಮಾಡಿಕೊಂಡರೆ ಒಳ್ಳೆದು ಎಂದರು.