ರಾಜ್ಯ ಬಜೆಟ್ ನಲ್ಲಿ ತುಮಕೂರು ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಿರುವುದು ಸ್ವಾಗತಾರ್ಹ: ಟಿ.ಜೆ.ಗಿರೀಶ್

ರಾಜ್ಯ ಸರ್ಕಾರದ ಈ ಬಾರಿಯ 2021-22ನೇ ಸಾಲಿನ ಬಜೆಟ್‌ನಲ್ಲಿ ಮೊದಲಿಗೆ ಶ್ರೀ ಶಿವಕುಮಾರಮಹಾಸ್ವಾಮಿರವರ ಸ್ಮೃತಿವನ ನಿರ್ಮಿಸಲು ಪ್ರಸ್ತಾಪಿಸಿರುವುದು ತುಂಬು ಹೃದಯದಿಂದ ಸ್ವಾಗತಿಸುತ್ತಾ ತುಮಕೂರು ಮತ್ತು ಇತರ ನಾಲ್ಕು ಜಿಲ್ಲೆಗಳಿಗೆ ಕೆರೆ ತುಂಬಿಸಲು ಅನುಧಾನ ನೀಡಿರುವುದು, ಹಾಗೂ ತುಮಕೂರು ಸೇರಿದಂತೆ ಇತರೆ ಎಲ್ಲಾ ಜಿಲ್ಲೆಗಳಿಗೂ ಗೋವು ರಕ್ಷಿಸಲು ಗೋ ಶಾಲೆ ತೆರೆಯಲು ಅನುದಾನ ಹಾಗೂ ತುಮಕೂರಿನಲ್ಲಿ ಎತ್ತಿನ ಹೊಳೆ ಭೂ ಸ್ವಾಧೀನಕ್ಕೆ ನೆರವು ನೀಡುತ್ತೀರುವುದು ಸ್ವಾಗತಾರ್ಥವಾಗಿದೆ.

ಸೋಮವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಬಜೆಟ್ನಲ್ಲಿ ಮಹಿಳೆಯರಿಗೋಸ್ಕರ ರೂ. 37188 ಕೋಟಿಗಳನ್ನು ಸುಮಾರು 60 ಸಾವಿರ ಮಹಿಳೆಯರಿಗೆ ಉದ್ಯೋಗ, 2 ಕೋಟಿ ರೂ.ಗಳವರೆಗೂ ಸಾಲ ಶೇ. ರಂತೆ ಹಾಗೂ ಬಿ.ಎಂ.ಟಿ.ಸಿ.ಯಲ್ಲಿ ವನಿತಾ ಸಂಗಾತಿ ಎಂಬ ಯೋಜನೆಯನ್ನು ಮಹಿಳೆಗಾರಿಗಾಗಿ ರೀಯಾಯಿತಿ ಪಾಸ್, ಪ್ರಸುತಿ ರಜೆಯನ್ನು 6 ತಿಂಗಳಿಗೆ ವಿಸ್ತತರಿಸಿರುವುದು ಸಂತೋಷದ ವಿಷಯ, ಬೆಂಗಳೂರಿಗೆ ನೀಡಿರುವಂತೆ ನಿರ್ಭಯ ಯೋಜನೆಯಡಿ 7500 ಸಿ.ಸಿ.ಕ್ಯಾಮರ ಅಳವಡಿಸಿರುತ್ತೀರುವುದು ಉಪಯುಕ್ತ ಅದೇ ರೀತಿ ಇಡೀ ರಾಜ್ಯಕ್ಕೆ ಅಳವಡಿಸುವುದು ಸೂಕ್ತವಾಗಿದ್ದು, ರಾಜ್ಯದ ಪ್ರವಾಸಿಗರಿಗಾಗಿ ಅಯೋಧ್ಯಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಯಾತ್ರಿನಿವಾಸ್ ಕಟ್ಟಡದ ಯೋಜನೆಯು ಬಹಳ ಉತ್ತಮವಾಗಿದೆ.

ಕರ್ನಾಟಕ ರಾಜ್ಯವು ಜಿ.ಎಸ್.ಟಿ ಸಂಗ್ರಹಣೆಯಲ್ಲೇ ಎರಡನೇ ಸ್ಥಾನ ಪಡೆದಿರುವುದು ಬಹಳ ಸಂತೋಷದ ವಿಷಯ, ವಾಣ ಜ್ಯ ಮತ್ತು ಕೈಗಾರಿಕೆ ಹಾಗೂ ಇತರೆಯಿಂದ ಸುಮಾರು 76473 ಕೋಟಿ ಸಂಗ್ರಹಣೆ ಬಜೆಟ್ ಅಂದಾಜು ಶೇ 30 ರಷ್ಟು  ಸಂಗ್ರಹಿಸುತ್ತೀರುವುದು ಹೆಮ್ಮೆಯ ವಿಷಯ ಹಾಗೆಯೇ ಜಿ.ಎಸ್.ಟಿ.ಪೂರ್ವ ಲೆಕ್ಕ ಪರಿಶೋಧನೆಗೆ ಕರಸಮಾಧನ್ 2021ಯೋಜನೆ ಜಾರಿ ಮಾಡುವುದು ಸ್ವಾಗತಾರ್ಥವಾಗಿದೆ. ಒಟ್ಟಾರೆ ತುಮಕೂರಿಗೆ ನಿರಿಕ್ಷಿಸಿದಂತೆ ಹಲವು ವರ್ಷದಿಂದ ನಾವು ಕೇಳುತ್ತೀರುವ ಹಲಸಿನ ಪಾರ್ಕ್, ತೆಂಗಿನ ಪಾರ್ಕ್, ಟೆಕ್ಸ್ಟೈಲ್ ಪಾರ್ಕ್, ಮಧುಗಿರಿ ಏಕಶೀಲಾ ಬೆಟ್ಟಕ್ಕೆ ರೋಪ್ ವೇ ಮಾರ್ಗ ಹಾಗೂ ದಾವಣಗೆರೆತುಮಕೂರು ಮತ್ತು ರಾಯದುರ್ಗತುಮಕೂರು ರೈಲು ಮಾರ್ಗ ಜೋಡಣೆ ಹಾಗೂ  ಯೋಜನೆಗಳು ಹಾಗೆಯೇ ಉಳಿದಿವೆ ಇದನ್ನು ಮುಂದಿನ ಜಜೆಟ್ನಲ್ಲಿ ನಿರಿಕ್ಷೀಸುತ್ತೆವೆ,

ಒಟ್ಟಾರೆ ಆರೋಗ್ಯ ಕ್ಷೇತ್ರ, ವಿದ್ಯಾಕ್ಷೇತ್ರ, ಕೃಷಿನೀರಾವರಿಗೆ ಆದ್ಯತೆ ನೀಡಿರುವುದು ಸಮಾದನಕರ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷರಾದ ಟಿ.ಜೆ.ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!