ಮುಸುರೆ ಮತ್ತು ಎಂಜಲು ತಿನ್ನಲು ಬರಬೇಡಿ: ತುಮಕೂರು ವಿವಿ ಹಾಸ್ಟೆಲ್ ನಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ಅವಮಾನ.

ತುಮಕೂರು: “ಅನ್ನಂ ಪರಬ್ರಹ್ಮ ಸ್ವರೂಪಂ” ಎಂದು ಭಾವಿಸುತ್ತೆವೆ ಜೊತೆಗೆ ಹಸಿದು ಬಂದ ಹೊಟ್ಟೆಗೆ ಊಟ ಹಾಕಿ ಸತ್ಕರಿಸುವುದು ಧಾನಗಳಲ್ಲೆ ಅತ್ಯಂತ ಶ್ರೇಷ್ಠವಾದದ್ದು ಎಂದು ಪುರಾಣಗಳಲ್ಲಿದೆ. ಇದನ್ನೆ ನಡೆದಾಡುವ ದೇವರು ಪರಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು ತ್ರಿವಿಧ ದಾಸೋಹದ ಮೂಲಕ ಜಗತ್ತಿಗೆ ಸಾರಿದರು. ಆದ್ರೆ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿಯ ಬಾಯ್ಸ್ ಹಾಸ್ಟೆಲ್ ನಲ್ಲಿ  ತುತ್ತು ಅನ್ನಕ್ಕೂ ಹಿರಿಯ ವಿದ್ಯಾರ್ಥಿಗಳಿಗೆ ಅವಮಾನಿಸಲಾಗಿದೆ.

 ಸರ್ಕಾರ ಹಾಸ್ಟೆಲ್  ಗಳ ನಿರ್ವಹಣೆಗೆ  ಪ್ರತಿ ವರ್ಷ ಕೊಟ್ಯಾಂತರ ಹಣವನ್ನು ವಿನಿಯೋಗಿಸುತ್ತಿದೆ. ಇಷ್ಟೇ ಅಲ್ಲದೆ ಜನ ಸಾಮಾನ್ಯರು, ಸಂಘ ಸಂಸ್ಥೆಗಳು ಕೂಡ ಸರ್ಕಾರಿ ಹಾಸ್ಟೆಲ್ ಗಳಿಗೆ ವಿವಿಧ ಸೌಲಭ್ಯಗಳನ್ನ ಒದಗಿಸುತ್ತಿದ್ದಾರೆ. ಇದಲ್ಲದೆ ಊಟಕ್ಕೆ ಕೊರತೆಯಾದ್ರೆ ಸಿದ್ದಗಂಗಾ ಮಠವು ಕೂಡ ಅದಕ್ಕೆ ಪೂರಕ ವ್ಯವಸ್ಥೆಯನ್ನ ಕಲ್ಪಿಸುತ್ತದೆ.

ಸೂಚನಾ ಫಲಕ

ಈಗಿದ್ದೂ ತುಮಕೂರು ವಿವಿ ಸ್ನಾತಕೋತ್ತರ ಪದವಿ ಬಾಯ್ಸ್ ಹಾಸ್ಟೆಲ್ ನಲ್ಲಿ ರಾತ್ರಿ ಹೊತ್ತು ಹಸಿದು ಊಟಕ್ಕೆ ಬರುವ ಹಿರಿಯ ವಿದ್ಯಾರ್ಥಿಗಳಿಗೆ  ಮುಸುರೆ ಮತ್ತು ಎಂಜಲು ತಿನ್ನಲು ಬರಬೇಡಿ, ರಾತ್ರಿ ಹಾಸ್ಟೆಲ್ ನಲ್ಲಿ ಉಳಿದುಕೊಳ್ಳಬೇಡಿ ಎಂದು ಸೂಚನಾ ಪತ್ರ ಹಾಕುವ ಮೂಲಕ ಹಾಸ್ಟೆಲ್ ನ ವಾರ್ಡನ್ ಹಿರಿಯ ವಿದ್ಯಾರ್ಥಿಗಳಿಗೆ ತುತ್ತು ಅನ್ನಕ್ಕೂ ಅಂಗಿಸಿ ಅವಮಾನ ಮಾಡಿದ್ದಾರೆ.

ಹಾಸ್ಟೆಲ್ ನ ಆವರಣದಲ್ಲಿ ವಾರ್ಡನ್ ಬರೆದು ಹಾಕಿರುವ ಸೂಚನಾ ಫಲಕ ಇದೀಗ ಎಲ್ಲಡೆ ವೈರಲ್ ಆಗಿದೆ. ಸೂಚನಾ ಪತ್ರದಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ಅವಹೇಳನ ಮಾಡಿರುವುದು ಎಲ್ಲಾ ವರ್ಗದ ಹಾಸ್ಟೆಲ್ ವಿದ್ಯಾರ್ಥಿಗಳ ಅಸಮಧಾನಕ್ಕೆ ಕಾರಣವಾಗಿದೆ. ಈ ನೋಟಿಸ್ ಇಡೀ ವಿವಿಯ ಹೆಸರಿಗೆ ಮಸಿ ಬಳಿಯವಂತಿದ್ದು ಶೈಕ್ಷಣಿಕ ವ್ಯವಸ್ಥೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಸಿದ್ದಿ ಪಡೆದಿರುವ ತುಮಕೂರು ವಿವಿಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾದ್ಯತೆ ಇದೆ.

ಈ ಬಗ್ಗೆ ಸಾರ್ವಜನಿಕರು ಅಸಮಧಾನ ವ್ಯಕ್ತ ಪಡಿಸುತ್ತಿದ್ದು ಹಾಸ್ಟೆಲ್ ನಿರ್ವಹಣೆಗೆ ಬರುವ ಸರ್ಕಾರದ ಹಣವನ್ನೆಲ್ಲ ವಾರ್ಡನ್ ಗಳು ಕೊಳ್ಳೆ ಹೊಡೆದು ತಿನ್ನುತ್ತಾರೆ. ಆದರೆ ಹಸಿದು ಬಂದ ವಿದ್ಯಾರ್ಥಿಗಳಿಗೆ ಸರ್ಕಾರದ ಹಣದಲ್ಲಿ ಕನಿಷ್ಠ ಒಂದು ಹೊತ್ತು ಊಟ ಹಾಕುವ ಯೋಗ್ಯತೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಹಿರಿಯ ವಿದ್ಯಾರ್ಥಿಗಳಿಗೆ ಅವಮಾನಿಸಿರುವ ವಾರ್ಡನ್ ನ್ನ ಕೆಲಸದಿಂದ ಅಮಾನತು ಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

error: Content is protected !!