ಕೊರಟಗೆರೆ:‌ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯನ್ನ ಅಪರಿಚಿತರು ರಾತ್ರೋ ರಾತ್ರಿ ಪ್ರತಿಸ್ಠಾಪಿಸಿದ್ದನ್ನ ಅಧಿಕಾರಿಗಳು ಬೆಳಕಾಗುವಷ್ಟರಲ್ಲಿ ತೆರವುಗೊಳಿಸಿದ್ದು ಮರು ಸ್ಥಾಪಿಸುವಂತೆ ಒತ್ತಾಯಿಸಿ ವಾಲ್ಮೀಕಿ ಸಮಾಜ ಪ್ರತಿಭಟನೆಗೆ ಮುಂದಾಗಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಎಸ್ಎಸ್ಆರ್ ವೃತದಲ್ಲಿ ಅಪರಿಚಿತರು ರಾತ್ರೋರಾತ್ರಿ ಪ್ರತಿಷ್ಠಾಪಿಸಿದ್ದ ವಾಲ್ಮೀಕಿ ಪುತ್ಥಳಿಯನ್ನ ಮಾಹಿತಿ ತಿಳಿದ ಕೂಡಲೇ ಬೆಳಗಾಗುವಷ್ಟರಲ್ಲಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಪ್ರತಿಷ್ಠಾಪನೆಗೊಂಡ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನ ಅಧಿಕಾರಿಗಳು ತೆರವುಗೊಳಿಸಿದ್ದನ್ನ ಖಂಡಿಸಿ ವಾಲ್ಮೀಕಿ ಸಮಾಜ ಮುಖಂಡರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಸುರಿಯುವ ಮಳೆಯಲ್ಲೇ ಸುಮಾರು ಸತತ 6 ಗಂಟೆಗಳಿಂದ ಧರಣಿ ನಡೆಸುತ್ತಿರುವ ವಾಲ್ಮೀಕಿ ಸಮಾಜ (ನಾಯಕ ಸಮುದಾಯ) ದ ಮುಖಂಡರು, ಮಹಿಳೆಯರು, ಮಕ್ಕಳು, ಅಹೋರಾತ್ರಿ ಧರಣಿ ನಡೆಸಿ ಮಹರ್ಷಿ ವಾಲ್ಮೀಕಿ ಪುತ್ಥಳಿಯ ಮರು ಸ್ಥಾಪನೆಗೆ ಪಟ್ಟುಹಿಡಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಎಸ್ ಪಿ, ಎಎಸ್ಪಿ, ಡಿವೈಎಸ್ ಪಿ, ಸ್ಥಳೀಯ ಸಬ್ ಇನ್ಸ್ಪೆಕ್ಟರ್ ಸರ್ಕಲ್ ಇನ್ಸ್ಪೆಕ್ಟರ್ ಸೇರಿದಂತೆ ತಹಶಿಲ್ದಾರರ್ ದಿಡೀರ್ ಭೇಟಿ ನೀಡಿ ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here