ಗುಬ್ಬಿ. ತಾಲೂಕು ಕಛೇರಿಯಲ್ಲಿ ಬ್ರೋಕರ್ ಹಾವಳಿ ನಿಯಂತ್ರಿಸಿ.ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ.ಶಾಸಕ ಮಸಾಲೆ ಜಯರಾಂ.

ಗುಬ್ಬಿ ತಾಲೂಕು ಕಛೇರಿಯ ಕಂದಾಯ ಇಲಾಖೆಯ ವಿವಿಧ ಶಾಖೆಗಳಿಗೆ ಮತ್ತು ನೊಂದಣಾಧಿಕಾರಿ ಕಛೇರಿಗೆ ಬೇಟಿ ನೀಡಿ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು ಇಂದು ಸಾರ್ವಜನಿಕರ ಸಮಸ್ಯೆ ಗಳು ತಾಲೂಕು ಕಛೇರಿಯಲ್ಲಿ ಬಗೆಹರಿಯುತ್ತಿಲ್ಲ ಬದಲಾಗಿ ಬ್ರೋಕರ್ ಮೂಲಕ ಎಲ್ಲಾ ಕೆವಸಗಳು ನೆಡೆಯುತ್ತವೆ ಎಃದರೆ ನಮ್ಮ ತಾಲೂಕು ಆಡಳಿತ ಎಷ್ಟರ ಮಟ್ಟಿಗೆ ನೆಡೆಯುತ್ತಿದೆ ಎಂಬುದು ತಿಳಿಯುತ್ತದೆ. ಕಂದಾಯ ಇಲಾಖೆ ಮತ್ತು ನೊಂದಣಾಧಿಕಾರಿ ಕಛೇರಿಯಲ್ಲಿ ಹೆಚ್ಚಿನ ಆಕ್ರಮಗಳು ನೆಡೆಯುತ್ತಿವೆ ಎಂದು ಸಾಕಷ್ಟು ದೂರುಗಳು ಬರುತ್ತಿವೆ ಈ ಲೋಪಗಳನ್ನು ಸರಿಪಡಿಸಿ ಕೊಳ್ಳಲು ಪ್ರಥಮವಾಗಿ ಅಧಿಕಾರಿಗಳಿಗೆ ಹಾಗೂ ಆಯಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು ಪರಿಸ್ಥಿತಿ ಮುಂದುವರೆದರೆ ಶಿಸ್ತು ಕ್ರಮಕ್ಕೆ ಮುಂದಾಗಬೇಕುತ್ತದೆ ಎಂದರು.

ಶೀಘ್ರದಲ್ಲೇ ಬಗರುಹುಕಂ ಸಮಿತಿ ರಚನೆ. ರೈತರಿಗೆ ಅನುಭವದಲ್ಲಿರುವ ಸರ್ಕಾರದ ಗೋಮಳದ ಜಮೀನು ಮಂಜೂರಾತಿ ಗಾಗಿ ಬಗರುಹುಕುಂ ಸಮಿತಿಯನ್ನು ಶೀಘ್ರದಲ್ಲೇ ರಚಿಸಿ ಭೂಮಿ ಮಂಜೂರಾತಿಗೆ ಕ್ರಮವಹಿಸಲಾಗುವುದು ಈ ಸಂಬಂಧ ಈಗಾಗಲೇ ತಹಶೀಲ್ದಾರ್ ಗೆ ಸೂಚಿಸಿದ್ದು ತುರ್ತಾಗಿ ಸಮಿತಿ ರಚಿಸಿ ರೈತರಿಗೆ ಸಾಗುವಳಿ ಚೀಟಿ ವಿತರಣೆ ಗೆ ಕ್ರಮವಹಸಲಾಗುವುದು ಎಂದು ಭರವಸೆ ನೀಡಿದರು.

ಒಕ್ಕಲಿಗ ಅಭಿವೃದ್ಧಿ ನಿಗಮ ಸ್ವಾಗತರ್ಹ.ರಾಜ್ಯ ದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನವರು ನಿಗಮ ಮಂಡಳಿ ಸ್ಥಾಪಿಸಿ 500 ಕೋಟಿ ಅನುದಾನವನ್ನು ನೀಡುವ ಮೂಲಕ ಸಮುದಾಯ ಅಭಿವೃದ್ಧಿ ಗೆ ಹೆಚ್ಚಿನ ಒತ್ತು ನೀಡಿರುವುದು ಬಹಳ ಸಂತೋಷದ ಸಂಗತಿ ಅವರಿಗೆ ಸಮುದಾಯದ ಪರವಾಗಿ ನಾನು ಅವರಗೆ ಅಭಿನಂದನಾರ್ಹನು ಎಂದು ಮುಖ್ಯಮಂತ್ರಿ ಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆರ್ಥಿಕ ಸಂಕಷ್ಟದಲ್ಲೂ ಸಮಾಧಾನಕರ ಬಜೆಟ್ ನೀಡಿದ್ದಾರೆ. ಕೊರೋನಾ ಸಮಯದಲ್ಲಿ ಇಡೀ ಜಗತ್ತು ಆರ್ಥಿಕ ಪರಿಸ್ಥಿತಿ ಯಲ್ಲಿ ಸಿಲುಕ್ಕಿರುವ ಸಮಯದಲ್ಲೂ ಸಹ ನಮ್ಮ ಬಿಜೆಪಿ ಸರ್ಕಾರ ಜನಪರ ಬಜೆಟ್ ನೀಡಿದೆ.ಎಲ್ಲಾ ಜಿಲ್ಲೆ ಗೂ ಸಹ ಅಭಿವೃದ್ಧಿಗೆ ಅನುದಾನ ನೀಡಿರುವ ಮುಖ್ಯಮಂತ್ರಿಗಳು ಆರ್ಥಿಕ ಪರಿಸ್ಥಿತಿ ಎದುರಾದ ಸಮಯದಲ್ಲೂ ಸಹ ಜನತೆಗೆ ಒಳ್ಳೆಯ ಜನಪರ ಬಜೆಟ್ ನೀಡಿದ್ದಾರೆ . ತುಮಕೂರು ಜಿಲ್ಲೆಗೆ ತೆಂಗು ಪಾರ್ಕ್ ಸ್ಥಾಪನೆಗೆ ಒತ್ತು ನೀಡಿರುವುದು ಬಹಳ ಸಂತಸದ ಸಂಗತಿ ಎಂದರು. ಈ ವೇಳೆಯಲ್ಲಿ ಬಿಜೆಪಿ ಮುಖಂಡರು. ಕಾರ್ಯಕರ್ತರು ಗಳು ಹಾಜರಿದ್ದರು.

error: Content is protected !!