ಗುಬ್ಬಿ. ಅಕ್ರಮ ಮರಳು ಸಾಗಾಣಿಕೆ ಕ್ರಮವಹಿಸದ ಸಿ.ಎಸ್.ಪುರ ಪೊಲೀಸರು.

ಗುಬ್ಬಿ ತಾಲ್ಲೂಕಿನ ಸಿ.ಎಸ್. ಪುರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮ ಮರಳು ಸಾಗಾಣಿಕೆ ದಂಧೆ ಪ್ರಾರಂಭ ವಾಗಿದೆ.ತಡರಾತ್ರಿ 12 ಗಂಟೆಯ ಸಮಯದಲ್ಲಿ ಮತ್ತು ಮುಂಜಾನೆ 4ಗಂಟೆಯ ಸಮಯದಲ್ಲಿ ಮರಳನ್ನು ಜನ್ನೇನಹಳ್ಳಿ ಶಿಂಷಾ ನದಿಯ ತೊರೆಯ ಭಾಗದಲ್ಲಿ ಮರಳು ತೆಗೆದು ಹೊರ ಭಾಗಗಳಿಗೆ ಸಾಗಿಸುತ್ತಿದ್ದಾರೆ ಎಂದು ಆರೋಪ ಕೇಳಿಬರುತ್ತಿದೆ.

ನಂಬರ್ ಪ್ಲೇಟ್ ಇಲ್ಲದ ಟ್ರಾಕ್ಟರ್ ಮೂಲಕ ಮರಳು ಸಾಗಿ ಸುವ ಮಾಲೀಕರು. ತಡರಾತ್ರಿ ಯಲ್ಲಿ ಮರಳು ಸಾಗಿಸುವ ಟ್ರಾಕ್ಟರ್ ಮಾಲೀಕರು ತಮ್ಮ ವಾಹನಗಳ ನೊಂದಣಿ ಸಂಖ್ಯೆ ಇಲ್ಲದ ಟ್ರಾಕ್ಟರ್ ಮೂಲಕ ಮರಳು ಸಾಗಿಸುತ್ತಿದ್ದಾರೆ ಯಾವುದೇ ಭಯವಿಲ್ಲದಂತೆ ವೇಗವಾಗಿ ಚಲನೆ ಮಾಡುವ ಈ ಟ್ರಾಕ್ಟರ್ ಚಾಲಕರು ವೇಗದ ಚಾಲನೆಯಲ್ಲಿ ಅಫಘಾತ ಸಂಭವಿಸಿದರೆ ವಾಹನದ ಮಾಲೀಕರ ವಿಳಾಸ ಪತ್ತೆಯಾಗಬಾರದೆಂಬ ಉದ್ದೇಶ ದಿಂದ ಮರಳು ಸಾಗಿಸುವ ಎಲ್ಲಾ ಟ್ರಾಕ್ಟರ್ ಮಾಲೀಕರು ನಂಬರ್ ಪ್ಲೇಟ್ ಹಾಕಿಸದೆ ಗಾಡಿಗಳನ್ನು ಚಾಲನೆ ಮಾಡುತ್ತಿದ್ದಾರೆ.

ದುಬಾರಿ ಬೆಲೆಗೆ ಮರಳು ಮರಾಟ.ಅಕ್ರಮ ವಾಗಿ ಶಿಂಷಾ ನದಿಯಲ್ಲಿ ಮರಳು ಸಾಗಿಸುವ ದಂಧೆಕೋರರು ದುಬಾರಿ ಬೆಲೆಗೆ ಮರಳು ಮಾರಾಟ ಕ್ಕೆ ಮುಂದಾಗಿದ್ದಾರೆ ಪ್ರತಿ ಟ್ರಾಕ್ಟರ್ ಲೋಡಿಗೆ ಸುಮಾರು 5 ಸಾವಿರ ನಿಗದಿ ಮಾಡಿದ್ದು ಗ್ರಾಮಗಳ ಅಂತರ ನೋಡಿ ದರವನ್ನು ನಿಗದಿಪಡಿಸುತ್ತಿದ್ದಾರೆ.ಇನ್ನೂ ಸಾರ್ವಜನಿಕರು ತಮ್ಮ ಕಟ್ಟಡ ಗಳ ಕಾಮಗಾರಿ ಗೆ ಇವರು ಹೇಳಿದಷ್ಟು ಬೆಲೆ ನೀಡಿ ಮರಳು ಪಡೆಯಬೇಕಿದೆ.

ಮರಳು ಸಾಗಣಿಕೆಗೆ ಪೊಲೀಸ್ ಇಲಾಖೆ ಸಾಥ್? ದಿನ ನಿತ್ಯ ಜನ್ನೇನಹಳ್ಳಿ. ಶನಿವಾರನಪಾಳ್ಯ.ಭಾಗದಿಂದ ಹೊರಭಾಗದ ಗ್ರಾಮಗಳಿಗೆ ಸಾಗಿಸುತ್ತೀರುವ ಮರಳು ದಂಧೆಯಲ್ಲಿ ತೊಡಗಿರುವ ವ್ಯಕ್ತಿ ಗಳಿಗೆ ಸ್ಥಳೀಯ ಕೆಲ ಪೊಲೀಸ್ ಸಿಬ್ಬಂದಿಗಳು ಶಾಮೀಲಾಗಿ ಮರಳು ಸಾಗಿಸಲು ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ತಡರಾತ್ರಿಯಲ್ಲಿ ಯಾರ ಭಯವಿಲ್ಲದಂತೆ ಮರಳು ಹೊಡೆಯುವುದನ್ನು ಗಮನಿಸಿದರೆ ಸ್ಥಳೀಯ ಸಿ.ಎಸ್‌.ಪುರ ಪೊಲೀಸ್ ಇಲಾಖೆ ಯ ಕೆಲ ಸಿಬ್ಬಂದಿ ಗಳು ಇವರೊಂದಿಗೆ ಶಾಮೀಲಾಗಿ ರುವ ಅನುಮಾನ ಮೂಡುತ್ತದೆ.ಸ್ಥಳೀಯರು ಯಾರಾದರೂ ಇವರಿಗೆ ಪ್ರಶ್ನೆ ಮಾಡಿದರೆ ಪ್ರತಿ ತಿಂಗಳು ಪ್ರತಿ ಟ್ರಾಕ್ಟರ್ ಗೆ ಇಂತಿಷ್ಟು ಹಣವನ್ನು ಪೊಲೀಸ್ ಸಿಬ್ಬಂದಿ ಗೆ ಹಣ ನೀಡಿ ಮರಳು ಸಾಗಿಸುತ್ತೆವೆ ಎಂದು ಹೇಳುತ್ತಾರೆ.

Leave a Reply

Your email address will not be published. Required fields are marked *

error: Content is protected !!