ಡಿಕೆ ರವಿ ತಂದೆ ಕರಿಯಪ್ಪ ನಿಧನ.

ಕುಣಿಗಲ್: ಐಎಎಸ್ ಅಧಿಕಾರಿ ದಿವಂಗತ ಡಿ ಕೆ ರವಿ ತಂದೆ ಕರಿಯಪ್ಪ (75) ಹೃದಯಾಘಾತದಿಂದ ಸೋಮವಾರ ರಾತ್ರಿ ಸ್ವಗ್ರಾಮ ದೊಡ್ಡ ಕೊಪ್ಪಲು ಗ್ರಾಮದಲ್ಲಿ ಮೃತಪಟ್ಟಿದ್ದಾರೆ.

ತಾಲೂಕಿನ ಹುಲಿಯೂರು ದುರ್ಗ ಹೋಬಳಿ ದೊಡ್ಡಕೊಪ್ಪಲು ಗ್ರಾಮದಲ್ಲಿ ಸಂಜೆ ಎಂದಿನಂತೆ ಮನೆ ಮುಂದೆ ಕುಳಿತ್ತಿದ್ದಾಗ ಕುಸಿದು ಬಿದ್ದ ಕರಿಯಪ್ಪ ಅವರನ್ನು ಗ್ರಾಮದ ಸದಸ್ಯರು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ.
ಆದರೆ ಅಷ್ಟರಲ್ಲಾಗಲಿ ಕರಿಯಪ್ಪ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ದಕ್ಷ ಅಧಿಕಾರಿಯಾಗಿದ್ದ ಮಗನನ್ನ ಕಳೆದುಕೊಂಡ ಗೌರಮ್ಮ ಅವರಿಗೆ ಇದೀಗ ಗಂಡನನ್ನು ಕಳೆದುಕೊಂಡಿರುವುದು ಬರ ಸಿಡಿಲು ಬಡಿದಂತಾಗಿದೆ.

ಮೃತ ಕರಿಯಪ್ಪ ಅವರಿಗೆ ಪತ್ನಿ ಗೌರಮ್ಮ, ಪುತ್ರ ರಮೇಶ್ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ದೊಡ್ಡ ಕೊಪ್ಪಲು ಗ್ರಾಮದಲ್ಲಿ ಮಂಗಳವಾರ ಅಂತ್ಯಸಂಸ್ಕಾರ ನೆರವೇರಲಿದೆ.
ಶಾಸಕ ಡಾ.ಎಚ್.ಡಿ.ರಂಗನಾಥ್, ಮಾಜಿ ಸಚಿವ ಡಿ.ನಾಗರಾಜಯ್ಯ, ಪಿಎಲ್ ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ ಕೃಷ್ಣಕುಮಾರ್, ಬಿಜೆಪಿ ಮುಖಂಡ ಎಚ್.ಡಿ.ರಾಜೇಶ್ ಗೌಡ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!