ತೆಲುಗು ಸಿನೆರಂಗದ ದೊಡ್ಡಣ್ಣನ ಸ್ಥಾನ ನನಗೆ ಬೇಡ: ಚಿರಂಜೀವಿ

ಹೈದರಬಾದ್ : ಜನವರಿ 02: ಮೆಗಾಸ್ಟಾರ್ ಚಿರಂಜೀವಿ ಎಲ್ಲರು ಬೆರಗಾಗುವಂತೆ ಇಂದು ಹೇಳಿಕೆ ನೀಡಿದ್ದಾರೆ. ಸಿನೆಮಾ ರಂಗದ ಕಾರ್ಮಿಕರ ಪರವಾಗಿ ನಿಲ್ಲಲು ನಾನು ಸದಾ ಸಿದ್ದ. ಆದರೆ ತೆಲುಗು ಸಿನಿರಂಗದ ದೊಡ್ಡಣ್ಣನ ಪಟ್ಟ ನನಗೆ ಬೇಡ,ಇಬ್ಬರ ನಡುವೆ ನಡೆಯುವ ವೈಯಕ್ತಿಕ ಪಂಚಾಯತಿಗಳನ್ನು ಮಾಡಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಚಿತ್ರರಂಗದ ಕಾರ್ಮಿಕರಿಗೆ ಯಾವುದೇ ರೀತಿಯ ಸಮಸ್ಯೆ ಎದುರಾದಲ್ಲಿ ಮುತುವರ್ಜಿ ವಹಿಸುತ್ತೇನೆ. ಮುಂದೆಯೂ ಕಾರ್ಮಿಕರಿಗಾಗಿ ಒಳ್ಳೊಳ್ಳೆ ಯೋಜನೆಗಳನ್ನ ತರುವುದಾಗಿ ಸ್ಪಷ್ಟಪಡಿಸಿದರು.

ಚಿರಂಜೀವಿಯವರ ಈ ಮಾತಿನಿಂದಾಗಿ ತೆಲುಗು ಚಿತ್ರರಂಗದಲ್ಲಿ ದೊಡ್ಡಣ್ಣನಾಗಿ ನಿಲ್ಲಬೇಕೆನ್ನುವವರ ನಿರೀಕ್ಷೆಗೆ ನೀರೆರೆದಂತಾಗಿದೆ. ಸದ್ಯ ಇಂಡಸ್ಟ್ರಿಯಲ್ಲಿ ಮುಂದೆ ಯಾರು ದೊಡ್ಡಣ್ಣ ಎಂಬುದೇ ಯಕ್ಷಪ್ರಶ್ನೆಯಾಗಿದೆ.

error: Content is protected !!