ರಾಧೇಶ್ಯಾಮ್ ಸಿನಿಮಾಗೆ ಒಟಿಟಿಯಿಂದ ನೂರಾರು ಕೋಟಿ ಆಫರ್..!

ಜನವರಿ: ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ಲವ್ ಸ್ಟೋರಿ ಸಿನಿಮಾ ‘ರಾಧೇಶ್ಯಾಮ್’. ರಾಧಾಕಷ್ಣ ಕುಮಾರ್ ನಿರ್ದೇಶನದ ಈ ಚಿತ್ರ ಜನವರಿ 14 ರಂದು ಬಿಡುಗಡೆಯಾಗಲಿದೆ. ಕರೋನಾ ಹಿನ್ನೆಲೆಯಲ್ಲಿ ‘ಆರ್‌ಆರ್‌ಆರ್’ ಚಿತ್ರದಂತೆ ಈ ಚಿತ್ರವೂ ಮುಂದೂಡಲ್ಪಡುತ್ತದೆ ಎಂಬ ಊಹಾಪೋಹಗಳು ಹಬ್ಬಿದ್ದವು. ಆದರೇ ಚಿತ್ರತಂಡ ಅದನ್ನು ನಿರಾಕರಿಸಿತು. ಈಗಾಗಲೇ ನಿಗದಿಪಡಿಸಿರುವ ದಿನಾಂಕದಂದು ಬಿಡುಗಡೆ ಮಾಡಲಾಗುವುದು ಎಂದು ಚತ್ರತಂಡ ಸ್ಪಷ್ಟಪಡಿಸಿತ್ತು.

ಇತ್ತೀಚೆಗಷ್ಟೇ ಚಿತ್ರಕ್ಕೆ ಒಟಿಟಿಯಿಂದ ಭಾರೀ ಆಫರ್ ಬಂದಿದೆ ಎಂಬ ಮಾತುಗಳು ಕೇಳಿ ಬಂದಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಮತ್ತೆ ನಿರ್ಬಂಧಗಳನ್ನು ಹೇರಲು ಆರಂಭಿಸಿರುವುದು ಗೊತ್ತಿರುವ ಸಂಗತಿ. ಇದರಿಂದಾಗಿ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆಗೆ ಹಿನ್ನಡೆಯಾಗುತ್ತಿವೆ. ಜನವರಿ 14 ರಂದು ‘ರಾಧೇಶ್ಯಾಮ್’ ಬಿಡುಗಡೆಯಾಗಲಿದೆ. ಆದರೆ, ನಿರ್ಬಂಧಗಳು ಬಿಗಿಯಾದರೆ ಚಿತ್ರ ಬಿಡುಗಡೆ ಮುಂದೂಡುವ ಸಾಧ್ಯತೆ ಇದೆ.

ಇದಕ್ಕಾಗಿಯೇ ಪ್ರಮುಖ OTT ಕಂಪನಿಯು ‘ರಾಧೇಶ್ಯಾಮ್’ ಚಿತ್ರ ನಿರ್ಮಾಪಕರಿಗೆ 350 ಕೋಟಿ ರೂ.ಗಳನ್ನು ಆಫರ್ ಮಾಡಿದೆ. ಆದರೆ, ಚಿತ್ರ ನಿರ್ದೇಶಕರಿಗೆ ಒಟಿಟಿಯಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದೆ. ಆದರೆ, ಕನಿಷ್ಠ 450 ಕೋಟಿ ರೂ. ಆಫರ್ ಬಂದರೆ ಸಿನಿಮಾ ಹಕ್ಕುಗಳನ್ನು ಮಾರಾಟ ಮಾಡುವ ಸಾಧ್ಯತೆ ಇದೆ ಎನ್ನುತ್ತಿವೆ ಸಿನಿ ಮೂಲಗಳು. ಒಂದೆಡೆ ಕರೋನಾ ಆರ್ಭಟ ಮತ್ತೊಂದೆಡೆ OTT ಆಫರ್‌ ‘ರಾಧೇಶ್ಯಾಮ್’ ಬಿಡುಗಡೆಗೊಳಿಸಲು ಚಿತ್ರತಂಡ ಗೊಂದಲದಲ್ಲಿದೆ.

error: Content is protected !!