ಯಡಿಯೂರಿನಿಂದ ಯಡಿಯೂರಪ್ಪ ಮನೆಗೆ ಪಾದಯಾತ್ರೆ

ತುಮಕೂರು: ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವಂತೆ ಒತ್ತಾಯಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಯಡಿಯೂರಿನಿಂದ ಯಡಿಯೂರಪ್ಪ ಮನೆವರೆಗೆ ಪಾದಯಾತ್ರೆ ಜನಾಂದೋಲವನ್ನು ಮಾ.19ರಿಂದ 22ರವರೆಗೆ ನಡೆಸಲಾಗುವುದು.

ಲೋಕಾಯುಕ್ತ ಬಲಹೀನಗೊಂಡ ನಂತರ ಮಿತಿ ಮೀರಿದ ಭ್ರಷ್ಟಾಚಾರದಿಂದ ಖಜಾನೆ ಖಾಲಿಯಾಗಿದ್ದು, ಖಜಾನೆ ತುಂಬುಲು ಬಡವರ ಮೇಲೆ ಯಥೇಚ್ಛವಾದ ತೆರಿಗೆ ವಿಧಿಸಿ ಜನರ ಬದುಕನ್ನು ದುಸ್ತರವಾಗಿಸಿದ್ದು, ಕಳೆದ ಚುನಾವಣೆಗೂ ಮುಂಚೆ ಯಡಿಯೂರಪ್ಪ ಅವರು ನೀಡಿದ್ದ ಭರವಸೆಯನ್ನು ಈಡೇರಿಸುವಂತೆ  ಒತ್ತಾಯಿಸಿ ಪಾದಯಾತ್ರೆ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.

ಪಾದಯಾತ್ರೆಯನ್ನು ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆರ್ಶೀವಾದದೊಂದಿಗೆ ನ್ಯಾ.ಸಂತೋಷ್‌ಹೆಗ್ಡೆ, ಮಾಜಿ ಉಪ ಲೋಕಾಯುಕ್ತ ಸುಭಾಶ್.ಬಿ.ಅಡಿ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ, ಧಾರವಾಡ ನಿವೃತ್ತ ನ್ಯಾಯಮೂರ್ತಿ ಸಂಗಪ್ಪ ಮಿಟ್ಟಲ್ಕೋಡ್, ಕೆ.ಆರ್.ಎಸ್.ಅಧ್ಯಕ್ಷ ರವಿಕೃಷ್ಣರೆಡ್ಡಿ ಅವರು ಜಾಥಾ ಉದ್ಘಾಟಿಸಲಿದ್ದು, ರಾಜ್ಯಾದ್ಯಂತ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!