ಹೇಮಾವತಿ ಇಂಜಿನಿಯರ್ ಕುಟುಂಬ ಸಮೇತ ನಾಲೆಗೆ ಹಾರಿ ಆತ್ಮಹತ್ಯೆ.

ತುಮಕೂರು: ಒಂದೇ ಕುಟುಂಬದ ಮೂವರು ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಡೆದಿದೆ.

ತಾಲ್ಲೂಕಿನ ಸಾಗರನಹಳ್ಳಿ ಗೇಟ್ ಬಳಿ ಕಳೆದ ರಾತ್ರಿ ಘಟನೆ‌ ನಡೆದಿದ್ದು ಮೃತರನ್ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಮೇಶ್, ಪತ್ನಿ ಶಿಕ್ಷಕಿ ಮಮತಾ ಮತ್ತು ವಿವಾಹಿತ ಪುತ್ರಿ ದೀಪ (25) ಎಂದು ಗುರುತಿಸಲಾಗಿದೆ.

ರಮೇಶ್ ಅವರು ಕೆ.ಬಿ.ಕ್ರಾಸ್ ನಲ್ಲಿರುವ ಹೇಮಾವತಿ ಕಚೇರಿಯಲ್ಲಿ ಎಇಇ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬಿಳಿಗೆರೆಯಲ್ಲಿ ಮನೆ ಮಾಡಿಕೊಂಡು ಕೆಲಸಕ್ಕೆ ಹೋಗಿಬರುತ್ತಿದ್ದರು ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಆದರೂ, ರಮೇಶ್ ದಂಪತಿ ಪುತ್ರಿ ದೀಪ ವಿವಾಹವಾಗಿ ಒಂದು ತಿಂಗಳಿಗೆ ಪತಿ ಆಕೆಯನ್ನು ತೊರೆದಿದ್ದರು ಎಂದು ಹೇಳಲಾಗಿದೆ.

ಡಿಸೆಂಬರ 16ರ ರಾತ್ರಿ 7 ಗಂಟೆ ಸಮಯದಲ್ಲಿ ನಾಲೆಗೆ ಹಾರಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ನಾಲೆಯಿಂದ ಈಗಾಗಲೇ ಎರಡು ಶವಗಳನ್ನು ಹೊರತೆಗೆಯಲಾಗಿದೆ. ಮತ್ತೊಂದು ಶವಕ್ಕಾಗಿ ಶೋಧ ನಡೆದಿದೆ.

error: Content is protected !!