ಗುಬ್ಬಿ. ಕಡಬ ಕೃಷಿ ರೈತ ಸಂಪರ್ಕ ಕೇಂದ್ರದಲ್ಲಿ ಪರಿಶಿಷ್ಟರಿಗೆ ಸಿಗದ ಟಾರ್ಪಲಿನ್ ಖಾಸಗಿ ವ್ಯಕ್ತಿಗಳ ಪಾಲು.

ಗುಬ್ಬಿ ತಾಲ್ಲೂಕಿನ ಕೆಲ ಇಲಾಖೆಯಲ್ಲಿರುವ ಅಧಿಕಾರಿಗಳು ಪರಿಶಿಷ್ಟ ಸಮುದಾಯಕ್ಕೆ ಮೀಸಲಾಗಿರುವ ವಿವಿಧ ಯೋಜನೆ ಯ ಉಪಕರಣಗಳನ್ನು ಖಾಸಗಿ ವ್ಯಕ್ತಿ ಗಳಿಗೆ ಮಾರಾಟ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಪರಿಶಿಷ್ಟರ ಯೋಜನೆ ದುರುಪಯೋಗ. ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಎಲ್ಲಾ ಇಲಾಖೆ ಗಳಲ್ಲಿ ಸಾಕಷ್ಟು ಸೌಲಭ್ಯಗಳನ್ನು ನೀಡಿದರು ಸಹ ಅಧಿಕಾರಿಗಳು ಮಾತ್ರ ಸರ್ಕಾರದ ಆದೇಶವನ್ನು ಪಾಲಿಸದೇ ತಮಗೆ ಬೇಕಾದ ರೀತಿಯಲ್ಲಿ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳಲು ಮುಂದಾಗಿದ್ದಾರೆ.ಕೇವಲ ನೆಪಕ್ಕೆ ಮಾತ್ರ ಪರಿಶಿಷ್ಟ ಸಮುದಾಯಕ್ಕೆ ಸರ್ಕಾರ ದ ಯೋಜನೆ ತಲುಪಿಸುತ್ತೆವೆ ಎಂದು ಹೇಳಿಕೊಂಡು ಇವರ ಹೆಸರಿನಲ್ಲಿ ಖಾಸಗಿ ವ್ಯಕ್ತಿ ಗಳ ಉದ್ದಾರಕ್ಕೆ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡುತ್ತಿರುವ ಉದಾಹರಣೆ ಗಳಿವೆ ಅದರಂತೆಯೇ ಕಡಬ ಕೃಷಿ ಇಲಾಖೆ ಅಧಿಕಾರಿಗಳು ಸಹ ಪರಿಶಿಷ್ಟ ರಿಗೆ ಬಂದ ಸೌಲಭ್ಯಗಳನ್ನು ಬೇರೆ ವ್ಯಕ್ತಿ ಗಳಿಗೆ ನೀಡುವ ಮೂಲಕ ಹಿಂದೂಳಿದ ಸಮುದಾಯಗಳ ಅವನತಿಗೆ ಮುಂದಾಗಿದ್ದಾರೆ.ಎಂಬುದು ಅಷ್ಟೆ ಸತ್ಯ.

ಕಡಬ.ಕೃಷಿ ಇಲಾಖೆಯ ಟಾರ್ಪಲಿನ್ ವಿತರಣೆಯಲ್ಲಿ ದೋಖಾ. ಕಡಬ ಗ್ರಾಮದ ಕೃಷಿ ಇಲಾಖೆಯ ಅಧಿಕಾರಿ ದರ್ಶನ್ ಎಂಬುವ ಅಧಿಕಾರಿಗೆ ಸರ್ಕಾರ ದ ಕೆಲಸ ಸರಿಯಾಗಿ ಮಾಡಪ್ಪ ಅಂದ್ರೆ ಈ ಅಧಿಕಾರಿ ಖಾಸಗಿ ಮತ್ತು ಪ್ರಭಾವಿ ವ್ಯಕ್ತಿ ಗಳ ಕೆಲಸ ಮಾಡಲು ಸಿದ್ದರಿರುವಂತಿದೆ ಇದಕ್ಕೆ ನೈಜ ಉದಾಹರಣೆ ಎಂಬತ್ತೆ ಕಡಬ ಹೋಬಳಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ.ಹಿಂದೂಳಿದ ವರ್ಗದ ಫಲಾನುಭವಿಗಳಿಗೆ ಕೃಷಿ ಚಟುವಟಿಕೆ ಗಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಸರ್ಕಾರ ರಿಯಾಯಿತಿ ದರದಲ್ಲಿ ಟಾರ್ಪಲಿನ್ ವಿತರಣೆ ಮಾಡುತ್ತಿದೆ.ಆದರೆ ಸರ್ಕಾರ ದಿಂದ ಬರುವ ರಿಯಾಯಿತಿ ಟಾರ್ಪಲಿನ್ ಫಲಾನುಭವಿಗಳಿಗೆ ಮಾತ್ರ ಸರಿಯಾಗಿ ತಲುಪುತ್ತಿಲ್ಲ.

ದಲಿತ ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯ ಪರರ ಪಾಲು.ಫಲಾನುಭವಿಗಳಿಗೆ ಬದಲಾಗಿ ಈ ಟಾರ್ಪಲಿನ್ ಗಳು ಹಣವಂತರ.ಪ್ರಭಾವಿಗಳ.ರಾಜಕೀಯ ಮುಖಂಡರ ಫಲಾಗುತ್ತಿವೆ ಎಂಬುದು ರೈತ ಫಲಾನುಭವಿಗಳ ಆರೋಪ ಒಂದೆಡೆಯಾದರೆ ಪರಿಶಿಷ್ಟ ರಿಗೆ ಬಂದ ಟಾರ್ಪಲಿನ್ ಗಳು ದಲಿತ ಸಮುದಾಯದ ಫಲಾನುಭವಿಗಳಿಗೆ ತಲುಪುವುದೆ ಇಲ್ಲಾ ಬಿಡಿ.ಕೇವಲ ಸರ್ಕಾರ ಕ್ಕೆ ಲೆಕ್ಕ ಕೊಡುವ ದೃಷ್ಟಿಯಿಂದ ಬೆರಳೆಣಿಕೆಯಷ್ಟು ದಲಿತ ಫಲಾನುಭವಿಗಳಿಗೆ ಟಾರ್ಪಲಿನ್ ನೀಡಿ ಉಳಿದ ಟಾರ್ಪಲಿನ್ ಗಳು ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಮಾರಾಟ ಮಾಡುತ್ತಾರೆಂಬ ಆರೋಪ ಗಳು ಕೇಳಿಬರುತ್ತಿದೆ.ಅದರಂತೆ ಈ ಬಾರಿ ದಲಿತ ಸಮುದಾಯದ ಫಲಾನುಭವಿಗಳಿಗೆ ಕಡಬ ಕೃಷಿ ಇಲಾಖೆ ಅಧಿಕಾರಿಗಳು ಟಾರ್ಪಲಿನ್ ವಿತರಣೆ ಮಾಡುವಲ್ಲಿ ಅನ್ಯಾಯ ವೆಸಗಿದ್ದಾರೆ ಎಂದು ಕೃಷಿ ಅಧಿಕಾರಿ ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲಿತ ವಿರೋಧಿ ಕೃಷಿ ಅಧಿಕಾರಿ ದರ್ಶನ್ ಮುಖಂಡರ ಆರೋಪ.ಕಡಬ ಹೋಬಳಿಯ ಮಂಚಿಹಳ್ಳಿ ಹಾಗೂ ಪೆಂಡಾರನಹಳ್ಳಿ ದಲಿತ ಸಮುದಾಯದ ದ ರೈತರು ಕೃಷಿ ಇಲಾಖೆ ಗೆ ಟಾರ್ಪಲಿನ್ ಪಡೆಯಲು ಅರ್ಜಿ ಸಲ್ಲಿಸಿದ್ದು ಈ ಬಾರಿ ಟಾರ್ಪಲಿನ್ ವಿತರಣೆಗೆ ಹೆಸರು ಅರ್ಜಿ ಸಲ್ಲಿಸಿದವರ ಪಟ್ಟಿ ಯಲ್ಲಿ ನಮೂದಾಗಿದ್ದು ಕೃಷಿ ಇಲಾಖೆ ಯ ನೋಟಿಸ್ ಫಲಕದಲ್ಲಿ ಇದ್ದರು ಸಹ ಕೆಲ ದಲಿತ ಫಲಾನುಭವಿಗಳಿಗೆ ಟಾರ್ಪಲಿನ್ ವಿತರಣೆ ಮಾಡಿಲ್ಲ ಬದಲಾಗಿ ಇವರಿಗೆ ಸಿಗಬೇಕಾದ ಟಾರ್ಪಲಿನ್ ಖಾಸಗಿ ಯವರ ಪಾಲಾಗಿದ್ದು ಅಧಿಕಾರಿಗಳ ದನ ದಾಹಕ್ಕೆ ದಲಿತ ಫಲಾನುಭವಿಗಳು ಸೌಲಭ್ಯ ವಂಚಿತ ರಾಗುತ್ತಿದ್ದಾರೆ.

ಈ ಬಗ್ಗೆ ತಮ್ಮ ಅಳಲನ್ನು ತೊಡಿಕೊಂಡ ಫಲಾನುಭವಿಗಳು ವಿಜಯ ವಾರ್ತೆ ಯೊಂದಿಗೆ ಮಾತನಾಡಿ ನಾವು ಹಲವು ಬಾರಿ ಟಾರ್ಪಲಿನ್ ಪಡೆಯಲು ಅರ್ಜಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಈ ಬಾರಿ ಹೇಗೊ ನಮ್ಮ ಹೆಸರು ಪಟ್ಟಿ ಯಲ್ಲಿ ಸೇರಿಸಲಾಗಿತ್ತು ಆದರೆ ಟಾರ್ಪಲಿನ್ ಪಡೆಯುವ ಸಂದರ್ಭದಲ್ಲಿ ಕೃಷಿ ಅಧಿಕಾರಿ ದರ್ಶನ್ ಇವತ್ತು ನಾಳೆ ಎಂದು ಹರಕೆ ಉತ್ತರ ಹೇಳುವ ಮೂಲಕ ದಿನಕಳೆದು ಕೊನೆಗೆ ಟಾರ್ಪಲಿನ್ ಖಾಲಿಯಾಗಿದೆ ಎಂದು ಹೇಳಿ ಈ ಬಾರಿಯೂ ಸಹ ನಮಗೆ ಟಾರ್ಪಲಿನ್ ಸಿಗದಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕೃಷಿ ಅಧಿಕಾರಿ ಅಧಿಕಾರ ದುರ್ಬಳಕೆ .ಕುರಿತು ಕೃಷಿ ಅಧಿಕಾರಿ ದರ್ಶನ್ ಸಂಪರ್ಕ ಮಾಡಿದ ವಿಜಯವಾರ್ತೆ ಗೆ ಪ್ರತಿಕ್ರಿಯೆ ನೀಡದ ಅಧಿಕಾರಿ ಈ ಬಾರಿ ಟಾರ್ಪಲಿನ್ ವಿತರಣೆ ಸಮಯದಲ್ಲಿ ದಲಿತ ಫಲಾನುಭವಿಗಳು ಟಾರ್ಪಲಿನ್ ಪಡೆದು ಕೊಳ್ಳುವಂತೆ ತಿಳಿಸಲಾಗಿತ್ತು ಆದರೆ ಅವರು ಬಂದು ಟಾರ್ಪಲಿನ್ ಪಡೆದುಕೊಳ್ಳಲಿಲ್ಲ ಹಾಗಾಗಿ ಬೇರೆಯವರಿಗೆ ನೀಡೆದ್ದೆನೆ ನನ್ನ ತಪ್ಪೇನಿಲ್ಲ ಎಂದು ಸಮಯಕ್ಕೆ ಸರಿಯಾಗಿ ಬಾರದೆ ಇದ್ದು ಟಾರ್ಪಲಿನ್ ಖಾಲಿಯಾದ ನಂತರ ಬಂದವರಿಗೆ ಹೇಗೆ ನೀಡಲಿ ಎಂಬ ಹರಕೆ ಉತ್ತರ ನೀಡುವ ಮೂಲಕ ಫಲಾನುಭವಿಗಳಿಗೆ ವಂಚಿಸಿರುವ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ. ಹಾಗಾದರೆ ಈ ಅಧಿಕಾರಿ ಹೇಳಿಕೆ ಪ್ರಕಾರ ಇವರಿಗೆ ಮೀಸಲಿದ್ದ ಟಾರ್ಪಲಿನ್ ಪಡೆಯಲು ಫಲಿನುಭವಿಗಳು ಬರದಿದ್ದಾರೆ ಬೇರೆಯವರಿಗೆ ಹೆಚ್ಚು ಬೆಲೆಗೆ ಮಾರಾಟ ಮಾಡಲು ಅವಕಾಶ ವಿದ್ದೇಯೆ ಅಥಾವ ಉದ್ದೇಶ ಪೂರ್ವಕವಾಗಿ ದಲಿತ ಫಲಾನುಭವಿಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಸೌಲಭ್ಯ ವಂಚಿತ ರಾಗುವಂತೆ ಮಾಡುತ್ತಿದ್ದಾರೇಯೇ ಎಂಬುದು ಮಾತ್ರ ತನಿಖೆ ಯಿಂದ ತಿಳಿಯಬೇಕಿದೆ.

ಇನ್ನೂ ಸರ್ಕಾರದ ಸೌಲಭ್ಯಗಳನ್ನು ದಲಿತ ಫಲಾನುಭವಿಗಳಿಗೆ ನೀಡುವಲ್ಲಿ ಹಿಂದೆಟು ಹಾಕುವ ಕಡಬ ರೈತ ಸಂಪರ್ಕ. ಕೇಂದ್ರ ದ ಅಧಿಕಾರಿ ದರ್ಶನ್ ಎಂಬುವರ ಮೇಲೆ ಕೃಷಿ ಇಲಾಖೆಯ ಅಧಿಕಾರಿಗಳು ತನಿಖೆ ನೆಡಸಿ ಇವರ ಮೇಲೆ ಕ್ರಮ ವಹಿಸಬೇಕಿದೆ ಇಲ್ಲಾವಾದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ಮುಂದಾಗುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಕಡಬ.ರೈತ ಸಂಪರ್ಕ ಕೇಂದ್ರ. ಗುಬ್ಬಿ ತಾಲೂಕು.
ಕಡಬ ಕೃಷಿ ರೈತ ಸಂಪರ್ಕ ಕೇಂದ್ರ ದ ಅಧಿಕಾರಿ ದರ್ಶನ್.
ಕೃಷಿ ಇಲಾಖೆ ಟಾರ್ಪಲಿನ್
error: Content is protected !!