ಗುಬ್ಬಿ. ಸಿ.ಎಸ್.ಪುರ ನಾಡಕಛೇರಿಯಲ್ಲಿ ಕಂದಾಯ ಆದಾಲತ್ ಆಯೋಜನೆ.

ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಕಂದಾಯ ಇಲಾಖೆಯ ನಾಡಕಛೇರಿಯಲ್ಲಿ ಕಂದಾಯ ಆದಾಲತ್ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಕುರಿತು ಮಾತನಾಡಿದ ನಾಡಕಛೇರಿಯ ಉಪ ತಹಶೀಲ್ದಾರ್ ಎಸ್.ಎಂ. ಮುತ್ತುರಾಜು ಗ್ರಾಮೀಣ ಭಾಗದ ಜನತೆಗೆ ಸಾಮಾಜಿಕ ಭದ್ರತಾ ಯೋಜನೆಯ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಆಯಾ ಹೋಬಳಿ ವಾರು ಕಂದಾಯ ಆದಾಲತ್. ಪಿಂಚಣಿ ಆದಾಲತ್. ಪೌತಿ ವಾರಸ್ಸು ಅಭಿಯಾನ ಕಾರ್ಯ ಕ್ರಮ ನೆಡೆಸುತ್ತಿದ್ದು ಈ ಯೋಜನೆ ಸಮರ್ಪಕವಾಗಿ ಜನತೆಗೆ ತಲುಪುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.ಈ ಯೋಜನೆ ಸದುಪಯೋಗ ಪಡೆದುಕೊಳ್ಳಲು ಸಾರ್ವಜನಿಕರು ಮುಂದಾಗಬೇಕು ಪ್ರತಿ ಸಾಮಾಜಿಕ ಭದ್ರತಾ ಯೋಜನೆಗೆ ನಿಗಧಿ ಪಡಿಸಿರುವ ಸೂಕ್ತ ದಾಖಲೆ ಗಳನ್ನು ಕಛೇರಿಯಲ್ಲಿ ಸಲ್ಲಿಸುವ ಮೂಲಕ ನಿಮ್ಮ ಮನೆ ಬಾಗಿಲಿಗೆ ಸೇವೆ ನೀಡುವುದು ಕಂದಾಯ ಇಲಾಖೆ ಮೂಲ ಉದ್ದೇಶ ವಾಗಿದೆ ಎಂದು ಯೋಜನೆಯ ಸಂಕ್ಷಿಪ್ತ ಮಾಹಿತಿಯನ್ನು ಸಾರ್ವಜನಿಕ ರಿಗೆ ತಿಳಿಸಿದರು.

ಕಂದಾಯ ನೀರಿಕ್ಷಕ ಶ್ರೀನಿವಾಸ್ ಮಾತನಾಡಿ ಕಂದಾಯ ಇಲಾಖೆ ಯ ಎಲ್ಲಾ ಸೇವೆಗಳು ಸಾರ್ವಜನಿಕರಿಗೆ ತಲುಪಿಸಲು ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದು ಅದರಂತೆ ಜನತೆಗೆ ಅನುಕೂಲಕ್ಕಾಗಿ ಸ್ಥಳೀಯ ವಾಗಿ ಸೇವೆಗಳನ್ನು ಒದಗಿಸಲು ಕಂದಾಯ ಆದಾಲತ್ ಮಾಡುತ್ತಿದ್ದು ಇದರಿಂದ ಕಂದಾಯ ಇಲಾಖೆಯ ಸೇವೆಗಳು ಜನರಿಗೆ ತಲುಪಿಸಲು ಅನುಕೂಲ ವಾಗಿದೆ.ಇನ್ನೂ ಹಲವು ವರ್ಷಗಳಿಂದ ತಮ್ಮ ಜಮೀನಿನ ವಾರಸ್ಸು ದಾರರು ಮರಣ ಹೊಂದಿದ್ದರು ಸಹ ಖಾತೆ ಬದಲಾವಣೆ ಮಾಡಿಕೊಳ್ಳಲು ಸಾದ್ಯ ವಾಗಿರದ ಜನತೆಗೆ ಪೌತಿವಾರಸ್ಸು ಆಂದೋಲನ ಸಹಕಾರಿ ಯಾಗಿದ್ದು ಸಂಬಂಧ ಪಟ್ಟ ದಾಖಲೆ ಗಳನ್ನು ನೀಡಿ ಪ್ರಸ್ತುತ ಮಾಲೀಕರು ಖಾತೆ ಪಹಣಿ ಚಾಲ್ತಿ ಮಾಡಿಕೊಳ್ಳಲು ಸಾದ್ಯವಾಗುತ್ತದೆ ಆದರಿಂದ ಸಾರ್ವಜನಿಕರು ಸೇವೆಯ ಸದುಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು.

ಕಾರ್ಯಕ್ರಮ ದಲ್ಲಿ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಉಪತಹಶೀಲ್ದಾರ್ ಎಸ್.ಎಂ.ಮುತ್ತು ರಾಜು ವಿತರಣೆ ಮಾಡಿದರು.ಈ ವೇಳೆಯಲ್ಲಿ ಸಿ.ಎಸ್. ಪುರ ಹೋಬಳಿ ಎಲ್ಲಾ ವೃತ್ತ ಗಳ ಗ್ರಾಮ ಲೆಕ್ಕಿಗರು.ಗ್ರಾಮಸಹಾಯಕರು.ಸಿಬ್ಬಂದಿ ವರ್ಗದವರು. ಸಾರ್ವಜನಿಕರು ಹಾಜರಿದ್ದರು.

ಸುದ್ದಿ ಸಂಗ್ರಹ.ರಮೇಶ್ ಹೊರಕೆರೆ.

Leave a Reply

Your email address will not be published. Required fields are marked *

error: Content is protected !!