ಗುಬ್ಬಿ.ಆಸ್ತಿ ಆಸೆಗಾಗಿ ಹೆಂಡತಿಯ ಹತ್ಯೆಗೆ ಮುಂದಾದ ಪತಿರಾಯ.

ಮನೆ ಮತ್ತು ಆಸ್ತಿ ಯನ್ನು ಕಬಳಿಸುವ ಹಿನ್ನಲೆಯಲ್ಲಿ ಗಂಡನೇ ತನ್ನ ಹೆಂಡತಿ ಮತ್ತು ಅತ್ತೆಯನ್ನು ಹತ್ಯೆ ಮಾಡಲು ಮುಂದಾದ ಘಟನೆ ಜರುಗಿದೆ.ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿ ಜನ್ನೇನಹಳ್ಳಿ ಗ್ರಾಮದ ಮಮತಾ ಪತಿಯಿಂದ ದೈಹಿಕ ಹಲ್ಲೆ ಗೆ ಒಳಗಾಗಿ ಅಪಾಯದಿಂದ ಪರಾದ ಮಹಿಳೆ ಎಂದು ತಿಳಿದುಬಂದಿದೆ.

ಮೂಲತಃ ಕೆ.ಕಲ್ಲಹಳ್ಳಿ ಗ್ರಾಮದ ವಾಸಿಯಾಗಿದ್ದ ಮಮತಾ ಎಂಬುವ ಮಹಿಳೆ ಯನ್ನು ಸ್ಥಳೀಯ ಜನ್ನೇನಹಳ್ಳಿ ಗ್ರಾಮದ ಬೈರಮುಡಿ ಎಂಬುವ ನೊಂದಿಗೆ 15 ವರ್ಷಗಳ ಹಿಂದೆ ವಿವಾಹ ಮಾಡಿಕೊಟ್ಟಿದ್ದು ಇವರ ಕುಟುಂಬ ಬೆಂಗಳೂರಿನ ಕಡಬಗೆರೆಯಲ್ಲಿ ವಾಸವಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಆಸ್ತಿ ವಿಚಾರವಾಗಿ ಹಲ್ಲೆ ಒಳಗಾಗಿರುವ ಮಮತಾ ಮತ್ತು ಈಕೆಯ ಪತಿ ವೈರಮುಡಿ ಗೆ ಹಲವು ಬಾರಿ ಸಂಘರ್ಷ ಗಳು ನೆಡೆದಿದೆ ಎಂದು ಸ್ಥಳೀಯರ ಆರೋಪವಾಗಿದೆ.

ಇನ್ನು ಈ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಮಮತಾ ತಾಯಿ ಮಹದೇವಮ್ಮ ನನ್ನ ಅಳಿಯ ಕಡಬಗೆರೆ ಮನೆ ಮಾರಾಟ ಮಾಡುವಂತೆ ಕಳೆದ ಆರು ತಿಂಗಳಿಂದ ನನ್ನ ಮಗಳೊಂದಿಗೆ ನಿತ್ಯ ವು ಸಹ ಕುಡಿದು ಗಲಾಟೆ ಮಾಡುತ್ತಿದ್ದ ಈ ವಿಚಾರ ವಾಗಿ ಹಲವು ಬಾರಿ ನಾವುಗಳು ಬುದ್ಧಿ ಹೇಳಿದರು ಸಹ ಯಾರು ಮಾತು ಕೇಳುತ್ತಿರಲಿಲ್ಲ ಕಳೆದ ಎರಡು ದಿವಸಗಳ ಹಿಂದೆ ಗ್ರಾಮದಲ್ಲಿ ನ್ಯಾಯ ಮಾಡುವುದಾಗಿ ಕರೆಸಿಕೊಂಡು ಸೋಮವಾರ ಮದ್ಯಾಹ್ನದ ವೇಳೆಯಲ್ಲಿ ಜನ್ನೇನಹಳ್ಳಿ ಗ್ರಾಮದ ಸಮೀಪದ ನಿರ್ಜನ ತೋಪಿನಲ್ಲಿ ಕರೆದು ಹೋಗಿ ನನ್ನ ಮಗಳಿಗೆ ಮನಸೋ ಇಚ್ಚೆಥಳಿಸಿ ಮಾರಾಣಾಂತಿಕವಾಗಿ ದೈಹಿಕ ಹಲ್ಲೆ ನೆಡೆಸಿ ಇದು ಸಾಲವೆಂಬತೆ ನನ್ನ ಅಳಿಯ ಬೈರುಮುಡಿ ಹಾಗೂ ಇತನ ಜೋತೆಯಲ್ಲಿ ನನ್ನ ಸಂಬಂಧಿಗಳಾದ ಸುರೇಶ್. ಚಲುವರಾಜು.ನಾರಾಯಣಿ ಎಂಬುವರು ಗುಂಪಾಗಿ ಸೇರಿ ದ್ವೀ ಚಕ್ರ ವಾಹನವನ್ನು ಕಾಲಿನ ಮೇಲೆ ಹತ್ತಿಸುವ ಜೋತೆಗೆ ದೇಹದ ಎಲ್ಲಾ ಭಾಗಗಳಿಗೂ ಕೈಗೆ ಸಿಕ್ಕ ಆಯುಧಗಳಿಂದ ದೈಹಿಕ ಹಲ್ಲೆ ಮಾಡಿದ್ದಾರೆ ಇದರ ಜೋತೆಗೆ ನನಗೂ ಸಹ ಸಾಕಷ್ಟು ಹಲ್ಲೆ ನೆಡೆಸಿ ನಮ್ಮ ಕೊಲೆಗೆ ಸಂಚು ರೂಪಿಸಿದ್ದರು ಎಂದು ಆರೋಪ ವ್ಯಕ್ತಪಡಿಸಿದ್ದಾರೆ.

ಹಲ್ಲೆ ಕುರಿತು ಪ್ರತಿಕ್ರಿಯೆ ನೀಡಿದ ಗಾಯಾಳು ಮಮತಾ ನನಗೆ ನನ್ನ ಪತಿ ಮನೆಮಾರಾಟ ಮಾಡಿ ಹಣ ಕೋಡುವಂತೆ ನಿತ್ಯವೂ ಸಹ ಕಿರುಕುಳ ನೀಡುತ್ತಿದ್ದ ಕುಟುಂಬದ ಕಲಹದ ಹಿನ್ನಲೆಯಲ್ಲಿ ನನ್ನ ಮಕ್ಕಳು ನನ್ನ ಗಂಡನಮನೆಯಲ್ಲಿ ವಾಸವಿದ್ದರಿಂದ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ಮಾಡಿ ಸಮಸ್ಯೆ ಬಗೆಹರಿಸೋಣ ಎಂದು ಹೇಳಿ ಯಾವುದೇ ನ್ಯಾಯ ಮಾಡದೇ ನನ್ನ ನಡು ರಸ್ತೆಯಲ್ಲಿ ಮಾನವೀಯತೆ ಇಲ್ಲದಂತೆ ಹಾಕಿರುವ ಬಟ್ಟೆ ಹರಿಯಂತೆ ಮನಬಂದಂತೆ ಹೊಡೆದಿದ್ದಾರೆ ಎದ್ದು ಹೋಗದಂತೆ ಕಾಲುಗಳ ಮೇಲೆ ಬೈಕ್ ಗಳನ್ನೂ ಹತ್ತಿ ಸಿ ದ್ದಾರೆ‌. ಈ ವಿಚಾರದಲ್ಲಿ ನನ್ನ ಸಂಬಂಧಿಗಳು ‌ಸಹ ನನ್ನ ಗಂಡನೊಂದಿಗೆ ಸೇರಿ ನನ್ನ ಮತ್ತು ನನ್ನ ತಾಯಿಯ ಕೊಲೆಗೆ ಸಂಚುರೂಪಿಸಿದ್ದಾರೆ .

ನನ್ನ ಮತ್ತು ನನ್ನ ತಾಯಿ ಇಬ್ಬರನ್ನು ಕೊಲೆ ಮಾಡಿದರೆ ಇರುವ ಎಲ್ಲಾ ಆಸ್ತಿ ನಮಗೆ ಸಿಗುತ್ತದೆ ಎಂಬ ದುರಾಸೆ ಇಂದ ಈ ಹಲ್ಲೆ. ಮಾಡಿದ್ದು ಇವರಿಗೆ ಸೂಕ್ತ ಶಿಕ್ಷೆ ಯಾಗಬೇಕು ನನಗೆ ಆದಾ ಅನ್ಯಾಯ ಬೇರೆ ಯಾವುದೇ ಹೆಣ್ಣಿಗೆ ಆಗಬಾರದು ಸಂಬಂಧ ಪಟ್ಟ ಪೊಲೀಸ್ ಇಲಾಖೆ ಇಂತಹ ದಾನ ಭಾಕವ್ಯಕ್ತಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ನೊಂದ ಮಹಿಳೆ. ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

error: Content is protected !!