ಗುಬ್ಬಿ. ಕಾರ್ಮಿಕ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ. ಕಾರ್ಮಿಕ ರಿಗೆ ಪುಡ್ ಕಿಟ್ ನೀಡದೆ ಕಛೇರಿ ಅಲೆಸುತ್ತಿದ್ದಾರೆ ಕಾರ್ಮಿಕ ಅಧಿಕಾರಿಗಳು.

ಸರ್ಕಾರ ಕಾರ್ಮಿಕರ ಸಂಕಷ್ಟಕ್ಕೆ ಮುಂದಾಗುವ ನಿಟ್ಟಿನಲ್ಲಿ ಎಲ್ಲಾ ವರ್ಗದ ಕಾರ್ಮಿಕ ರಿಗೆ ಆಹಾರ ಕಿಟ್ ವಿತರಣೆ ಮಾಡುವಲ್ಲಿ ಮುಂದಾದರೆ ಅಧಿಕಾರಿಗಳು ಮಾತ್ರ ಕಾರ್ಮಿಕ ರಿಗೆ ಸಮರ್ಪಕವಾಗಿ ಕಿಟ್ ವಿತರಣೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತಾಲ್ಲೂಕಿನ ಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಗುಬ್ಬಿ ತಾಲ್ಲೂಕಿನ ಕಾರ್ಮಿಕ ರಿಗೆ ಈಗಾಗಲೇ ಕಿಟ್ ನೀಡುತ್ತಿರುವ ಇಲಾಖೆ ಸರಿಯಾದ ರೀತಿಯಲ್ಲಿ ವಿತರಣೆ ಮಾಡದೆ ಕಾರ್ಮಿಕರು ನಿತ್ಯವೂ ಸಹ ದೂರದ ಗ್ರಾಮಗಳಿಂದ ಗುಬ್ಬಿ ನಗರಕ್ಕೆ ಅಲೆಯುವಂತೆ ಮಾಡಿದ್ದಾರೆ ಎಂದು ಕಾರ್ಮಿಕರು ಅಧಿಕಾರಿಗಳು ಬೇಜವಾಬ್ದಾರಿ ತನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಇಂದು ಆಹಾರದ ಕಿಟ್ ಪಡೆಯಲು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಕಾರ್ಮಿಕರು ಆಹಾರದ ಕಿಟ್ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು ಎಂದು ಗುಬ್ಬಿ ಶಾಸಕ ಕಛೇರಿಯ ಮುಂದೆ ಜಮಾಯಿಸಿ ಅಧಿಕಾರಿಗಳ ನಿರ್ಲಕ್ಷ್ಯ ತೆ ಬಗ್ಗೆ ಮಾತನಾಡಿದರು.

ಕಳೆದ ಮೂರು ದಿವಸಗಳಿಂದ ಕಿಟ್ ಪಡೆಯಲು ಬಂದರೆ ಸರಿಯಾಗಿ ವಿತರಣೆ ಮಾಡುತ್ತಿಲ್ಲ ಬಂದವರೆಲ್ಲ ಬರಿಗೈಯಲ್ಲಿ ತಮ್ಮ ಗ್ರಾಮಗಳಿಗೆ ವಾಪಸ್ಸು ಹಾಗುತ್ತಿದ್ದ ಇತ್ತ ಕೂಲಿ ಕೆಲಸಕ್ಕೆ ಹೋಗದೆ ಕಾರ್ಮಿಕ ಕಛೇರಿ ಸುತ್ತುವುದು ನಮ್ಮ ಕೆಲಸವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಕೂಲಿ ಮಾಡಿದರೆ ಜೀವನ ಈ ಅಧಿಕಾರಿಗಳು ಹೊಬಳಿವಾರು ಅಥವಾ ಗ್ರಾಮ ಪಂಚಾಯಿತಿ ವಾರು ಕಿಟ್ ವಿತರಣೆ ಮಾಡಿದರೆ ಸಮಸ್ಯೆ ಬರುವುದಿಲ್ಲ ಆದರೆ ಒಂದೆ ದಿವಸ ತಾಲ್ಲೂಕಿನ ಎಲ್ಲಾ ಕಾರ್ಮಿಕ ರಿಗೆ ಕಿಟ್ ನೀಡದರೆ ತೊಂದರೆಯಾಗುತ್ತದೆ ಇಂದು ಶಾಸಕ ಕಛೇರಿಯಲ್ಲಿ ಕಿಟ್ ನೀಡುತ್ತಾರೆ ಎಂದು ತಿಳಿಸಿದರು ಆದರೆ ಇಲ್ಲಿಯೂ ಸಹ ವಿತರಣೆ ಮಾಡುತ್ತಿಲ್ಲ ಎಂದು ತಮ್ಮ ಅಳಲನ್ನು ತೊಂಡಿಕೊಂಡರು.

ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ಬಂದಿದ್ದ ಕಾರ್ಮಿಕರು ಹಾಜರಿದ್ದರು.

error: Content is protected !!