ಗುಬ್ಬಿ. ಪಟ್ಟಣದ ಸರ್ಕಾರಿ ನೌಕರರ ಸಂಘದ ಕಛೇರಿಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ.

ನಾಡಪ್ರಭು ಕೆಂಪೇಗೌಡರ ಆದರ್ಶ ಸೇವಾಮನೋಭಾವ ಹಾಗೂ ಮುಂದಾಲೋಚನೆಯಿಂದ ಕೆಂಪೇಗೌಡ ರು ಆದರ್ಶ ವ್ಯಕ್ತಿಯಾಗಿ ಬೆಳೆದಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾರಾಯಣ್ ತಿಳಿಸಿದರು.

ಪಟ್ಟಣದ ಸರ್ಕಾರಿ ನೌಕರ ಭವನದಲ್ಲಿ ಕೆಂಪೇಗೌಡರ ಜಯಂತಿಯನ್ನು ದೀಪ ಬೆಳಗುವ ಮುಖಾಂತರ ಉದ್ಘಾಟಿಸಿ ಮಾತನಾಡಿದ ಅವರ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ವ್ಯಕ್ತಿತ್ವವನ್ನು ಮತ್ತು ತಮ್ಮ ಸೇವೆಯನ್ನು ನೀಡಿದಾಗ ಅಂತಹ ವ್ಯಕ್ತಿಯನ್ನು ಸ್ಮರಿಸಲು ಸಾಧ್ಯ ಅದರಂತೆಯೇ ನಾಡ ಪ್ರಭು ಕೆಂಪೇಗೌಡ ರ ಕೊಡುಗೆ ಸಹ ನಾಡಿಗೆ ಅಪಾರವಾದದ್ದು ಎಂದು ತಿಳಿಸಿದರು.

ಭಾರತೀಯ ಜನತಾ ಪಕ್ಷದ ಮುಖಂಡ ಹೆಚ್.ಟಿ ಬೈರಪ್ಪ ಮಾತನಾಡಿ ಜನಸೇವೆಗೆ ತನ್ನ ಬಾಳನ್ನು ಮುಡುಪಾಗಿಟ್ಟಿರುವ ಕೆಂಪೇಗೌಡರ ಆದರ್ಶ ಗಳನ್ನು ಇಂದಿನ ಯುವಪೀಳಿಗೆ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಬೇರೆ ಬೇರೆ ರಾಜ್ಯಗಳಿಂದ ವಲಸೆ ಬರುವ ಜನಸಂಖ್ಯೆಯನ್ನು ಆಧರಿಸಿ ಅಂದಿನ ದಿನಗಳಲ್ಲೆ. ಮುಂದಾಲೋಚನೆಯಿಂದ ಬೆಂಗಳೂರು ನಗರ ವಿಂಗಡಿಸಿದ್ದರಿಂದ ಕೆಂಪೇಗೌಡರ ಮುಂದಾಲೋಚನೆ ಬಗ್ಗೆ ತಿಳಿಯುತ್ತದೆ ಎಂದರು.

ಕಾರ್ಯಕ್ರಮ ದಲ್ಲಿ ಕಾಂಗ್ರೆಸ್ ಮುಖಂಡ ಹೊನ್ನಾಗಿರಿ ಗೌಡ ಸರ್ಕಾರಿ ನೌಕರರ ಸಂಘದ ಸದಸ್ಯರುಗಳು ಗ್ರಾಮಪಂಚಾಯಿತಿಯ ಸದಸ್ಯರುಗಳು ಹಾಗು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದರು

Leave a Reply

Your email address will not be published. Required fields are marked *

error: Content is protected !!