ಗುಬ್ಬಿ. ಕಳ್ಳ ಮರಳು ದಂಧೆ ಹರಿಹಾರ ಎಂ.ಟಿ.ಕೃಷ್ಣಪ್ಪ ಶಾಸಕ ಮಸಾಲೆ ಜಯರಾಂ.ಆರೋಪ

ತುರುವೇಕೆರೆ ಕ್ಷೇತ್ರದ ಜನತೆ ಎಂ.ಟಿ.ಕೃಷ್ಣ ಪ್ಪ ದುರಾಡಳಿತ ದಿಂದ ನೊಂದು ಅಧಿಕಾರನೀಡದೆ ಜನತೆಯ ಮನಸ್ಸಿನಿಂದ ಹೊದ್ದು ಹೊರಹಾಕಿದ್ದಾರೆ ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಮಸಾಲೆ ಜಯರಾಮ್ ಗಂಭೀರ ಆರೋಪ ಮಾಡಿದ್ದಾರೆ.

ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ಹಿಂಡಿಸಿಗೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಎಂ.ಟಿ.ಕೃಷ್ಣಪ್ಪ ಶಾಸಕನದ ಅವಧಿಯಲ್ಲಿ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಸಾಧ್ಯವಾಗಿಲ್ಲ ಬದಲಾಗಿ ಶಿಂಷಾ ನದಿಯ ಒಡಲು ಬಗೆದು ಹಣ ಮಾಡಲು ಮರಳು ದಂಧೆಗೆ ಮುಂದಾಗಿ  ತಾಲ್ಲೂಕಿನ ಜನತೆಗೆ ಯಾವುದೇ ಅಭಿವೃದ್ಧಿ ಮಾಡದೆ ಕ್ಷೇತ್ರ ಯಾವುದೇ ಕೊಡುಗೆ ನೀಡಿಲ್ಲ ಇಂತಹ ಕೀಳುಮಟ್ಟದ ರಾಜಕೀಯ ಮಾಡುವ ಕೃಷ್ಣಪ್ಪನಿಗೆ ನನ್ನ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲಾ ಎಂದು ಕಿಡಿಕಾರಿದ್ದಾರೆ.

ಎಂ.ಟಿ.ಕೆ.ನೀರಾವರಿ ಹರಿಹಾರನಲ್ಲ.ಮರಳು ದಂಧೆ ಹಾರಿಕಾರ.ಕೃಷ್ಣ ಪ್ಪ ನೀರು ಹರಿಸುವ ವಿಚಾರದಲ್ಲಿ ಆರೋಪ ಮಾಡುವ ಬದಲು ಇವರ 10 ವರ್ಷಗಳು ಶಾಸಕರಾಗಿದ್ದಾಗ ಸಿ.ಎಸ್.ಪುರ ಹೋಬಳಿಯ ಎಷ್ಟು ಕೆರೆಗೆ ನೀರು ತುಂಬಿಸಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ.ನೀರು ಹರಿಸದೇ ಶಿಂಷಾ ನದಿಯಲ್ಲಿ ಮರಳು ದಂಧೆ ಮಾಡುವ ಕಾರ್ಯ ಕ್ಕೆ ಹೆಚ್ಚಿನ ಒತ್ತು ನೀಡಿ ನೀರಾವರಿ ಹೋರಾಟ ಮಾಡುವ ಬದಲಾಗಿ ಮರಳು ದಂಧೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಸಿ.ಎಸ್.ಪುರ ಭಾಗಕ್ಕೆ ನೀರು ಹರಿಸುವಲ್ಲಿ ವಿಫಲರಾಗಿದ್ದಾರೆ.ನಮ್ಮ ಅಧಿಕಾರದ ಅವಧಿಯಲ್ಲಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಿ ನೀರಿನ ಭವಣೆ ನೀಗಿಸಿದ್ದು ಇನ್ನೂ ಹತ್ತು ವರ್ಷಗಳ ಕಾಲ ನೀರು ನಾಲೆಯಲಿ ಸಂಗ್ರಹ ವಾಗಲಿದ್ದು ಮರಳು ದಂಧೆಗೆ ಸಂಪೂರ್ಣ ಕಾಡಿವಾಣ ಹಾಕಿದಂತಾಗಿರುವುದು ಕಳ್ಳ ಕೃಷ್ಣ ಪ್ಪನಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.ಒಬ್ಬ ಅನುಭವಿ ರಾಜಕಾರಣಿ ತಾಲೂಕು ಅಭಿವೃದ್ಧಿ ಗೆ ಶ್ರಮೀಸಬೇಕು ವಿನಃ ಅಭಿವೃದ್ಧಿ ಕೆಲಸಗಳ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದರು. ಈ ವೇಳೆಯಲ್ಲಿ ಬಿಜೆಪಿ ಮುಖಂಡ ಮಹೇಶ್. ಜೆ.ಪಿ.ಬಸವರಾಜು. ಹಿರಿಯ ಮುಖಂಡ ನಾಗಣ್ಣ ಇತರರು ಉಪಸ್ಥಿತರಿದ್ದರು.

ವರದಿ.ಡಿ.ಮಂಜುನಾಥ.

Leave a Reply

Your email address will not be published. Required fields are marked *

error: Content is protected !!