ಗುಬ್ಬಿ: ಜನತೆಗೆ ಕೊಟ್ಟ ಮಾತು ಉಳಿಸಿಕೊಂಡ ತೃಪ್ತಿ ನನಗಿದೆ.ಶಾಸಕ ಮಸಾಲೆ ಜಯರಾಂ.

ಕಳೆದ ಬಾರಿ ಜನತೆಗೆ ಕೊಟ್ಟ ಮಾತು ಉಳಿಸಿ ಕೊಂಡ ತೃಪ್ತಿ ನನಗಿದೆ ಎಂದು ತುರುವೇಕೆರೆ ಶಾಸಕ ಮಸಾಲೆ ಜಯರಾಂ ಸಂತಸ ವ್ಯಕ್ತಪಡಿಸಿದರು.

ಗುಬ್ಬಿ ತಾಲ್ಲೂಕಿನ ಮೇಳೆಕಲ್ಲಹಳ್ಳಿ ಗ್ರಾಮದ ಪರಿಶಿಷ್ಟ ಕಾಲೋನಿಯ ಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 60 ಲಕ್ಷ ವೆಚ್ಚದಲ್ಲಿ ಸಿ ಸಿ ರಸ್ತೆ ಕಾಮಗಾರಿ ಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಕಳೆದ ಬಾರಿ ಇದೇ ಮೇಳೆಕಲ್ಲಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಾಗಾರಿ ನೆಡೆಸಲಾಗಿತ್ತು ಉಳಿಕೆ ಇದ್ದ ಕಾಮಾಗಾರಿಯನ್ನು ಮಾಡುವ ಭರವಸೆ ನೀಡಿದ್ದು ಅದರಂತೆ ಇಂದು ರಸ್ತೆ ಕಾಮಾಗಾರಿ ಚಾಲನೆ ನೀಡಲಾಗಿದೆ ಎಂದರು.

ಹಲವು ವರ್ಷಗಳಿಂದ ನೆನೆಗುದಿಗೆ ಸಿ.ಎಸ್.ಪುರ ಮತ್ತು ಕಡಬ ಹೋಬಳಿಯ ಗ್ರಾಮಗಳ.ರಸ್ತೆ ಗಳ ಅಭಿವೃದ್ಧಿ ಗೆ ಹೆಚ್ಚಿನ. ಅದ್ಯತೆ ನೀಡಲಾಗಿದೆ ಅದರಲ್ಲೂ ಹಲವು ವರ್ಷಗಳಿಂದ ಶಿರಾ ನೆಲ್ಲಿಗೆರೆ ಮಾರ್ಗವಾಗಿ ಕಡಬ.ಕಲ್ಲೂರು ಕ್ರಾಸ್ ರಸ್ತೆ ಸಂಪೂರ್ಣವಾಗಿ ಹಾಳಗಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಹಿನ್ನಲೆಯಲ್ಲಿ ಸುಮಾರು 25 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನೆಡೆಸಲಾಗುತ್ತಿದೆ.ಅದರಂತೆ ಈ ಭಾಗದ ವಿವಿಧ ಗ್ರಾಮಗಳ ಅಭಿವೃದ್ಧಿ ಗಾಗಿ ಸುಮಾರು 40 ಕೋಟಿ ಅನುದಾನ ನೀಡಲಾಗಿದೆ.

ಕಳೆದ ಬಾರಿ ಈ ಭಾಗದ ಕಲ್ಲೂರು ಮತ್ತು ಕಡಬ ಕೆರೆಗಳಿಗೆ ನೀರು ಹರಿಸುವಲ್ಲಿ ಸಾಕಷ್ಟು ಶ್ರಮವಹಿಸಿದ್ದು ಅಂದು ನಮ್ಮ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಮಾದುಸ್ವಾಮಿ.ಶಾಸಕ ಶ್ರೀ ನಿವಾಸ್ ಅವರ ಸಹಕಾರ ದಿಂದ ಈ ಭಾಗದ ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಯಿತು. ಈ ಭಾರಿಯೂ ಸಹ ನೀರು ಹರಿಸಲು ಕ್ರಮ ವಹಿಸಿದ್ದು ಈಗಾಗಲೇ ಕಡಬ.ಮೂಲಕ ನೀರು ಹರಿಯುತ್ತಿದ್ದು ಎಲ್ಲಾ ಕೆರೆಗಳಿಗೂ ಈ ಬಾರಿಯೂ ಸಹ ಸಮರ್ಪಕವಾಗಿ ನೀರು ಹರಿಸುವ ಮೂಲಕ ಎಲ್ಲಾ ಕೆರೆಗಳನ್ನು ತುಂಬಿಸುವ ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಉದಯ್ ಕುಮಾರ್ ಮಾತನಾಡಿ ತುರುವೇಕೆರೆ ಕ್ಷೇತ್ರದ ಇತಿಹಾಸದಲ್ಲಿ ಶಾಸಕ ಮಸಾಲೆ ಜಯರಾಂ ಅವರು ನೀಡಿರುವ ಅನುದಾನವನ್ನು ಯಾವ ಶಾಸಕರು ಸಹ ನೀಡಿರಲಿಲ್ಲ ಆದರೆ ಈ ಭಾಗದ ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಹೆಚ್ಚು ಅನುದಾನ ನೀಡಿರುವ ಶಾಸಕರು ಈ ಬಾರಿಯ ನೂತನ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಆಡಳಿತದಲ್ಲಿ ಮಸಾಲೆ ಜಯರಾಂ ಅವರಿಗೆ ಸರ್ಕಾರ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮ ದಲ್ಲಿ ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್. ಸದಸ್ಯ.ಬಸವರಾಜು. ಯತೀಶ್.ರೈತ ಮುಖಂಡ ಗಂಗಪಟ್ಟಣ ನಟರಾಜ್.ಮಂಗಳಮ್ಮ. ಹಾಗೂ ಗ್ರಾಮಸ್ಥರು. ಹಾಜರಿದ್ದರು.

error: Content is protected !!