ಗುಬ್ಬಿ: ನಗರದ ಜನತೆಗೆ ನೀರು ಹರಿಸಿದ ಜಿಲ್ಲಾ ಸಚಿವ ಹಾಗೂ ಸಂಸದರಿಗೆ ಅಭಿನಂದನೆ ಸಲ್ಲಿಸಿದ ಗುಬ್ಬಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ

ಗುಬ್ಬಿ:- ಮಂಗಳವಾರ ಶುಭ ಸಂಜೆ ಯಲ್ಲಿ ಗುಬ್ಬಿ ಪಟ್ಟಣಕ್ಕೆ ಜನತೆಗೆ ಹೇಮಾವತಿ ನೀರು ಹರಿಯುವ ಮೂಲಕ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಗುಬ್ಬಿ ಪಟ್ಟಣ ಅಧ್ಯಕ್ಷ ಜಿ.ಅಣ್ಣಪ್ಪಸ್ವಾಮಿ ಸಂತಸ ವ್ಯಕ್ತಪಡಿಸಿದರು.

ಕುಡಿಯುವ ನೀರಿಗೆ ಎಂದು ಮೀಸಲಿರುವ ಹೇರೂರು ಕೆರೆಗೆ ಹೇಮಾವತಿ ನೀರು ಬಂದಿದ್ದು ಇದರಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಸಹಕಾರಿಯಾಗಿದೆ ಎಂದರು.

ಗುಬ್ಬಿ ಪಟ್ಟಣಕ್ಕೆ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ರವರಿಗೆ ಹಾಗೂ ತುಮಕೂರು ಸಂಸದರಾದ ಜಿ ಎಸ್ ಬಸವರಾಜು ರವರಿಗೆ 26ನೇ ತಾರೀಖಿನಂದು ನಮ್ಮ ಪಟ್ಟಣದಲ್ಲಿ ನೀರು ಕೇವಲ ಇನ್ನು 15 ದಿನಗಳು ಮಾತ್ರ ಕುಡಿಯಯಲು ಸಾಧ್ಯ ವಾಗಬಹುದು ತದ ನಂತರ ನೀರಿನ ಸಮಸ್ಯೆ ಎದುರಾಗಿದೆ ಆದ್ದರಿಂದ ಗುಬ್ಬಿ ನಗರದ ಜನತೆಗೆ ಕುಡಿಯುವ ನೀರು ಹರಿಸಲು ಪಟ್ಟಣ ಪಂಚಾಯಿತಿ ಸದಸ್ಯರ ಪರವಾಗಿ ಸಂಸದರಿಗೆ ಸಚಿವರಿಗೆ ಮನವಿ ಪತ್ರ ಸಲ್ಲಸಿದ್ದೇವು ಅವರು ಸಹ ಸ್ಪಂದಿಸಿದ ನಿಟ್ಟಿನಲ್ಲಿ ನಮಗೆ ನೀರು ಹರಿಸುವ ಭರವಸೆ ನೀಡಿದ್ದರು ಅದರಂತೆ ಮಂಗಳವಾರ ಶುಭ ಸಂಜೆಯಲ್ಲಿ ಹೇಮಾವತಿ ನೀರು ಗುಬ್ಬಿ ನಗರಕ್ಕೆ ಹರಿದಿದೆ ಹೇಮಾವತಿ ಇಲಾಖೆಯ ಅಧಿಕಾರಿಗಳು ಬಂದು ಹೇರೂರು ಕೆರೆಯ ಹೇಮಾವತಿ ನಾಲಾ ಗೇಟ್ ತೆರೆದು ನೀರು ಹರಿಸಲು ಮುಂದಾಗಿದ್ದಾರೆ ಎಂದರು.

ನಮ್ಮ ಮನವಿ ಪತ್ರಕ್ಕೆ ಓಪ್ಪಿ ಶೀಘ್ರದಲ್ಲೇ ಹೇಮಾವತಿ ನೀರನ್ನು ನಮ್ಮ ಪಟ್ಟಣಕ್ಕೆ ಹರಿಸಿ ದಂತಹ ನಮ್ಮ ಜಿಲ್ಲೆಯ ಸಚಿವರು ಹಾಗೂ ಸಂಸದರಿಗೆ ನಮ್ಮ ಎಲ್ಲಾ ಸದಸ್ಯರ ಪರವಾಗಿ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಸಚಿವರ ಕಾರ್ಯ ಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಪಂ ಪಂ ಸದಸ್ಯರಾದ ಕೃಷ್ಣಮೂರ್ತಿ (ಕಿಟ್ಟಿ) ಮತ್ತು ಶಿವಕುಮಾರ್ ಹಾಗೂ ಇತರರು ಇದ್ದರು,

error: Content is protected !!