ಗುಬ್ಬಿ.ಗದ್ದೆಹಳ್ಳಿ.ಕಾಳೇನಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯಮಾರಾಟ ಅಡ್ಡೆಯ ಮೇಲೆ ಸಿ.ಎಸ್.ಪುರ ಪೊಲೀಸರ ದಾಳಿ.

ಗುಬ್ಬಿ ತಾಲ್ಲೂಕಿನ ಸಿ.ಎಸ್.ಹೊಬಳಿಯ ಕೆಲವು ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದ ಹಿನ್ನಲೆಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಕಾರ್ಯಚರಣೆ ಮಾಡಿದರು ಸಹ ಕೆಲ ಮದ್ಯ ಮಾರಾಟ ಗಾರು ಪೊಲೀಸರ ಕಣ್ತಪ್ಪಿಸಿ ಮದ್ಯ ಮಾರಾಟ ಮಾಡುತ್ತಿದ್ದರು. ಇದಕ್ಕೆ ಇತಿ ಹಾಡಲು ಹಾಗೂ ಗ್ರಾಮೀಣ ಭಾಗದಲ್ಲಿ ಅಕ್ರಮ ಮಧ್ಯೆ ತಡೆಗಟ್ಟಲು ಮುಂದಾಗಿರು ಸಿ.ಎಸ್. ಪುರ ಪೊಲೀಸ್ ಠಾಣೆಯ ಪಿ ಎಸ್ ಐ ಸೋಮಶೇಖರ್ ಮತ್ತು ಸಿಬ್ಬಂದಿ ವರ್ಗದವರು ಸಿ.ಎಸ್. ಪುರ ಹೋಬಳಿಯ ಗದ್ದೆಹಳ್ಳಿ .ಮತ್ತು ಕಾಳೇನಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ದ ಅಡ್ಡೆಯ ಮೇಲೆ ದಾಳಿ ನೆಡೆಸಿ ಮನೆಯಲ್ಲಿ ಸಂಗ್ರಹಿಸಿ ದ್ದ ವಿವಿಧ ಬಗೆಯ ಮಧ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಪರಾರಿಯಾದ ಅಕ್ರಮ ಮದ್ಯ ಮಾರಾಟಗಾರರು.ಅಕ್ರಮ ಮದ್ಯ ಮಾರಾಟ ದ ಖಚಿತ ಮಾಹಿತಿ ಆಧಾರಿಸಿ ಗದ್ದೆ ಹಳ್ಳಿ.ಕಾಳೇನಹಳ್ಳಿ ಗ್ರಾಮದ ಮದ್ಯಮಾರಾಟಗಾರರ ಮನೆಯಲ್ಲಿ ದಾಳಿ ನೆಡೆಸಿ ಮದ್ಯವನ್ನು ವಶಪಡಿಸಿಕೊಂಡು ಈ ದಂಧಯಲ್ಲಿ ತೋಡಗಿಸಿಕೊಂಡಿದ್ದ ಬೋರೆಗೌಡ ಎನ್ನುವ ವ್ಯಕ್ತಿ ಯನ್ನೂ ವಶಪಡೆದಿದ್ದಾರೆ ಇನ್ನೂರ್ವ ವ್ಯಕ್ತಿ ಶ್ರೀ ನಿವಾಸ್ ಮಾತ್ರ ಪರಾರಿಯಾಗಿದ್ದಾನೆ.

ಮಹಿಳೆಯರ ಮನವಿಗೆ ಸ್ಪಂದನೆ ನೀಡಿದ ಪಿಎಸ್ಐ. ಗ್ರಾಮದಲ್ಲಿ ಕುಡಿತದ ಹಾವಳಿಯಿಂದ ಕುಟುಂಬದ ಲ್ಲಿ ಸಾಕಷ್ಟು ಕಲಹಗಳು.ನೆಮ್ಮದಿ ಜೀವನವಿಲ್ಲದೆ ಕುಡಿತದ ಚಟಕ್ಕೆ ದಾಸರಾಗುವ ತಮ್ಮ ಗಂಡದಿರು ನಿತ್ಯ ಸಹ ಕುಡಿದು ಗಲಾಟೆ ಮಾಡುವುದರಿಂದ ಮನೆಯಲ್ಲಿ ಆಶಾಂತಿ ವಾತಾವರಣ ಸೃಷ್ಟಿ ಯಾದ ಹಿನ್ನಲೆಯಲ್ಲಿ ಸ್ಥಳೀಯ ಮಹಿಳೆಯರು ಗ್ರಾಮಗಳಲ್ಲಿ ಕುಡಿತದ ಹಾವಳಿ ನಿಯಂತ್ರಣ ಕ್ಕೆ ಹಾಗೂ ಅಕ್ರಮ ಮಧ್ಯ ಮಾರಾಟದ ಬಗ್ಗೆ ಸಿ.ಎಸ್.ಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಕ್ರಮ ಮಧ್ಯತಡೆಯುವ ಸಂಕಲ್ಪ ಮಾಡಿದ ಪಿ ಎಸ್ ಐ ಸೋಮಶೇಖರ್ ಮತ್ತು ಸಿಬ್ಬಂದಿ ವರ್ಗದವರು ಸಿ.ಎಸ್.ಪುರ ಹೋಬಳಿಯ ಅಕ್ರಮ ಮಧ್ಯ ಮಾರಾಟ ದ ದಂಧೆಗೆ ಕಾಡಿವಾಣ ಹಾಕಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ.

ಸಿ.ಎಸ್ .ಪುರ.ಹೋಬಳಿಯ ವ್ಯಾಪ್ತಿಯಲ್ಲಿ ಅಕ್ರಮ ಮಧ್ಯ ಕಂಡರೆ ಕಠಿಣ ಕ್ರಮ. ಇನ್ನೂ ಮಧ್ಯ ಮಾರಾಟ ಕ್ಕೆ ಸ್ವಲ್ಪ ಚುರುಕು ಮುಟ್ಟಿಸಿದ ಸಿ.ಎಸ್.ಪುರ ಪೊಲೀಸರು ಇನ್ನೂ ಸಿ.ಎಸ್. ಪುರ ಹೋಬಳಿ ಯಲ್ಲಿ ಯಾವುದೇ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಕಂಡು ಬಂದರೆ ಮುಲ್ಲಾಜಿಲ್ಲದೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ದಂಧೆಯಲ್ಲಿ ಈ ಕಾರ್ಯಚರಣೆ ಮೂಲಕ ಅಕ್ರಮ ದಂಧೆ ಯಲ್ಲಿ ತೊಡಗಿರುವವರಿಗೆ ಎಚ್ಚರಿಕೆ ನೀಡಿದ್ದಾರೆ.

ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ.ಲಾಕ್ ಡೌನ್ ಪ್ರಾರಂಭ ದಿನದಿಂದ ಇದು ವರೆವಿಗೂ ಜನತೆ ಜೀಲನ ನೆಡೆಸುವುದು ಕಷ್ಟ ದಪರಿಸ್ಥಿತಿ ತಲುಪಿರುವ ವೇಳೆಯಲ್ಲಿ ಕೆಲ ಮಧ್ಯ ವ್ಯಾಸನಿಗಳು ದುಡಿದ ಹಣವನ್ನು ಕುಡಿಯಲು ಬಳಸುವ ಮೂಲಕ ಕುಟುಂಬದ ಜೀವನವನ್ನೇ ಮರೆತು ತಾನು ದುಡಿದಿರುವುದನ್ನು ಕುಡಿಯುವುದಕ್ಕೆ ಬಳಸುತ್ತಿರುವುದರಿಂದ ಅದೆಷ್ಟೋ ಕುಟುಂಬ ಗಳು ಬೀದಿ ಗೆ ಬೀಳುವ ಸ್ಥಿತಿ ತಲುಪಿವೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಸಂಜೆಯ ಸಮಯದಲ್ಲಿ ಅಕ್ರಮ ವಾಗಿ ಮಾರಾಟ ಮಾಡುವವರಿಂದ ದುಬಾರಿ ಬೆಲೆಗೆ ಮಧ್ಯ ಪಡೆದು ತಮ್ಮ ಜೀವ ಜೀವನ ಎರಡು ಹಾಳುಮಾಡಿಕೊಳ್ಳುವ ಪರಿಸ್ಥಿತಿ ನೋಡಿ ಗ್ರಾಮದ ಮಹಿಳೆಯರು ನೀಡಿದ ದೂರಿಗೆ ಕೂಡಲೇ ಸ್ಪಂದಿಸಿದ ಸಿ.ಎಸ್. ಪುರ ಪೊಲೀಸರ ಕಾರ್ಯ ಕ್ಕೆ ಗ್ರಾಮದ ಮಹಿಳೆಯರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಾಳಿಯಲ್ಲಿ ಸಿಬ್ಬಂದಿ ಗಳಾದ ದುಶ್ಯಂತ್. ಭರತ್. ಮುಂಜುನಾಥ.ಇತರ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

error: Content is protected !!