ಗುಬ್ಬಿ:ಜಿ‌ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋರೊನಾ ವಾರಿಯರ್ಸ್ ಗೆ ದಿನಸಿಕಿಟ್ ವಿತರಣೆ.

ಗುಬ್ಬಿ ತಾಲೂಕು ಜಿ ಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕರೊನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತರುಗಳು,ಅಂಗನವಾಡಿ ಕಾರ್ಯಕರ್ತರು ಹಾಗೂ ವಾಟರ್ ಮನ್ ಗಳಿಗೆ ದಿನಸಿ ಕಿಟ್ ಗಳು, ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳನ್ನು ಗೋಸಲ ಚನ್ನಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಸಮಾಜ ಸೇವಕರಾದ ಹೊಸಹಳ್ಳಿ ಗಿರೀಶ್ ರವರು ( SG GROUPS)ಹಾಗೂ ಮಡೇನಹಳ್ಳಿ ವಿ ಎಸ್ ಎಸ್ ಎನ್ ನಿರ್ದೇಶಕರಾದ ಗುರುಪ್ರಸಾದ್ ರವರ ಸಹಕಾರದಿಂದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ ಮಾತನಾಡಿ ಕೋರೋನಾ ಸಮಯದಲ್ಲಿ ಜನತೆಯ ಆರೋಗ್ಯ ಹಿತ ಕಾಪಾಡಲು ಹಗಲಿರುವ ಶ್ರಮ ವಹಿಸಿ ಕರ್ತವ್ಯವನ್ನು ನಿಭಾಯಿಸುವ ಕೋರೋನಾ ವಾರಿಯರ್ಸ್ ಸೇವೆ ಶ್ಲಾಘನೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅದರಂತೆ ಸಿಬ್ಬಂದಿ ಗಳು ತಮ್ಮ ಆರೋಗ್ಯ ದ ಕಡೆಗೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ ಕೋರೋನಾ ಸೊಂಕು ಬಹಳ ವ್ಯಾಪಕ ವಾಗಿ ಹರಡುತ್ತಿರುವ ಸಂದರ್ಭದಲ್ಲಿ ಅಂಗನವಾಡಿ. ಆಶಾ ಕಾರ್ಯಕರ್ತರು. ಕಂದಾಯ ಪೊಲೀಸ್ ಇಲಾಖೆ .ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸ್ವಯಂ ಸೇವಕರ ಸೇವೆ ಅನನ್ಯ ವಾದದ್ದು ಅದರಂತೆ ಸೇವೆಗೆ ಸಹಕಾರ ನೀಡುವ ನಿಟ್ಟಿನಲ್ಲಿ ಸಾಕಷ್ಟು ದಾನಿಗಳು ಸಹ ಹಲವು ಬಗೆಯ ಸೇವೆಗಳನ್ನು ನೀಡುವಲ್ಲಿ ಮುಂದಾಗುವ ಮೂಲಕ ಕೋರೋನಾ ವಾರಿಯರ್ಸ್ ಗೆ ಗೋಸಲ ಚನ್ನಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಸಮಾಜ ಸೇವಕರಾದ ಹೊಸಹಳ್ಳಿ ಗಿರೀಶ್ ರವರು ( SG GROUPS)ಹಾಗೂ ಮಡೇನಹಳ್ಳಿ ವಿ ಎಸ್ ಎಸ್ ಎನ್ ನಿರ್ದೇಶಕರಾದ ಗುರುಪ್ರಸಾದ್ ರವರ ಸಹಕಾರದಿಂದ ದಿನಸಿಕಿಟ್. ಆರೋಗ್ಯ ಕಿಟ್ ವಿತರಣೆ ಮಾಡುತ್ತಿರುವುದು ಸಂತೋಷ ದ ಸಂಗತಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯ ಕ್ರಮದಲ್ಲಿ ಇಂದು ಮಾಜಿ ತಾಲೂಕು ಪಂಚಾಯತಿ ಉಪಾಧ್ಯಕ್ಷರಾದ ಜಿ ಕಲ್ಪನಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿದ್ಧಗಂಗಮ್ಮ,,ಉಪಾಧ್ಯಕ್ಷರಾದನಾಗರಾಜ ಅರಸ್,ಸದಸ್ಯರುಗಳಾದ ರೇಣುಕಾ ಪ್ರಸಾದ್,ಲೋಕೇಶ್ ,ನರಸಿಂಹಮೂರ್ತಿ, ಗೌರಮ್ಮ ಬಸವರಾಜು,ಶಿವನಂಜಯ್ಯ ,ರವಿಹಾಗೂ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!