ಗುಬ್ಬಿ: ಸ್ವಾತಂತ್ರ್ಯ ದಿನಾಚರಣೆಯ ದಿನವನ್ನು ಬೇಕಾಬಿಟ್ಟಿ ಆಚರಣೆ ಮಾಡಲು ಮುಂದಾಯಿತೆ? ಗುಬ್ಬಿ ಪೊಲೀಸ್ ಇಲಾಖೆ.

75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ದೇಶದೆಲ್ಲೆಡೆ ವಿಜೃಂಭಣೆಯಿಂದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಗುಬ್ಬಿ ತಾಲೂಕು ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿ ಪಟ್ಟಣದ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪ ಅಲಂಕಾರ ಮಾಡುವಂತೆ ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿ ಸಭೆಯಲ್ಲಿ ಅಧ್ಯಕ್ಷರಾದ ತಹಶೀಲ್ದಾರ್ ಅವರು ನಿರ್ಣಯ ಮಾಡಿದ್ದರು.


ಸ್ವಾತಂತ್ರ್ಯ ದಿನವಾದ ಇಂದು ಬಹುತೇಕ ಸರ್ಕಾರಿ ಕಚೇರಿಗಳನ್ನು ದೀಪಾಲಂಕಾರ ಮಾಡಿ ಹಬ್ಬವನ್ನು ಆಚರಿಸಿದ್ದಾರೆ ಆದರೆ ಇದಕ್ಕೆಲ್ಲ ತದ್ವಿರುದ್ದ ಎಂಬಂತೆ ಗುಬ್ಬಿ ಪೊಲೀಸ್ ಇಲಾಖೆ ಮಾತ್ರ ಯಾವುದೇ ದೀಪಾಲಂಕಾರ ಮಾಡದೆ ಸ್ವಾತಂತ್ರ್ಯ ದಿನಾಚರಣೆಯ ದಿನವನ್ನು ಬೇಕಾಬಿಟ್ಟಿ ಆಚರಣೆ ಮಾಡಿದಂತೆ ಕಾಣುತ್ತಿದೆ ಅಲ್ಲದೆ ಸಭೆಯ ನಿರ್ಣಯವನ್ನು ಗಾಳಿಗೆ ತೂರಿದ್ದಾರೆಯೇ? ಇದು ಗುಬ್ಬಿ ಪಟ್ಟಣದ ಸಾರ್ವಜನಿಕರಲ್ಲಿ ಮತ್ತು ದೇಶ ಭಕ್ತರಲ್ಲಿ ಆತಂಕ ಮತ್ತು ಬೇಸರ ಮೂಡಿಸಿದೆ.

ಗುಬ್ಬಿ ವೃತ್ತ ನಿರೀಕ್ಷರ ಕಛೇರಿಯಲ್ಲಿ ವಿದ್ಯುತ್ ದ್ವೀಪಾಲಂಕಾರವಿಲ್ಲದಿರುವುದು.
ಗುಬ್ಬಿ ತಾಲೂಕು ಕಛೇರಿ.
ಗುಬ್ಬಿ ಪಂಚಾಯತ್ ರಾಜ್ ಇಲಾಖೆ.
ಗುಬ್ಬಿ ಕೃಷಿ ಇಲಾಖೆ.
ತಾಲೂಕು ಕಛೇರಿ.

Leave a Reply

Your email address will not be published. Required fields are marked *

error: Content is protected !!