ಗುಬ್ಬಿ: ಉದ್ಯಮಿಗಳೂ, ಸರ್ಕಾರಿ ನೌಕರರು, ರಾಜಕಾರಣಿಗಳನ್ನ ಹನಿಟ್ರ್ಯಾಪ್ ಬಲೆ ಬೀಳಿಸಿಕೊಂಡು ಹಣ ಪೀಕುವುದೇ ಕೆಲವರ ಉದ್ಯೋಗವಾಗಿದೆ. ಇದೀಗ ತುಮಕೂರಿನಲ್ಲೂ ಸದ್ದಿಲ್ಲದೇ ಹನಿಟ್ರ್ಯಾಪ್ ಗ್ಯಾಂಗ್‌ನ ಕರಾಮತ್ತು ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಹನಿಟ್ರ್ಯಾಪ್ ಬಲೆ ಬಿದ್ದಿರೋದು ಗುಬ್ಬಿ ಪಟ್ಟಣ ಪಂಚಾಯ್ತಿಯ ಮಾಜಿ ಅಧ್ಯಕ್ಷ ಜಿ.ಎನ್ ಅಣ್ಣಪ್ಪ ಸ್ವಾಮಿ…
ಸದ್ಯ ಬಿಜೆಪಿ ಮುಖಂಡರು, ಗುಬ್ಬಿ ಪಟ್ಟಣ ಪಂಚಾಯ್ತಿಯ ಹಾಲಿ ಸದಸ್ಯರಾಗಿರೋ ಅಣ್ಣಪ್ಪ ಸ್ವಾಮಿಗೆ ಹನಿಟ್ರ್ಯಾಪ್ ಸುಂದರಿಯ ಮೋಹದ ಬಲೆ ಬಿದ್ದು, ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಇದೀಗ ಮತ್ತೆ ಸುಂದ್ರಿ ಗ್ಯಾಂಗ್ 20 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದು ಇದಕ್ಕೆ ಹೆದರಿ ಗುಬ್ಬಿ ಪೊಲೀಸರ ಮೊರೆಹೋಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಫೇಸ್‌ಬುಕ್‌ನಲ್ಲಿ ಬಂದ ಸುಂದರಿಯ ರಿಕ್ವೇಸ್ಟ್‌ನನ್ನು ಅಣ್ಣಪ್ಪಸ್ವಾಮಿ ಅಕ್ಸೆಪ್ಟ್ ಮಾಡಿಕೊಂಡಿದ್ದಾರೆ. ಸ್ವಲ್ಪ ದಿನದ ಬಳಿಕ ಹಾಯ್, ಗುಡ್‌ಮಾರ್ನಿಂಗ್ ಮೇಸೆಜ್‌ನಿಂದ ಸಂಭಾಷಣೆ ಶುರುವಾಗಿದ್ದು, ಸುಂದರಿ ಹಾಗೂ ಅಣ್ಣಪ್ಪಸ್ವಾಮಿ ನಡುವೆ ಸಲುಗೆ ಮಿತಿ ಮೀರಿದೆ.. ಅದೆಷ್ಟರಮಟ್ಟಿಗೆ ಅಂದ್ರೆ ವಿಡೀಯೋ ಕಾಲಿಂಗ್ ಮಾಡುವ ಮಟ್ಟಕ್ಕೆ ತಲುಪಿದೆ.. ಇದನ್ನೇ ಬಂಡವಾಳ ಮಾಡಿಕೊಂಡ ಸುಂದರಿ ಹಲವು ಕಡೆ ಬಲವಂತವಾಗಿ ಕರೆಸಿಕೊಂಡು ಮದುವೆ ಆಗುವಂತೆ ಒತ್ತಾಯಿಸಿದ್ದಳು ಎನ್ನಲಾಗಿದೆ.
ಸುಂದ್ರಿ ಬಲೆಗೆ ಬಿದ್ದ ಅಣ್ಣಪ್ಪಸ್ವಾಮಿ ಆಕೆ ಹೇಳಿದ್ದನ್ನೆಲ್ಲಾ ಕೇಳ್ತಾ ಇದ್ದ.. ಇದನ್ನೇ ಬಂಡವಾಳ ಮಾಡಿಕೊಂಡ ಸುಂದರಿ ಆಗಾಗ್ಗೆ ಮೀಟ್ ಕೂಡ ಮಾಡ್ತ ಇದ್ರು… ಸ್ವಲ್ಪ ದಿನದ ಬಳಿಕ ಅಣ್ಣಪ್ಪ ಸ್ವಾಮಿ ಸೈಲೆಂಟ್ ಆಗಿದ್ರು.. ಆಗ ಮೀಟ್ ಆಗಲಿಲ್ಲ ಅಂದ್ರೆ ವಿಡಿಯೋ ವೈರಲ್ ಮಾಡುವುದಾಗಿ ಹೆಸರಿಸಿ, ನಾನು ಕರೆದಾಗ ಬರಬೇಕು ಅಂತಾ ಹೆದರಿಸಿ ರೂಂ ಮಾಡಿ ಅವಳಿಗೆ ಬೇಕಾದಂತೆ ನಡೆದುಕೊಳ್ಳುತ್ತಿದ್ದಂತೆ. ಯಾವಾಗ ಮದುವೆ ಮಾಡಿಕೊಳ್ಳಲ್ಲ ಅಣ್ಣಪ್ಪ ಸ್ವಾಮಿ ನಿರಾಕರಿಸಿದ್ನೋ ಸುಂದ್ರಿ ಆಕೆಯ ಸ್ನೇಹಿತರೊಂದಿಗೆ ಸೇರಿ ಅವಳ ಜೊತೆಗಿನ ಫೋಟೋ, ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾಳೆ ಅಂತಾ ಮಾಜಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ಗಂಭೀರ ಆರೋಪ ಮಾಡಿ ಗುಬ್ಬಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸದ್ಯ ಈ ಸಂಬಂಧ ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹನಿಟ್ರ್ಯಾಪ್ ಗ್ಯಾಂಗ್‌ಗೆ ಬಲೆ ಬೀಸಿದ್ರು. ಕ್ಯಾತ್ಸಂದ್ರ ಮೂಲದ ನಿಶಾ, ಆಕೆಯ ಸ್ನೇಹಿತೆ ಜ್ಯೋತಿಯನ್ನ ವಶಕ್ಕೆ ಪಡೆದು ಸಾಂತ್ವಾನ ಕೇಂದ್ರದಲ್ಲಿ ಇರಿಸಿ ವಿಚಾರಣೆ ನಡೆಸಲಾಗ್ತಿದೆ. ಜೊತೆಗೆ ಹನಿಟ್ರ್ಯಾಪ್ ಗ್ಯಾಂಗ್‌ನಲ್ಲಿದ್ದ ಗುಬ್ಬಿ ಪಟ್ಟಣದ ಭರತ್ ಹಾಗೂ ಬಿಲ್ಲೇಪಾಳ್ಯದ ಬಸವರಾಜು ಎಂಬುವವರಿಗಾಗಿ ಹುಡುಕಾಟ ನಡೆಸಲಾಗ್ತಿದೆ.
ಇನ್ನೊಂದು ಇಂಟೆಸ್ಟಿಂಗ್ ವಿಚಾರ ಅಂದ್ರೆ ಗುಬ್ಬಿ ಪಟ್ಟಣದಲ್ಲಿ ಕೊಲೆಯಾಗಿದ್ದ ಕುರಿಮೂರ್ತಿ ಕೇಸ್ ನಲ್ಲಿ ಬಸವರಾಜು ಹಾಗೂ ಭರತ್ ಆರೋಪಿಗಳಾಗಿದ್ದಾರೆ. ಅಲ್ದೇ ಅಣ್ಣಪ್ಪ ಸ್ವಾಮಿ ಕೂಡ ಗುಬ್ಬಿ ತಾಲೂಕಿನಲ್ಲಿ ನಡೆದ ಸಾವಿರಾರು ಎಕರೆ ಸರ್ಕಾರಿ ಜಮೀನು ಗೋಲ್ಮಾಲ್ ಕೇಸ್ ನಲ್ಲಿ ಎ2 ಆರೋಪಿ ಆಗಿದ್ದು, ಅಧ್ಯಕ್ಷನಾಗಿದ್ದ ವೇಳೆ ಅಣ್ಣಪ್ಪಸ್ವಾಮಿ 3 ತಿಂಗಳು ತಲೆಮರೆಸಿಕೊಂಡಿದ್ರಂತೆ. ಅದೇನೆ ಇರಲಿ ನಿಜಕ್ಕೂ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ಹನಿಟ್ರ್ಯಾಪ್‌ಗೆ ಒಳಗಾದ್ರಾ ಅಥವಾ ಸುಂದರಿಯನ್ನ ಪ್ರೀತಿ ಮಾಡಿದ್ರಾ..? ಪ್ರೀತಿ ಹೆಸರಲ್ಲಿ ವಂಚನೆ ಮಾಡಲು ಅಣ್ಣಪ್ಪ ಸ್ವಾಮಿನೇ ಮುಂದಾದ್ರಾ ಇವೆಲ್ಲಾ ವಿಚಾರಗಳು ಪೊಲೀಸರ ತನಿಖೆಯಿಂದಲೇ ಬಯಲಾಗಬೇಕಿದೆ.