ಪೊಲೀಸರಿಗೆ ಅಮೆರಿಕದ ಸಿಗ್ ಸೌರ್ ರೈಫಲ್‍ಗಳು, ಪಿಸ್ತೂಲ್ ನೀಡಲು ಸರ್ಕಾರ ನಿರ್ಧಾರ.

ಶ್ರೀನಗರ: ಜಮ್ಮು ಕಾಶ್ಮೀರ ಪೊಲೀಸರಿಗೆ ಆಧುನಿಕವಾದ ಅಮೆರಿಕದ ಸಿಗ್ ಸೌರ್ ರೈಫಲ್‍ಗಳು ಮತ್ತು ಸಿಗ್ ಸೌರ್ ಎಂಪಿಎಕ್ಸ್ 9 ಎಂಎಂ ಅಮೆರಿಕನ್ ನಿರ್ಮಿತ ಪಿಸ್ತೂಲ್‍ಗಳನ್ನು ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಮೂಲಕ ಅಮೆರಿಕದ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶದ ಮೊದಲ ಪೊಲೀಸ್ ಪಡೆ ಎಂಬ ಹೆಗ್ಗಳಿಕೆಗೆ ಜಮ್ಮು ಕಾಶ್ಮೀರ ಪೊಲೀಸರು ಪಾತ್ರವಾಗಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇತ್ತೀಚೆಗೆ ಸರ್ಕಾರಿ ಸಂಗ್ರಹಣೆ ಪೊರ್ಟಲ್ ಜಿಇಎಂ (ಸರ್ಕಾರಿ ಇ-ಮಾರುಕಟ್ಟೆ) ನಲ್ಲಿ ಶಸ್ತ್ರಾಸ್ತ್ರ ಸಂಗ್ರಹಣೆಗಾಗಿ ಜಾಗತಿಕ ಬಿಡ್‍ಗಳನ್ನು ಆಹ್ವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗಣ್ಯರ ಭದ್ರತೆಯಂತಹ ವಿಶೇಷ ಕಾರ್ಯಾಚರಣೆಗಾಗಿ ದೇಶದ ಪೊಲೀಸರು 500 ಸಿಗ್ ಸೌರ್ 716 ರೈಫಲ್‍ಗಳು ಮತ್ತು 100 ಸಿಗ್ ಸೌರ್ ಎಂಪಿಎಕ್ಸ್9ಎಂಎಂ ಪಿಸ್ತೂಲ್‍ಗಳನ್ನು ಪಡೆಯಲಿದ್ದಾರೆ.

ಈ ಆಮದು ಮಾಡಿಕೊಂಡ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪಡೆದ ನಂತರ, ಜಮ್ಮು ಕಾಶ್ಮೀರ ಪೊಲೀಸರು ಭಯೋತ್ಪಾದನೆ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಹುದು ಎಂದು ತಜ್ಞರು ನಂಬಿದ್ದಾರೆ.

ಸಿಗ್ ಸೌರ್-716 ಅಸಾಲ್ಟ್ ರೈಫಲ್‍ನ 7.62*51 ಎಂಎಂ ಕಾಟ್ರ್ರಿಡ್ಜ್‍ಗಳು ಐಎನ್‍ಎಸ್‍ಎಎಸ್ (ಇಂಡಿಯನ್ ಸ್ಮಾಲ್ ಆಮ್ರ್ಸ್ ಸಿಸ್ಟಮ್) ರೈಫಲ್‍ಗಳ 5.56*45 ಎಂಎಂ ಮಧ್ಯಂತರ ಕಾಟ್ರ್ರಿಡ್ಜ್‍ಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಕೆಜಿ ರೈಫಲ್ ಪ್ರತಿ ನಿಮಿಷಕ್ಕೆ 650-850 ಬುಲೆಟ್‍ಗಳನ್ನು ಹಾರಿಸಬಲ್ಲದು ಮತ್ತು ಪ್ರತಿ-ಬಂಡಾಯ ಕಾರ್ಯಾಚರಣೆಗಳಲ್ಲಿ ಪರಿಣಾಮಕಾರಿ ಅಸ್ತ್ರವಾಗಲಿದೆ.

ಜೊತೆಗೆ, ರೈಫಲ್ ದೃಢವಾದ, ಆಧುನಿಕ ಮತ್ತು ಯಾವುದೇ ಸಂದರ್ಭದಲ್ಲೂ ಬಳಸಲು ಸರಳವಾಗಿದೆ. ಅದೇ ರೀತಿ, 2.94 ಕೆಜಿಯ ಎಸ್‍ಐಜಿ ಎಂಪಿಎಕ್ಸ್ 9ಎಂಎಂ ಪಿಸ್ತೂಲ್ ಪ್ರತಿ ನಿಮಿಷಕ್ಕೆ 850 ಗುಂಡುಗಳನ್ನು ಹಾರಿಸಬಲ್ಲದು. ಎರಡೂ ಆಯುಧಗಳು ಅನಿಲ ಚಾಲಿತವಾಗಿವೆ.

ಜಮ್ಮು ಕಾಶ್ಮೀರ ಪೊಲೀಸರು ಈಗಾಗಲೇ ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡಲು ಹೊಸ ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್‍ಗಳು ಮತ್ತು ಬುಲೆಟ್ ಪ್ರೂಫ್ ವಾಹನಗಳನ್ನು ಸಜ್ಜುಗೊಳಿಸಿದ್ದಾರೆ. ಈ ಹೊಸ ಆಯುಧವು ಭಯೋತ್ಪಾದಕರು ಅಡಗಿರುವ ಮತ್ತು ಭಯೋತ್ಪಾದಕರ ಮೇಲೆ ದೀರ್ಘ ದಾಳಿಯ ಸಮಯದಲ್ಲಿ ಯಾವುದೇ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಪೊಲೀಸರಿಗೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

error: Content is protected !!