ಮದುಗಿರಿಯಲ್ಲಿ ಸರ್ಕಾರಿ ವೈಧ್ಯಕೀಯ ಕಾಲೇಜಿಗೆ ಒತ್ತಾಯ : ಎಂ ಚಿದಾನಂದ ಗೌಡ ಭರವಸೆ.

ಮಧುಗಿರಿ : ಮಧುಗಿರಿ ಉಪವಿಭಾಗಕ್ಕೆ ಸರಕಾರಿ ವೈಧ್ಯಕೀಯ ಕಾಲೇಜಿನ ಅವಶ್ಯಕತೆಯಿದ್ದು ಮಂಜೂರು ಮಾಡಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದಾಗಿ ವಿಧಾನ ಪರಿಷತ್ ಸದಸ್ಯ ಎಂ.ಚಿದಾನಂದ ಗೌಡ ತಿಳಿಸಿದರು. 

ಪಟ್ಟಣದ ವಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಾರ್ಟಿ ಮಧುಗಿರಿ ಮಂಡಲ ವತಿಯಿಂದ ಅಭಿನಂದನಾ ಸಮಾರಂಭ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಧುಗಿರಿ ಶಿರಾ ಹಾಗೂ ಕೊರಟಗೆರೆ ತಾಲೂಕಿನ ಯಾವ ಭಾಗದಲ್ಲಾದರೂ ವೈದ್ಯಕೀಯ ಕಾಲೇಜು ಸ್ಥಾಪಿಸಿದರೆ ಹಿಂದೂಳಿದ ಭಾಗ ಅಭಿವೃದ್ಧಿಯಾಗುತ್ತದೆ.

ಪ್ರವಾಸೋದ್ಯಮ ಕ್ಷೇತ್ರದಲ್ಲೂ ವಿಪುಲ ಅವಕಾಶಗಳಿದ್ದು ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ಘೋಷಿಸಬೇಕು ಎಂದರು.

ಶಿರಾ ಹಾಗೂ ಮಧುಗಿರಿ ನನ್ನ ಎರಡು ಕಣ್ಣುಗಳಿದ್ದಂತೆ ಭಾಗದ ಸಮಸ್ಯೆಗಳಿಗೆ ದ್ವನಿಯಾಗಿ ವಿದಾನ ಪರಿ?ತ್ ನಲ್ಲಿ ಕೆಲಸ ಮಾಡುತ್ತೇನೆ ಎಂದರು.

ತಾಲೂಕು ಬಿ.ಜೆ.ಪಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ,  2023 ರ ವಿದಾನ ಸಭ ಚುನಾವಣೆಯಲ್ಲಿ ನಮ್ಮ ಪಕ್ಷ 150ಸ್ಥಾನಗಳನ್ನು ಗೆಲ್ಲಲಿದ್ದು, ಮಧುಗಿರಿ ಕ್ಷೇತ್ರದಿಂದ ಬಿ.ಜೆ.ಪಿ ಶಾಸಕರು ವಿದಾನ ಸಭೆ ಪ್ರವೇಶಿಸಲಿದ್ದಾರೆ ಎಂದ ಅವರು ಅತೀ ಹಿಂದುಳಿದ ಪ್ರದೇಶವಾದ  ಮಧುಗಿರಿಯನ್ನು  ಕಂದಾಯ ಜಿಲ್ಲೆಯನ್ನಾಗಿ ಘೋಷಿಸಲು ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದಾಗಿ ತಿಳಿಸಿದರು.

ಬಿ.ಜೆ.ಪಿ ಜಿಲ್ಲಾ ಕಾರ್ಯದರ್ಶಿ ರವಿಕುಮಾರ್, ಮಧ್ಯಮ ಪ್ರಮುಖ ಕೊಪ್ಪಳ್ ನಾಗರಾಜ್, ಪಧಾಧಿಕಾರಿಗಳಾದ ಎಚ್.ಗೋಪಾಲ್ ರಾವ್, ಜಯಣ್ಣ, ನಾಗರಾಜಪ್ಪ, ರಾಮಚಂದ್ರಪ್ಪ, ಸೀತಾರಾಂ, ನಾಗೇಂದ್ರ,ರಮೇಶ್, ಸುರೇಶ್ ಚಂದ್ರ, ಕಾರ್ತಿಕ್, ಮಹಿಳಾ ಮೊರ್ಚಾ ಅಧ್ಯಕ್ಷೆ ರತ್ನಮ್ಮ, ಲಕ್ಷ್ಮಿ, ಕಲ್ಪನಾ,ಇನ್ನೂ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!