ತುಮಕೂರು: ಶಿಕ್ಷಕರ ಪ್ರಮುಖ ಬೇಡಿಕೆಯಾದ ಓಪಿಎಸ್ ನ್ನ ಸಂದರ್ಭ ನೋಡಿಕೊಂಡು ಜಾರಿ ಮಾಡುವುದಾಗಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಶಿಕ್ಷಕರಿಗೆ ಭರವಸೆ ನೀಡಿದ್ದಾರೆ.
ತುಮಕೂರಿನ ಎಂಪ್ರೆಸ್ ಆಡಿಟೋರಿಯಂನಲ್ಲಿ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ನೂತನ ವಿಧಾನ ಪರಿಷತ್ ಸದಸ್ಯ ಡಿ ಟಿ ಶ್ರೀನಿವಾಸ್ ಕೃತಜ್ಞತಾ ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದರು. ಕರ್ನಾಟಕ ಪ್ರಗತಿ ಪಥದಲ್ಲಿ ಸಾಗುತ್ತಿದೆ ರಾಜ್ಯದ ಆರ್ಥಿಕ ಸ್ಥಿತಿ ಬದಲಾದಂತೆಲ್ಲಾ ನಿಮಗೂ ಅದರ ಫಲಸಿಕ್ಕಿದೆ. ಕಾಂಗ್ರೆಸ್ ಪ್ರನಾಳಿಕೆಯ ಅಧ್ಯಕ್ಷ ನಾನೇ ಆಗಿದ್ದೆ ಯಾರಿಗೆ ಆದ್ಯತೆ ಕೊಡಬೇಕು ಎಂದು ಯೋಚಿಸಿ ಬಡವರು, ನಿರ್ಗತಿಕರು, ಆರ್ಥಿಕ ಹಿಂದುಳಿದವರಿಗೆ ಆದ್ಯತೆ ನೀಡಲು ಕಾಂಗ್ರೆಸ್ ಮಹಿಳೆಯರಿಗೆ ಗ್ಯಾರಂಟಿ ಯೋಜನೆ ನೀಡಿದೆ. ಗ್ಯಾರಂಟಿ ನೀಡದೆ ಇದ್ರೂ ನಾವು ಗೆಲ್ಲುತ್ತಿದ್ದೆವು ಆದರೆ ಕಾಂಗ್ರೆಸ್ ಪಕ್ಷದ ಬದ್ದತೆ ಬಡವರು ದೀನ ದಲಿತರು, ಮಹಿಳೆಯರನ್ನ ಸಬಲೀಕರಣ ಮಾಡುವುದು, ಹಾಗಾಗಿ ಆದ್ಯತೆಗಳನ್ನ ಇಟ್ಟುಕೊಂಡು ಹೋಗಲು ತೀರ್ಮಾನ ಮಾಡಿದ್ದೇವೆ ಇದನ್ನ ನೀವು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ಪ್ರನಾಳಿಕೆ ಬರೆಯುವಾಗ, ನಿಮಗೂ ಸಹ ಏನಾದ್ರೂ ಪ್ರನಾಳಿಕೆಯಲ್ಲಿ ಸೇರಿಸಬೇಕೆಂಬ ಉದ್ದೇಶದಿಂದ ಎರಡು ಮೂರು ದಿನ ಚರ್ಚೆ ಮಾಡಿದೆವು. ಓಪಿಎಸ್ ಜಾರಿಮಾಡಿ ಎಂಬ ಚರ್ಚೆ ಬಂತು, ಅಂತಿಮವಾಗಿ ನಾವು ನಿಮ್ಮ ಪರವಾಗಿ ನಿಲ್ತೆವೆ ಎಂದು ಮಾತುಕೊಟ್ಟೆವು. ನಾವು ಸಿಂಪೋಥೆಟಿಕಲಿ ಓಪಿಎಸ್ ನ್ನ ಜಾರಿಗೆ ತರ್ತಿವಿ ಎಂದು ಪ್ರನಾಳಿಕೆಯಲ್ಲಿ ಘೋಷಣೆ ಮಾಡಿದ್ದೇವೆ. ಅದನ್ನ ಜಾರಿಗೆ ತರಲು ಒಂದಷ್ಟು ಸಮಯ ಬೇಕಲ್ವಾ ಎಂದರು.
ಸರಕಾರದ ಮುಂದಿರುವ 7ನೇ ವೇತನ ಆಯೋಗ ಶಿಫಾರಸ್ಸು ಜಾರಿಗೆ ತರಲು 18 ಸಾವಿರ ಕೋಟಿ ರೂ ಬೇಕು. ಇದರ ಜೊತೆಗೆ ಒಪಿಎಸ್ ಜಾರಿಗೆ ಸಹ ನೂರಾರು ಕೋಟಿ ರೂ ಹಣ ಬೇಕು ಹಾಗಾಗಿ ಒಂದೇ ದಿನದಲ್ಲಿ ಎಲ್ಲವನ್ನು ಜಾರಿಗೆ ತರಲು ಸಾಧ್ಯವಿಲ್ಲ. 6ನೇ ವೇತನ ಆಯೋಗ ಜಾರಿಗೆ ತಂದಿದ್ದು ಸಹ ನಮ್ಮದೇ ಸರಕಾರ, ಸಿದ್ದರಾಮಯ್ಯ ಸರಕಾರ ಯಾರಿಗೂ ಮೋಸ ಮಾಡಲ್ಲ ತಾಳ್ಮೆಯಿಂದ ಇರಿ ಸಂದರ್ಭ ನೋಡಿಕೊಂಡು ಓಪಿಎಸ್ ಜಾರಿ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.