ಜೆಡಿಎಸ್ ಗೆ ಗುಡ್‌ ಬೈ ಹೇಳಿದ ಹಿರಿಯ ಮುಖಂಡ!

ಪಾವಗಡ : ತತ್ವ ಸಿದ್ಧಾಂತ ಹಾಗೂ ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ. ಇನ್ನೂ ನನ್ನಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾಲೂಕು ಜಾತ್ಯಾತೀತ ಜನತಾ ದಳಕ್ಕೆ ಗುಡ್‌ ಬೈ ಹೇಳುವ ಮೂಲಕ ರಾಜಕೀಯ ನಿವೃತ್ತಿ ಪಡೆಯುತ್ತಿರುವುದಾಗಿ ಮಾಜಿ ಎಪಿಎಂಸಿ ಅಧ್ಯಕ್ಷ ಹಾಗೂ ತಾಲೂಕು ಜೆಡಿಎಸ್‌ ಹಿರಿಯ ಮುಖಂಡ ಎಸ್‌.ಕೆ.ರೆಡ್ಡಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, 38 ವರ್ಷಗಳಿಂದ ಜನತಾ ಪರಿವಾರದಲ್ಲಿ ಕೆಲಸ ಮಾಡಿದ್ದೇನೆ. ನನ್ನಗೀಗ 71 ವರ್ಷ ಇಲ್ಲಿಯವರೆಗೂ ಈ ಭಾಗದಲ್ಲಿ ಹೆಚ್ಚು ಒತ್ತು ಕೊಟ್ಟು ಸಂಘಟಿಸಲಾಗಿದೆ. ಪಕ್ಷ ನಿಷ್ಠೆ ಹಾಗೂ ಪ್ರಾಮಾಣಿಕ ಸೇವೆಗೆ ಬೆಲೆ ಇಲ್ಲ. ಇನ್ನೂ ಮಂದಿ ರಾಜಕೀಯ (Politics) ಬೇಡವೆಂದು ತೀರ್ಮಾನಿಸಿದ್ದು, ಇಂದಿನಿಂದಲೇ ಪ್ರಾದೇಶಕ ಪಕ್ಷ ಜೆಡಿಎಸ್‌ಗೆ ಗುಡ್‌ ಬೈ ಹೇಳುತ್ತಿದ್ದೇನೆ. ರಾಜಕೀಯ ನಿವೃತ್ತಿ ಪಡೆಯುವ ಮೂಲಕ ವಿಶ್ರಾಂತಿ ಪಡೆಯುತ್ತಿದ್ದೇನೆ, ಇನ್ನೂ ಯಾವುದೇ ಕಾರಣಕ್ಕೂ ಜೆಡಿಎಸ್‌ನಲ್ಲಿ ಮುಂದುರಿಯುವುದಿಲ್ಲವೆಂದು ಹೇಳಿದರು.

15 ಮಂದಿ ನನ್ನ ಬೆಂಬಲಿತ ಸದಸ್ಯರಿಂದ ಕಾಂಗ್ರೆಸ್‌ ಮತದಾನ : ತಾಲೂಕಿನ ನಾಗಲ ಮಡಿಕೆ ಹೋಬಳಿ ವ್ಯಾಪ್ತಿ ಗಡಿಭಾಗದ ರಾಪ್ಟೆ ಗ್ರಾಪಂನ ಹುನೇನ್‌ ಪುರ ನನ್ನ ಸ್ವಗ್ರಾಮವಾಗಿದ್ದು, ತುಮಕೂರು ವಿಧಾನ ಫರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಆಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ಅವರ ಬಗ್ಗೆ ಅಪಾರ ಗೌರವವಿದೆ. ಅವರು ಸಹಕಾರಿ ಕ್ಷೇತ್ರದಲ್ಲಿ ರೈತರಿಗೆ ಹಲವಾರು ರೀತಿಯ ಉಪಯುಕ್ತ ಕೆಲಸ ಮಾಡಿದ್ದಾರೆ.

ಒಬ್ಬ ರೈತ ಪರ ಚಿಂತಕರಾಗಿ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಡಿ.10ರಂದು ನಡೆದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆಯಲ್ಲಿ ನನ್ನ ಗ್ರಾಪಂ ವ್ಯಾಪ್ತಿಯ 18 ಮಂದಿ ಚುನಾಯಿತ ಸದಸ್ಯರ ಪೈಕಿ 15 ಮಂದಿ ಸದಸ್ಯರು ಪ್ರಥಮ ಪ್ರಾಶಸ್ಯ ನೀಡುವ ಮೂಲಕ ರಾಜೇಂದ್ರ ಪರ ಮತ ಚಲಾಯಿಸಿದ್ದಾರೆ. ನನ್ನ ಮಾತಿಗೆ ಬೆಲೆ ಕೊಟ್ಟು ಕೆ.ಎನ್‌. ರಾಜಣ್ಣ ಅವರ ಪುತ್ರ ರಾಜೇಂದ್ರ ಪರ ಮತ ಚಲಾಯಿಸಿದ ರಾಪ್ಟೆ ಗ್ರಾಪಂನ ಎಲ್ಲಾ ಸದಸ್ಯರಿಗೆ ಅಭಾರಿಯಾಗಿರುವುದಾಗಿ ಅವರು ಹೇಳಿದರು.

error: Content is protected !!