ಮಂದಿರ,ಮಸೀದಿ,ಚರ್ಚ್ ಗೆ ಹೋಗುವುದೇ ಧರ್ಮವಲ್ಲ…ಮಾದಾರ ಚೆನ್ನಯ್ಯ ಮಹಾಸ್ವಾಮೀಜಿ.

ತಿಪಟೂರು: ಸಮಾಜದಲ್ಲಿ ನೊಂದವರಿಗೆ ನೆರವಾಗುವುದೆ ನಿಜವಾದ ಧರ್ಮ. ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವುದು ದೇವರ ಸೇವೆ ಮಾಡಿದಂತೆ,ಕೇವಲ ದೇವಾಲಯ,ಮಸೀದಿ,ಚರ್ಚ್ ಗಳಿಗೆ ಹೋಗುವುದೇ ಧರ್ಮವಲ್ಲ, ನಿಜವಾದ ಮಾನವೀಯ ಅಂತಃಕರಣ ತೋರುವುದೇ ಮಾನವ ಧರ್ಮ ಎಂದು ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀಶ್ರೀ ಬಸಮಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿ ತಿಳಿಸಿದರು.

ನಗರದ ಪಲ್ಲಾಗಟ್ಟಿ ಬಡಾವಣೆಯಲ್ಲಿ ಜನಸ್ಪಂದನಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕರೋನ ಸಂಕಷ್ಟ ಕಾಲದಲ್ಲಿ ಆಸರೆ ಕಳೆದುಕೊಂಡ ಮಕ್ಕಳು ಹಾಗೂ ಪ್ರತಿಭಾವಂತ ಮಕ್ಕಳಿಗೆ ಮಹಾತ್ಮ ಜ್ಯೋತಿ ಬಾ ಪುಲೆ, ಸಾವಿತ್ರಿ ಬಾ ಪುಲೆ,ಹಾಗೂ ಫಾತೀಮಾ ಶೇಖ್ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವಹಿಸಿ ಶ್ರೀಗಳು ಮಾತನಾಡಿದರು. ಸಮಾಜದಲ್ಲಿ ಬೆಲೆಕಟ್ಟಲಾಗದ ವಸ್ತು ಎಂದರೆ ವಿದ್ಯೆ ಮಾತ್ರ ವಿದ್ಯಾರ್ಥಿಗೆ ಸೂಕ್ತ ಮಾರ್ಗದರ್ಶನ ದೊರೆತಾಗ ಸಮಾಜಕ್ಕೆ ಆಸ್ತಿಯಾಗಿ ರೂಪುಗೊಳ್ಳುತ್ತಾರೆ ಸನ್ಮಾನ ಹಾಗೂ ಪುರಸ್ಕಾರಗಳು ವ್ಯಕ್ತಿಯ ಸಾಧನೆಯನ್ನ ಹಿಮ್ಮಡಿಗೊಳಿಸಲು.ಪ್ರೋತ್ಸಾಹವಾಗಿದೆ.ಸಮಾಜದಲ್ಲಿ ಉಳ್ಳವರು ಬಡವರಿಗೆ ಅಲಕ್ಷಿತರಿಗೆ ನೆರವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಸಿ.ಬಿ ಶಶಿಧರ್ ನಮ್ಮ ಟ್ರಸ್ಟ್ ನ ಗೆಳೆಯರ ಸಹಕಾರದಿಂದ ಸಮುದಾಯಗಳೆಡೆಗೆ ನಮ್ಮ ನಡಿಗೆ ಎನ್ನುವ ಧ್ಯೇಯದೊಂದಿಗೆ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನ ರೂಪಿಸುತ್ತ ಬಂದಿದ್ದೆವೆ. ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಬೇಕು, ಸತ್ಯ ಮಿಥ್ಯಗಳ ಬಗ್ಗೆ ಜನ ಯೋಚಿಸ ಬೇಕು ಭ್ರಮೆಗಳನ್ನ ಬಿತ್ತುವ ವ್ಯವಸ್ಥೆಯನ್ನ ಪ್ರಶ್ನೆ ಮಾಡುವಂತಾಗಬೇಕು ಎನ್ನುವುದೆ ನಮ್ಮ ಸಂಸ್ಥೆಯ ಆಶಯವಾಗಿದೆ ಎಂದರು

ಕೋವಿಡ್ ಸಂಕಷ್ಟದಲ್ಲಿ ಆಸರೆ ಕಳೆದುಕೊಂಡ ಮಕ್ಕಳು ಹಾಗೂ ಪ್ರತಿಭಾವಂತ ಮಕ್ಕಳಿಗೆ ನೆರವಾಗ ಬೇಕು ಎನ್ನುವ ದೃಷ್ಠಿಯಿಂದ 10 ಲಕ್ಷ ರೂಪಾಯಿ ನಿಧಿ ಸ್ಥಾಪಿಸಿದ್ದು 2ವರ್ಷದ ಅವಧಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕರಾದ ಸುಮನ ಕಿತ್ತೂರು,ಜಿಲ್ಲಾಪಂಚಾಯ್ತಿ ಸದಸ್ಯರಾದ ವತ್ಸಲಶೇಖರಪ್ಪ, ಡಾ.ಅನೀಲ್ ಕುಮಾರ್,ಮತ್ತಿಘಟ್ಟ ಸಂತೋಷ್,ಎಂಎಸ್ ಸೋಮಶೇಖರ್,ಡಿ.ಚನ್ನಯ್ಯ,ಎಂ.ಬಿ ಉಮಾಮಹೇಶ್,ಕೆಇಬಿ ನರಸಿಂಹಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದರು

Leave a Reply

Your email address will not be published. Required fields are marked *

error: Content is protected !!