ಟ್ರಾನ್ಸ್ ಜೆಂಡರ್ ಆಧಾರ್ ಐಡಿ ಕೊಟ್ಟು ನಮ್ಮನ್ನು ಗುರುತಿಸಿ: ಮಂಗಳಮುಖಿಯರ ಅಳಲು.

ತಿಪಟೂರು: ಟ್ರಾನ್ಸ್ ಜೆಂಡರ್ ಆಧಾರ್ ಐಡಿ ಕೊಟ್ಟು ನಮ್ಮನ್ನು ಗುರುತಿಸಿ ಎಂದು ತಿಪಟೂರಿನಲ್ಲಿ ಮಂಗಳಮುಖಿಯರು ಸರ್ಕಾರಕ್ಕೆ ಅವಲತ್ತುಕೊಂಡಿದ್ದಾರೆ.

ಚೇತನ್ ಫೌಂಡೇಶನ್ ಸಹಯೋಗದಲ್ಲಿ ಯುವಕ ಕಿರಣ್ ಹಾಗೂ ಆತನ ಸಂಗಡಿಗರು ತಿಪಟೂರಿನ ಹಲವೆಡೆ ಸಂಕಷ್ಟದಲ್ಲಿದ್ದ ಮಂಗಳಮುಖಿಯರನ್ನ ಗುರುತಿಸಿ ಆಹಾರ ಕಿಟ್ ವಿತರಣೆ ಮಾಡಿದರು. ಈ ವೇಳೆ ವೀಡಿಯೋ ಕಾಲ್ ಮೂಲಕ ಮಾತನಾಡಿದ ನಟ ಚೇತನ್ ಕಿರಣ್ ರಾಜ್ ಹಾಗೂ ಸಂಗಡಿಗರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ರು.

ಮಂಗಳಮುಖಿ ರಂಭಾ ಮಾತನಾಡಿ ಕೊರೊನಾ ಲಾಕ್ಡೌನ್ ನಿಂದ ನಮ್ಮ ಮಂಗಳ ಮುಖಿ ಸಮುದಾಯ ಸಂಕಷ್ಟದಲ್ಲಿದ್ದು ಇದುವರೆಗೂ ಯಾರೊಬ್ಬರು ನಮ್ಮನ್ನು ಗುರುತಿಸುವ ಕೆಲಸ ಮಾಡಿರಲಿಲ್ಲ ಯುವಕ ಕಿರಣ್ ರಾಜ್ ಅರ್ಚನಹಳ್ಳಿಯವರು ನಮ್ಮನ್ನು ಗುರುತಿಸಿ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ನಮ್ಮ ಸಂಕಷ್ಟಕ್ಕೆ ನೆರವಾಗಿದ್ದಾರೆ ಎಂದರು.

ಸರ್ಕಾರ ನಮಗೆ ಇದುವರೆಗೂ ಆಧಾರ್ ಐಡಿ ನೀಡಿಲ್ಲ ಅಧಿಕಾರಿಗಳ ಬಳಿ ತೆರಳಿ ವಿಚಾರಿಸಿದ್ರೆ ಶಾಲಾ ದಾಖಲಾತಿ ಪ್ರಮಾಣ ಪತ್ರ ಕೇಳ್ತಾರೆ, ದಾಖಲಾತಿಯಲ್ಲಿ ನಮ್ಮ ಲಿಂಗ ಗಂಡು ಎಂದು ಉಲ್ಲೇಖವಿದೆ. ಈಗಾಗಿ ಹೆಣ್ಣಿನ ರೂಪದಲ್ಲಿರುವ ನಮಗೆ ಅಧಿಕಾರಿಗಳು ದಾಖಲೆ ಸರಿಯಿಲ್ಲದ ಕಾರಣ ಹೇಳಿ ಈವರೆಗೂ ಆಧಾರ್ ಐಡಿ ನೀಡಿಲ್ಲ..ಇದರಿಂದ ನಮಗೆ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಸಾದ್ಯವಾಗುತ್ತಿಲ್ಲ. ಐಡಿ ಗುರುತೇ ಇಲ್ಲದ ನಮ್ಮನ್ನು ಲಾಕ್ ಡೌನ್ ಸಂಕಷ್ಟದ ಸಮಯದಲ್ಲಿ ಯುವಕ ಕಿರಣ್ ರಾಜ್ ಹಾಗೂ ಅವರ ಸಂಗಡಿಗರು ನಮ್ಮನ್ನು ಗುರುತಿಸಿದ್ದಾರೆ. ಇದೇ ರೀತಿ ಸರ್ಕಾರ ನಮಗೆ ಟ್ರಾನ್ಸ್ ಜೆಂಡರ್ ಎಂದು ಆಧಾರ್ ಕಾರ್ಡ್ ನೀಡಿ ಸಮಾಜದಲ್ಲಿ ನಾವು ಸಹ ಇದ್ದೆವೆ ಎಂದು ಗುರುತಿಸಿ ಸೌಲಭ್ಯಗಳನ್ನು ಒದಗಿಸುವಂತೆ ಮಾಧ್ಯಮಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಿರಣ್, ಚೇತನ್ ಎಚ್ ಸಿ, ಮಂಜುನಾಥ್, ಆಂಜಿನಪ್ಪ, ಚೇತನ್, ಚಿಕ್ಕಸ್ವಾಮಿ, ಶಿವಕುಮಾರ್, ಗಿರೀಶ್, ಪೃಥ್ವಿ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!