ತುರುವೇಕೆರೆ: ಜಿಲ್ಲೆಯಲ್ಲಿ ಗಾಂಜಾ ಡ್ರಗ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಯುವಕರು ಮತ್ತಿನಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ತುರುವೇಕೆರೆ ಪಟ್ಟಣದಲ್ಲಿ ಡ್ರಗ್ ಅಡಿಕ್ಟ್ ಯುವಕನನ್ನು ಸಾಯಿಸಲು ಅನುಮತಿ‌ ಕೊಡಿ ಇಲ್ಲವಾದರೆ ಡ್ರಗ್ ನಿಯಂತ್ರಣ ಮಾಡಿ ಎಂದು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದರು.

ಘಟನೆಯ ಬೆನ್ನಲ್ಲೆ ಇದೀಗ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿ ಗಾಂಜಾ ಡ್ರಗ್ಸ್ ನಿಂಯತ್ರಣ ಕುರಿತು ಅರಿವು ಮೂಡಿಸಲು ಮುಂದಾಗಿದೆ. ಇಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ಆಡಳಿತ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಸಾರ್ವಜನಿಕರಿಗೆ ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಅರಿವು ಮೂಡಿಸಲು ಜಾಗೃತಿ ಜಾಥವನ್ನು ತುರುವೆಕೆರೆ ಪಟ್ಟಣದಲ್ಲಿ ಆಯೋಜಿಸಲಾಗಿತ್ತು.

ಪ್ರಮುಖವಾಗಿ ತಂಬಾಕಿನ ದುಷ್ಪರಿಣಾಮಗಳು ಹಾಗೂ ಕೋಟ್ಟಾ ಕಾಯ್ದೆಯ ಕುರಿತ ಗುಲಾಬಿ ಆಂದೋಲನ ಹಾಗೂ ಮನ ಪರಿವರ್ತನಾ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ತುರುವೆಕೆರೆ ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಕುಂ,ಈ,ಅಹಮದ್, ಗುರುಭವನದ ಆವರಣದಲ್ಲಿ ಚಾಲನೆ ನೀಡಿದರು,

ನಂತರ ಗುರುಭವನ ಆವರಣದಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ಕಾಲ್ನಡಿಗೆ ಜಾಥಾ ನಡೆಸಿದರು. ತಂಬಾಕು ಮಾರಾಟ ಅಂಗಡಿಗಳಿಗೆ ಭೇಟಿ ನೀಡಿ ಗುಲಾಬಿ ಹೂವು ನೀಡಿ ತಂಬಾಕು ತ್ಯಜಿಸಿ ಎಂದು ಅರಿವು ಮೂಡಿಸಿದರು. ಜಾಗೃತಿ ಜಾಥದಲ್ಲಿ ಪಟ್ಟಣದ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here