ಸಿರಾಜ್ ಗೆ ಬಿಸಿ ಮುಟ್ಟಿಸಿದ ಗವಾಸ‍್ಕರ್

ನವದೆಹಲಿ, ಜ 2: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಐದನೇ ದಿನದಾಟದಲ್ಲಿ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರು ವರ್ತಿಸಿದ ರೀತಿಯನ್ನು ಬ್ಯಾಟಿಂಗ್ ದಿಗ್ಗಜ ಸುನಿಲ್‌ ಗವಾಸ್ಕರ್ ಆಕ್ಷೇಪಿಸಿದ್ದಾರೆ. ದಕ್ಷಿಣ ಆಫ್ರಿಕಾ ಉಪ ನಾಯಕ ಬವುಮಾ ವಿಕೆಟ್‌ ಗಾಗಿ ಪ್ರಯತ್ನಿಸಿದ ಸಿರಾಜ್ ಆತನ ಕಡೆಗೆ ಚೆಂಡು ಎಸೆದ ಕ್ರಮವನ್ನು ಸನ್ನಿ ಪ್ರಶ್ನಿಸಿದ್ದಾರೆ.

ಸಿರಾಜ್ ಬೌಲಿಂಗ್ ನಲ್ಲಿ ರಕ್ಷಣಾತ್ಮಕ ಆಟವಾಡಿದ ಬವುಮಾ ರನ್ ಗಾಗಿ ಪ್ರಯತ್ನ ಮಾಡಲಿಲ್ಲ.ಫಾಲೋ ಅಪ್ ನಲ್ಲಿ ಚೆಂಡನ್ನು ಸ್ವೀಕರಿಸಿದ ಭಾರತದ ವೇಗಿ ಅದನ್ನು ಬಹುಮಾ ಕಡೆ ಎಸೆದರು . ಇದರಿಂದ ಚೆಂಡು ಅವರ ಎಡಗಾಲಿಗೆ ಬಡಿದು ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ಗಾಯಗೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗವಾಸ್ಕರ್, ”ಬವುಮಾ ರನ್‌ ಗಾಗಿ ಓಡಲು ಪ್ರಯತ್ನಿಸಲಿಲ್ಲ. ಆದರೆ, ಸಿರಾಜ್ ತುಂಬಾ ಆಕ್ರಮಣಕಾರಿಯಾಗಿ ವರ್ತಿಸಿದರು. ಆತನೊಂದಿಗೆ ತಂಡದ ಮುಖ್ಯಸ್ಥರು ಮಾತನಾಡಬೇಕು ಎಂದು ಸೂಚಿಸಿದ್ದಾರೆ.

error: Content is protected !!