ಗುಬ್ಬಿ: ಮಡೇನಹಳ್ಳಿ ದಲಿತಕಾಲೋನಿ ನಿವಾಸಿಗಳಿಗೆ ಕುಡಿಯಲು ಯೋಗ್ಯ ವಲ್ಲದ ನೀರು ನೀಡುತ್ತಿರುವ ಜಿ.ಹೊಸಹಳ್ಳಿ ಪಂಚಾಯಿತಿ.

ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿಯ ಜಿ.ಹೊಸಹಳ್ಳಿ ಗ್ರಾಮಪಂಚಾಯಿತಿ ಅಧಿಕಾರಿಗಳು ಮಡೇನಹಳ್ಳಿ ಗ್ರಾಮಕ್ಕೆ ಹಾಗೂ ಮಡೇನಹಳ್ಳಿ ದಲಿತ ಕಾಲೋನಿ ನಿವಾಸಿಗಳಿಗೆ ಕುಡಿಯಲು ಯೋಗ್ಯವಲ್ಲದ ನೀರು ಬಿಡುವ ಮೂಲಕ ಜನತೆಗೆ ಅನಾರೋಗ್ಯ ಸೃಷ್ಟಿಯಾಗುವ ನೀರು ಬಿಡುತ್ತಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳ.ವಿರುದ್ಧ ದಲಿತ ಕಾಲೋನಿ ನಿವಾಸಿಗಳು ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸ್ಥಳೀಯ ನಿವಾಸಿಗಳು ಹಲವು ವರ್ಷಗಳಿಂದ ಈ ಕಾಲೋನಿ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ವಹಿಸಿರುವ ಗ್ರಾಮಪಂಚಾಯಿತಿ ಸೌಜನ್ಯ ಕಾದರು ಸಹ ಗ್ರಾಮದ ಕಡೆ ಗಮನ ಹರಿಸಿಲ್ಲ ಹಲವು ಸಮಸ್ಯೆ ಗಳ ಬಗ್ಗೆ ದೂರು ನೀಡಿದರು ಸಹ ಯಾವ ಅಧಿಕಾರಿಗಳು ಸಹ ಸಮಸ್ಯೆ ಬಹೆಹರಿಸಿಲ್ಲ ಬದಲಾಗಿ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಮನವಿ ಮಾಡಿದರು ಸಹ ಪ್ರಯೋಜನವಾಗಿಲ್ಲ ದಲಿತಕಾಲೋನಿಗೆ ಮೂಲಭೂತ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೀರಿನ ಟ್ಯಾಂಕ್ ಸ್ವಚ್ಛಗೊಳಿಸದ ಗ್ರಾಮ.ಪಂಚಾಯಿತಿ ಅಧಿಕಾರಿಗಳು. ಮಡೇನಹಳ್ಳಿ ದಲಿತ ಕಾಲೋನಿಯ ನೀರಿನ ಟ್ಯಾಂಕ್ ಗಳನ್ನು ಸ್ವಚ್ಛ ಗೊಳಿಸಿ ಅದೆಷ್ಟೋ ವರ್ಷಗಳು ಕಳೆದಿವೆಯೋ ತಿಳಿದಿಲ್ಲ ನೀರು ಬಂದರೆ ಬಿಂದಿಗೆ ತುಂಬ ನೀರಿನ ಟ್ಯಾಂಕ್ ನಲ್ಲಿ ಶೇಖರಣೆ ಯಾಗಿರುವ ಕಲುಷಿತ ನೀರು ಜನತೆಗೆ ಲಭ್ಯ ವಾಗುತ್ತಿದೆ.ಇಂದು ಸಹ ಸ್ಥಳೀಯರು ಕುಡಿಯುವ ನೀರು ತರಲು ಟ್ಯಾಂಕ್ ಬಳಿ ತೆರಳಿದರೆ ಸತ್ತಿರುವ ಹಲ್ಲಿಗಳು ನೀರಿನ ಮೂಲಕ ಬಿಂದಿಗೆ ತುಂಬುತ್ತಿರುವುದು ಜನತೆಗೆ ಅಂತಕ ಮೂಡಿಸಿದೆ.

ಸಮಸ್ಯೆಗೆ ಸ್ಪಂದನೆ ನೀಡದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ನೀರಿನ ಸಮಸ್ಯೆ ಬಗ್ಗೆ ಜನತೆ ತಿಳಿಸಲು ಕರೆ ಮಾಡಿದರೆ ಪಿಡಿಒ ಸಾರ್ವಜನಿಕರ ಕರೆ ಸ್ವೀಕರಿಸದೆ ಬೇಜಾವಬ್ದರಿತನ ತೋರುತ್ತಾರೆ ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಲು ಸಾಧ್ಯ ವಾಗುತ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ನೀರು ವಿತರಕನ ನಿರ್ಲಕ್ಷ್ಯ. ಕ್ರಮವಹಿಸುವಂತೆ ಗ್ರಾಮಸ್ಥರ ಆಗ್ರಹ. ಮಡೇನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುವ ನೀರು ವಿತರಕನ ನಿರ್ಲಕ್ಷ್ಯ ದಿಂದ ಇಂಥಹ ಅನುಪಯುಕ್ತ ನೀರು ಬರುತ್ತಿದ್ದು ಈತನ ವಿರುದ್ಧ ಗ್ರಾಮ ಪಂಚಾಯಿತಿ ಕ್ರಮವಹಿಸಬೇಕು.ಸಮಯಕ್ಕೆ ಸರಿಯಾಗಿ ನೀರು ಬಿಡಲು ನಿರಾಕರಿಸುವುದು.ಟ್ಯಾಂಕರ್ ಸ್ವಚ್ಛತೆ ಮಾಡದಿರುವುದು ಇಂತಹ ಘಟನೆಗಳು ನೆಡೆಯಲು ಸಾಧ್ಯವಾಗುತ್ತದೆ. ಇಂತಹ ನೀರು ಕುಡಿದು ಅನಾಹುತ ಗಳು ಸಂಭವಿಸಿದರೆ ಅಧಿಕಾರಿಗಳು ನೇರ ಹೊಣೆಯನ್ನು ಹೊರಬೇಕಾಗುತ್ತದೆ ಸಮಸ್ಯೆ ಎದುರಾಗುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮವಹಿಸಬೇಕು ಇಲ್ಲಾವಾದರೆ ಗ್ರಾಮಸ್ಥರು.ಕಾಲೋನಿ ನಿವಾಸಿಗಳು ಪಂಚಾಯಿತಿ ಮುಂಭಾಗ ಪ್ರತಿಭಟನೆ ಗೆ ಮುಂದಾಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಬಿಂದಿಗೆಯಲ್ಲಿ ಸತ್ತಿರುವ ಹಲ್ಲಿ ಬಿದ್ದಿರುವುದು

Leave a Reply

Your email address will not be published. Required fields are marked *

error: Content is protected !!