ಜಿಲ್ಲೆಯಲ್ಲಿ ಮಾ.09 ರಿಂದ ಉಚಿತ ಕೋವಿಡ್ ಲಸಿಕೆ ವಿತರಣೆ.

ತುಮಕೂರು : ಮಾ.09 ರಿಂದ ಜಿಲ್ಲೆಯ ಎಲ್ಲಾ ಪ್ರಾಥಮಿಕ, ನಗರ ಆರೋಗ್ಯ ಕೇಂದ್ರ ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಯಲ್ಲಿ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದೆ.

 ಖಾಸಗಿ ಸಂಸ್ಥೆಗಳಾದ ಶ್ರೀದೇವಿ ವೈದ್ಯಕೀಯ ಮಹಾ ವಿದ್ಯಾಲಯ, ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಿದ್ದಗಂಗಾ ಆಸ್ಪತ್ರೆಗಳಲ್ಲಿ ಸರ್ಕಾರಿ ಮಾರ್ಗಸೂಚಿಯನ್ವಯ (250 ರೂ. ಮೀರದಂತೆ) ಹಣ ಪಾವತಿಸಿ ಲಸಿಕೆ ಪಡೆಯಬಹುದಾಗಿದೆ. ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಪ್ರತಿ ಗುರುವಾರ, ಭಾನುವಾರ ಮತ್ತು ಸರ್ಕಾರಿ ರಜೆ ದಿನ ಹೊರತುಪಡಿಸಿ ಉಳಿದ ದಿನಗಳಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯೊಳಗೆ ಲಸಿಕೆ ನೀಡಲಾಗುವುದು.

ಲಸಿಕೆ ಪಡೆಯುವ 45 ರಿಂದ 59 ವರ್ಷದೊಳಗಿನವರು ರಕ್ತದೊತ್ತಡ, ಮಧುಮೇಹ, ಹೃದಯ, ಮೂತ್ರಪಿಂಡ, ಕ್ಯಾನ್ಸರ್ ಹಾಗೂ ಇತರೆ ಧೀರ್ಘಾವಧಿ ಖಾಯಿಲೆಯಿಂದ ಬಳಲುತ್ತಿರುವವರು ವಯಸ್ಸು ಹಾಗೂ ರೋಗಕ್ಕೆ ಸಂಬಂಧಿಸಿದ ನೋಂದಾಯಿತ ವೈದ್ಯರ ದೃಢೀಕರಣ ಪತ್ರದೊಂದಿಗೆ ಲಸಿಕೆ ಪಡೆಯಬಹುದಾಗಿದೆ.

ಅದೇ ರೀತಿ 60 ವರ್ಷ ಮೇಲ್ಪಟ್ಟ ಎಲ್ಲಾ ವಯೋವೃದ್ಧರಿಗೆ ಲಸಿಕೆಯನ್ನು  ನೀಡಲಾಗುವುದು. ಸರ್ಕಾರ ನಿಗಧಿಪಡಿಸಿರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಲಸಿಕೆ ಪಡೆಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕು.

ಈಗಾಗಲೇ ನೋಂದಾಯಿಸಿರುವ ಅರ್ಹ ಫಲಾನುಭವಿಗಳು ಮೊದಲ ಅಥವಾ ಎರಡನೇ ಡೋಸ್ ಪಡೆಯಬಹುದಾಗಿದ್ದು, ಲಸಿಕೆ ಪಡೆಯಲು  www.covin.gov.in, selfregistration.covin.gov.in ಮೂಲಕ  ಸ್ವಯಂ ನೋಂದಾಯಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!