ಶಾಸಕ ಮಸಾಲೆ ಜಯರಾಂ ಕುಮ್ಮಕ್ಕಿನಿಂದ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ.ಮಾಜಿ ಶಾಸಕಎಂ.ಟಿ.ಕೃಷ್ಣಪ್ಪ ನೇರ ಆರೋಪ.

ಗುಬ್ಬಿ ತಾಲ್ಲೂಕಿನ ಸಿ.ಎಸ್. ಪುರ ಹೋಬಳಿಗಳಲ್ಲಿ ಶಾಸಕ ಮಸಾಲೆ ಜಯರಾಂ ಕುಮ್ಮಕ್ಕಿನಿಂದ ವೈಯಕ್ತಿಕ ವಿಚಾರಗಳಿಗೆ ಗಲಾಟೆಗಳು ನೆಡೆಯುತ್ತಿವೆ ಎಂದು ತುರುವೇಕೆರೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹಾಲಿ ಶಾಸಕ ಮಸಾಲೆ ಜಯರಾಂ ಅವರ ಮೇಲೆ ನೇರ ಆರೋಪ ಮಾಡಿದರು.


ಸಿ.ಎಸ್.ಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ ಇಡಗೂರು ಗ್ರಾಮದಲ್ಲಿ ನೆಡೆದ ಜೆಡಿಎಸ್ ಕಾರ್ಯಕರ್ತನ ಮೇಲೆ ತಡರಾತ್ರಿ ನೆಡೆದ ಹಲ್ಲೆ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಒತ್ತಾಯ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮಸಾಲೆ ಜಯರಾಂ ಶಾಸಕರಾದ ದಿನದಿಂದ ಸಾಕಷ್ಟು ಗಲಾಟೆಗಳು ನೆಡೆಯುತ್ತಿವೆ ಇವರ ಚೇಲಾಗಳ ದೌರ್ಜನ್ಯ ನಗಡೆಯುತ್ತಿದೆ.ಇಂದು ಇಡಗೂರು ಗ್ರಾಮದಲ್ಲಿ ನೆಡೆದ ಗಲಾಟೆ ಸಂಬಂಧ ಗ್ರಾಮದ ಆನಂದ ಎಂಬುವ ವ್ಯಕ್ತಿಯ ಮೇಲೆ ಇಡಗೂರು ಗ್ರಾಮದ ವ್ಯಕ್ತಿ ಗಳು ದೇವರ ಉತ್ಸವ ಮಾಡುವ ವಿಚಾರದಲ್ಲಿ ನೆಡೆದ ಮಾತಿನ ವಿವಾದ ಅತಿರೇಕಕ್ಕೆ ತಿರುಗಿ ಆನಂದ ಎಂಬುವನ ಮೇಲೆ ಮಾರಾಣಾಂತಿಕ ಹಲ್ಲೆ ನೆಡೆದು ಗಲಾಟೆಯಲ್ಲಿ ಆನಂದ ಎಂಬುವ ಯುವಕನಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ್ದು ಇಂತಹ ಕೃತ್ಯಗಳು ನೆಡೆಯಲು ಶಾಸಕ ಬೆಂಬಲವೇ ಕಾರಣ ಎಂದು ಗಂಭೀರ ಆರೋಪ ಮಾಡಿದರು.ನಾನು ಶಾಸಕನಾದ ಅವಧಿಯಲ್ಲಿ ಇಂತಹ ಘಟನೆಗಳು ನೆಡೆಯಲಿಲ್ಲ ಇತ್ತೀಚೆಗೆ ಈ ಸನ್ನಿವೇಶ ಗಳು ನೆಡೆಯುತ್ತಿರುವುದು ಬಹಳ ಬೇಸರದ ಸಂಗತಿ ಎಂದರು‌.


ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಸಿ.ಎಸ್. ಪುರ ಹೋಬಳಿಯಲ್ಲಿ ಶಾಸಕರ ಬೆಂಬಲಿಗರ ದೌರ್ಜನ್ಯ ಪ್ರಕರಣಗಳು ನೆಡೆಯುತ್ತಿದ್ದರು ಸಹ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದ್ದು ಶಾಸಕರ ಅಣತಿಯಂತೆ ಅಧಿಕಾರಿಗಳು ನೆಡೆಯುಕೊಳ್ಳುತ್ತಿದ್ದಾರೆ ಕಾನೂನು ಎಂಬುವ ಭಯವಿಲ್ಲದಂತೆ ವರ್ತಿಸುವ ಇಂತಹ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮವಹಿಸಬೇಕು ಎಂದರು.


ಇಡಗೂರು ಕೆಂಪಮ್ಮ ದೇವರ ಉತ್ಸವ ದ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ. ಇಡಗೂರು ಗ್ರಾಮದಲ್ಲಿರುವ ಶ್ರೀ ಕೆಂಪಮ್ಮ ದೇವರ ಉತ್ಸವ ನಿಮಿತ್ತ ದೇವರನ್ನು ಬೋರಪ್ಪನಹಳ್ಳಿಯಿಂದ ಇಡಗೂರು ಗ್ರಾಮಕ್ಕೆ ತರುವ ವಿಚಾರದಲ್ಲಿ ಸ್ಥಳೀಯವಾಗಿ ನೆಡೆದ ಈ ವಾಕ್ಸಮರ ಎರಡು ಗುಂಪುಗಳ ನಡುವಿನ ಗಲಾಟೆಗೆ ಕಾರಾಣವಾಗಿದ್ದು ಗಲಾಟೆ ಪ್ರಾರಂಭದ ಮುಂಚೆಯೇ ಗ್ರಾಮಸ್ಥರು ಸಿ.ಎಸ್.ಪುರ ಪೊಲೀಸರಿಗೆ ಮಾಹಿತಿ ನೀಡಿ ಗ್ರಾಮಕ್ಕೆ ಕರೆಸಿಕೊಂಡು ಪೊಲೀಸರು ಎರಡು ಗುಂಪಿನವರಿಗೆ ಗಲಾಟೆ ಮಾಡಿಕೊಳ್ಳದಂತೆ ತಿಳಿಹೇಳಿ ಎಲ್ಲರನ್ನೂ ಕಳುಹಿಸಿ ಇಡಗೂರು ಸರ್ಕಲ್ ಬಳಿ ಬಂದ ಸಮಯದಲ್ಲಿ ಎರಡು ಗುಂಪಿನವರ ಪರಸ್ಪರ ಮಾತಿನ ಚಕಮಕಿ ನೆಡೆದು ಈ ಗಲಾಟೆಗೆ ಕಾರಾಣವಾಗಿದೆ ಸ್ಥಳೀಯವಾಗಿದ್ದ ಪೊಲೀಸರು ಸ್ಥಳಕ್ಕೆ ಬಂದು ಜನರನ್ನು ಚದುರಿಸಿ ಹಲ್ಲೆಯಾದ ವ್ಯಕ್ತಿ ಯನ್ನು ಚಿಕಿತ್ಸೆಗಾಗಿ ಕಳುಹಿಸಿ ಹಾಗಬಹುದಾದ ದೊಡ್ಡ ಅನಾಹುತ ತಪ್ಪಿಸಿದ್ದಾರೆ ಎಂದು ಗ್ರಾಮದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹಲ್ಲೆ ಘಟನೆ ಸಂಬಂಧ ಹಲ್ಲೆಯಾದ ಆನಂದನ ಸಹೋದರಿ ದೂರು ನೀಡಿದ್ದು ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.ಹಲ್ಲೆ ವ್ಯಕ್ತಿಗೆ ಬೆಳ್ಳೂರು ಕ್ರಾಸ್ ಬಿಜೆಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಈ ಸಂಬಂಧ 6ಜನ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದ್ದು 3ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಇತರರನ್ನು ಬಂಧಿಸಲಾಗುವುದು ಎಂದು ಗುಬ್ಬಿ ವೃತ್ತ ನಿರೀಕ್ಷಕ ರಾಮಕೃಷ್ಣಪ್ಪ. ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!