ಗುಬ್ಬಿ. ಹೇರೂರು ರೇಷ್ಮೆ ಫಾರಂ ಗೆ ಆಕಸ್ಮಿಕ ಬೆಂಕಿ. ಹೇರೂರು ಯುವಕರ ಸಮಯಪ್ರಜ್ಜೆಯಿಂದ ತಪ್ಪಿದ ಬಾರಿ ಅನಾಹುತ.

ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿಯ ಹೇರೂರು ಸಮೀಪದಲ್ಲಿ ರುವ ರೇಷ್ಮೆ ಇಲಾಖೆಯ ಫಾರಂ ಗೆ ಇಂದು ಮದ್ಯಾಹ್ನ ಆಕಸ್ಮಿಕವಾಗಿ ಬೆಂಕಿ ತಗುಲಿ ಫಾರಂ ಹೌಸ್ ಒಳಭಾಗದಲ್ಲಿ ಇದ್ದಂತ ರೇಷ್ಮೆ ಗಿಡಗಳು ಹಾಗೂ ಇನ್ನೀತರೆ ಗಿಡ ಮರಗಳು ಬೆಂಕಿಗೆ ಸುಟ್ಟು ಹೋಗಿವೆ.ಬೆಂಕಿ ಬಿದ್ದಿರುವ ವಿಚಾರ ತಿಳಿದ ಹೇರೂರು ಗ್ರಾಮಧ ಯುವಕರು ಫಾರಂ ಹೌಸ್ ಬಳಿ ತೆರಳಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ ಹಿನ್ನಲೆಯಲ್ಲಿ ಬಾರಿ ಅಗ್ನಿ ಅವಘಡವನ್ನು ತಪ್ಪಿಸುವಲ್ಲಿ ಶ್ರಮವಹಿಸಿ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು.ಸ್ಥಳಕ್ಕೆ ಅಗ್ನಿಶಾಮಕ ಧಳದ ಸಿಬ್ಬಂದಿ ಆಗಮಿಸಿದ ಬೆಂಕಿ ನಂದಿಸುವಲ್ಲಿ ಸಹಕಾರಿ ಯಾಗಿದ್ದಾರೆ.  

ಅಧಿಕಾರಿಗಳ ನಿರ್ಲಕ್ಷ್ಯ ವೇ ಈ ಘಟನೆಗೆ ಕಾರಣ ಗ್ರಾಮಸ್ಥರ ಆರೋಪ.        ರೇಷ್ಮೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ವೇ ಇಂದು ಬೆಂಕಿ ಅವಘಡಕ್ಕೆ ಕಾರಣವೆಂದು ಗ್ರಾಮಸ್ಥರ ಆರೋಪವಾಗಿದೆ.ಸುಮಾರು 20 ಎಕರೆ ವಿಸ್ತೀರ್ಣ ಹೊಂದಿರುವ ಈ ಫಾರಂ ಹೌಸ್ ನಲಿ ಒಣತ್ಯಾಜ್ಯ ಹೆಚ್ಚಾಗಿ ದ್ದು ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಸ್ವಚ್ಛತೆ ನಿರ್ವಹಣೆ ಮಾಡಿ ಅನುಪಯುಕ್ತ ವಸ್ತುಗಳನ್ನು ಹೊರಹಾಕುವ ಕೆಲಸ ಮಾಡಿದರೆ ಬಹುಶಃ ಇಂತಹ ಘಟನೆ ನೆಡೆಯುತ್ತೀರಲಿಲ್ಲ ಇನ್ನಾದರು ಅಧಿಕಾರಿಗಳು ಇಂಥಹ ಘಟನೆಗಳು ನೆಡೆಯದಂತೆ ಕ್ರಮ.ವಹಿಸಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ಹೇರೂರು ಸಮೀಪದ ರೇಷ್ಮೆ ಫಾರಂ ಹೌಸ್
ಬೆಂಕಿ ನಂದಿಸಲು ಮುಂದಾದ ಹೇರೂರು ಗ್ರಾಮದ ಯುವಕರು
ಬೆಂಕಿಗೆ ಸುಟ್ಟು ಹೋದ ರೇಷ್ಮೆ ಗಿಡಗಳು ಮತ್ತು ಇತರೆ ಮರಗಳು

Leave a Reply

Your email address will not be published. Required fields are marked *

error: Content is protected !!