ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ವಿರುದ್ಧ ಎಫ್‍ಐಆರ್ ದಾಖಲು

ಸಮಸ್ತಿಪುರ, ಡಿಸೆಂಬರ್ 30(ಯು.ಎನ್.ಐ) 2020ರ ಬಿಹಾರ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್‍ನಲ್ಲಿ ಆಸ್ತಿ ವಿವರಗಳನ್ನು ಮರೆಮಾಚಿದ ಆರೋಪದ ಮೇಲೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ ) ನಾಯಕ ತೇಜ್ ಪ್ರತಾಪ್ ಯಾದವ್ ವಿರುದ್ಧ ಸಮಸ್ತಿಪುರದ ರೋಸೆರಾ ಎಫ್‍ಐಆರ್ ದಾಖಲಾಗಿದೆ.

1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 125 (ಚಿ) ಅಡಿಯಲ್ಲಿ ಸ್ಥಿರ ಆಸ್ತಿ ವಿವರವನ್ನು ಗೌಪ್ಯವಾಗಿಟ್ಟ ಕಾರಣ ಎಫ್ ಐಆರ್ ದಾಖಲಾಗಿದೆ. ಈ ವಿಚಾರವನ್ನು ಜನತಾ ದಳ (ಯುನೈಟೆಡ್) ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿತ್ತು.

ಚುನಾವಣಾ ಆಯೋಗದ ಆದೇಶ ಮತ್ತು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಭೂಸುಧಾರಣಾ (ಡಿಸಿಎಲ್‍ಆರ್) ಸೂಚನೆಯ ಮೇರೆಗೆ ರೋಸೆರಾ ಉಪ ವಿಭಾಗಾಧಿಕಾರಿ (ಎಸ್‍ಡಿಒ) ಬ್ರಜೇಶ್ ಕುಮಾರ್ ಆರ್‍ಜೆಡಿ ನಾಯಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ದೂರಿನ ಪ್ರತಿಯನ್ನು ಭಾರತದ ಚುನಾವಣಾ ಆಯೋಗಕ್ಕೆ ಕಳುಹಿಸಿ ತನಿಖೆಗಾಗಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಗೆ ಪತ್ರ ಬರೆದಿದ್ದಾರೆ. ಸಿಬಿಡಿಟಿಯ ತನಿಖೆಯ ನಂತರ, ಅಫಿಡವಿಟ್‍ನಲ್ಲಿ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಚುನಾವಣಾ ಆಯೋಗವು ತೇಜ್ ಪ್ರತಾಪ್ ಯಾದವ್‍ಗೆ ಶೋಕಾಸ್ ನೋಟಿಸ್ ಕಳುಹಿಸಿದೆ. ತೇಜ್ ಪ್ರತಾಪ್ ಮೂರು ವಾರಗಳ ಕಾಲಾವಕಾಶದೊಳಗೆ ಉತ್ತರಿಸುವಂತೆ ಕೇಳಿತ್ತು. ನೀಡಿದ ಕಾಲಾವಧಿಯೊಳಗೆ ಪ್ರತಿಕ್ರಿಯಿಸಲು ವಿಫಲರಾದ ಕಾರಣ ಎಫ್‍ಐಆರ್ ದಾಖಲಿಸಲಾಗಿದೆ.

error: Content is protected !!