ಗುಬ್ಬಿ: ಕ್ರೀಡೆಗಳು ದೈಹಿಕ ಆರೋಗ್ಯ ವೃದ್ಧಿಗೆ ಸಹಕಾರಿ.ಸಿ.ಎಸ್ .ಪುರ ಪಿಎಸ್ಐ ನಾಗರಾಜು ಸಲಹೆ.

ಗ್ರಾಮೀಣ ಭಾಗದ ಕ್ರೀಡೆಗಳು ಇಂದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿವೆ ಎಂದು ಸಿ.ಎಸ್.ಪುರ ಪೊಲೀಸ್ ಠಾಣೆಯ ಪಿ ಎಸ್ ಐ ನಾಗರಾಜು ಕ್ರೀಡೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗುಬ್ಬಿ ತಾಲ್ಲೂಕಿನ ಕಲ್ಲೂರು ಗ್ರಾಮದ ಶ್ರೀ ವಿನಾಯಕ ಫ್ರೆಂಡ್ಸ್ ಕ್ಲಬ್ ಪಧಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಗ್ರಾಮೀಣ ಮಟ್ಟದಿಂದ ಪ್ರಾರಂಭವಾದ ಕ್ರೀಡೆಗಳು ಇಂದು ವಿಶ್ವ ವ್ಯಾಪ್ತಿಯಲ್ಲಿ ಹೆಸರುಗಳಿಸಿವೆ ಕ್ರೀಡೆಗಳು ಪರಸ್ಪರ ಸ್ಪರ್ಧೆಯೋಡುವ ಜೋತೆಗೆ ದೈಹಿಕ ಆರೋಗ್ಯ ವನ್ನು ನೀಡುವಲ್ಲಿ ಸಹಕಾರಿಯಾಗುತ್ತದೆ ಎಂದು ಕ್ರೀಡಾಪಟುಗಳಿಗೆ ಸಲಹೆ ನೀಡಿದರು. ಈ ವೇಳೆಯಲ್ಲಿ ಎ ಎಸ್ ಐ ಶಿವಕುಮಾರ್. ಮುಖಂಡ ಬಿ.ಹೆಚ್ ಸುರೇಶ್.ಕ್ರೀಡಾಪಟು ರಾಜು.ಜಮೀರ್.ಮಧು.ಅಶೋಕ.ಆನಂದ್ ಇತರರು ಭಾಗವಹಿಸಿದರು.

error: Content is protected !!