“ಪತ್ರಕರ್ತರಿಗೆ” ಫೇಸ್ ಶೀಲ್ಡ್ ಮತ್ತು ಮಾಸ್ಕ್,ಸ್ಯಾನಿಟೈಸರ್, ವಿತರಿಸಿದ- ಯುವ ಮುಖಂಡ ಡಿ.ಪಿ.ವೇಣುಗೋಪಾಲ್.

ತುರುವೇಕೆರೆ: ತಾಲೂಕಿನ ಪತ್ರಕರ್ತರ ಸುರಕ್ಷಿತೆಗಾಗಿ ಮತ್ತು ಆರೋಗ್ಯದ ಹಿತ ದೃಷ್ಟಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಯುವ ಮುಖಂಡ ಹಾಗೂ ಸಮಾಜಸೇವಕರಾದ ಡಿ.ಪಿ. ವೇಣುಗೋಪಾಲ್ ರವರು ಫೇಸ್ ಶೀಲ್ಡ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ವಿತರಿಸಿದರು.

ಈ ವೇಳೆ ಮಾತನಾಡಿದ ಅವರು ಕೋವಿಡ್ ಮೊದಲನೇ ಅಲೆಯಿಂದನು ಇಂದಿಗೂ ಸಹಾ ರಾಜ್ಯದ ಪತ್ರಕರ್ತರು ತಮ್ಮ ಜೀವದ ಹಂಗನ್ನು ತೊರೆದು ತಮ್ಮ ವರದಿಗಾರಿಕೆಯನ್ನು ಪ್ರಾಮಾಣಿಕತೆಯಿಂದ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ರಾಜ್ಯದ ಹಲವು ಮಂದಿ ಪತ್ರಕರ್ತರು ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ. ಕೋವಿಡ್ ನಂತಹ ಸಮಯದಲ್ಲೂ ಸಹ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಿ ತಮ್ಮ ವರದಿಗಾರಿಕೆಯನ್ನು ಮಾಡುತ್ತಿದ್ದಾರೆ.ಇದರ ಹಿನ್ನಲೇ ನಮ್ಮ ತಾಲೂಕಿನ ಪತ್ರಕರ್ತರ ಆರೋಗ್ಯ ಹಿತದೃಷ್ಟಿಯಿಂದ ನಮ್ಮ ಕೈಲಾದ ಸೇವೆಯನ್ನು ಮಾಡಲಾಗಿದೆ. ತಾಲೂಕಿನ ಪತ್ರಕರ್ತರ ಸೇವೆಯನ್ನು ಸಹಾ ಶ್ಲಾಘಿಸಬೇಕು‌ ಹಾಗೂ‌ ತಾಲೂಕಿನ ವಿಜಯವಾಣಿ ಪತ್ರಿಕಾ ವರದಿಗಾರರ ಧರಣೇಶ್ ರವರ ಸಹೋದರರಾದ ಪೇಜ್-3 ಪತ್ರಿಕೆ ಸಂಪಾದಕರಾದ ಎಂ.ಬಿ. ಕರುಣೇಶ್ ರವರು ಕೋವಿಡ್ ನಿಂದಾಗಿ ಮೃತರಾಗಿರುವುದು ನೋವಿನ ಸಂಗತಿಯಾಗಿದೆ ಎಂದು ಸಂತಾಪ ಸೂಚಿಸಿದರು. ಮತ್ತು ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಇತ್ತೀಚೆಗೆ ರಾಜ್ಯದ ಪತ್ರಕರ್ತರನ್ನು ಸಹಾ ಕರೋನಾ ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಘೋಷಣೆ ಮಾಡಿದ್ದಾರೆ. ಈ ಭಾರಿಯ ಕೋವಿಡ್ 19ರ ಪ್ಯಾಕೇಜ್ ನಲ್ಲಿ, ಪತ್ರಕರ್ತರಿಗೂ ಸಹ ವಿಶೇಷ ಪ್ಯಾಕೇಜನ್ನು ನೀಡಬೇಕು ಹಾಗೂ ಕೋವಿಡ್ ನಿಂದ ಮೃತರಾದ ಪತ್ರಕರ್ತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.
ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುರುವೇಕೆರೆ ತಾಲ್ಲೂಕು ಘಟಕದ ನಿರ್ದೇಶಕರಾದ ನಾಗಭೂಷಣ್ ರವರು ಮಾತನಾಡಿ ಪತ್ರಕರ್ತ‌ರ ಆರೋಗ್ಯದ ಕಾಳಜಿಯ ಚಿಂತನೆ ನಡೆಸಿ ಮಾನವೀಯತೆ ಮೆರೆದ ಮುಖಂಡರಾದ ಡಿ.ಪಿ. ವೇಣುಗೋಪಾಲ್ ರವರ ಮುಂದಿನ ಸಮಾಜ ಸೇವೆಗಳು ಸದಾ ಹೀಗೆ ಸಾಗಲಿ ತಮಗೆ ಶುಭವಾಗಲಿ ಎಂದು ತಾಲ್ಲೂಕಿನ ಸಂಘದ ಹಾಗೂ ಪತ್ರಕರ್ತರ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಪುಟ್ಟರಾಜು, ಸುದರ್ಶನ್, ಪೃಥ್ವಿರಾಜ್, ಕೆಂಪೇಗೌಡರು ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮುಕೂರು ಜಿಲ್ಲಾ ಗ್ರಾಮೀಣ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ್ ದುಂಡಾ, ತುರುವೇಕೆರೆ ತಾಲೂಕು ಘಟಕದ ಅಧ್ಯಕ್ಷರಾದ ದೇವರಾಜ್ ರವರ ಉಪಸ್ಥಿತಿಯಲ್ಲಿ, ಪ್ರಧಾನ ಕಾರ್ಯದರ್ಶಿಗಳಾದ ಮಾಯಸಂದ್ರ ಸ್ವಾಮಿ, ಗ್ರಾಮೀಣ ಕಾರ್ಯದರ್ಶಿಯಾದ ಎಂ.ಬಿ.ಧರಣೇಶ್, ನಿರ್ದೇಶಕರುಗಳಾದ ಪಾಂಡುರಂಗಯ್ಯ, ಸಚಿನ್ ಮಾಯಸಂದ್ರ ಮತ್ತು ಪತ್ರಕರ್ತರಾದ ರಾಮಪ್ರಸಾದ್, ಮನೋಹರ್, ವೆಂಕಟರಾಮ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವರದಿ- ಸಚಿನ್ ಮಾಯಸಂದ್ರ.

Leave a Reply

Your email address will not be published. Required fields are marked *

error: Content is protected !!