ಮಠದ ಆನೆ ಅಪಹರಣ ವಿಫಲ ಯತ್ನ.

ತುಮಕೂರು: ನಗರದ ಹೊರಪೇಟೆಯಲ್ಲಿರುವ ಕರಿಬಸವಸ್ವಾಮಿ ಮಠದ ಆನೆ ಅಪಹರಣ ಮಾಡಲು ಯತ್ನಿಸಲಾಗಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಎಂದು ಹೇಳೊಕೊಂಡು ಕಳ್ಳರು ಆನೆಗೆ ಬನ್ನೇರಘಟ್ಟದಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿ ಲಾರಿಯಲ್ಲಿ ಹತ್ತಿಸಿಕೊಂಡು ಹೋಗಿದ್ದಾರೆ. ಬಳಿಕ ದಾಬಸ್ ಪೇಟೆ ಬಳಿ ಮಠದ ಆನೆಯ ಮಾವುತರನ್ನು ಹಲ್ಲೆ ಮಾಡಿ ಅವರನ್ನು ಲಾರಿಯಿಂದ ಕೆಳಗಿಳಿಸಿ ಆನೆಯನ್ನು ಅಪಹರಣ ಮಾಡಿದ್ದಾರೆ.ಆನೆಯನ್ನ ಬನ್ನೇರುಘಟ್ಟಕ್ಕೆ ಕರೆದುಕೊಂಡು ಹೋಗುವ ಬದಲು ಕುಣಿಗಲ್ ನ ಹಳ್ಳಿಯೊಂದರಲ್ಲಿ ಬಚ್ಚಿಡಲಾಗಿತ್ತು. ಈ ವೇಳೆ ಆನೆಗೂ ಜೆಸಿಬಿಯಿಂದ ಹಲ್ಲೆ ಮಾಡಲಾಗಿದೆ ಎಂದು ಮಠದ ಸಿಬ್ಬಂದಿಗಳು ಆರೋಪಿಸಿದ್ದಾರೆ.

ಅಷ್ಟಕ್ಕೂ ಇದು ಹೆಣ್ಣಾನೆ. ಕಳೆದ 29 ವರ್ಷಗಳಿಂದ ಕರಿಬಸವಸ್ವಾಮಿ ಮಠದಲ್ಲಿ ಇದೆ. ಕಾನೂನು ಬದ್ದವಾಗಿ ಈ ಆನೆಯನ್ನು ಮಠದಲ್ಲಿ ಬೆಳೆಸಿಕೊಂಡು ಬರಲಾಗಿದೆ. ಜಾತ್ರೆ ಉತ್ಸವದ ಸಂದರ್ಭದಲ್ಲಿ ಸಂಪ್ರದಾಯದಂತೆ ಆನೆ ಬಳಕೆ ಆಗುತ್ತದೆ.

ಯಾರಿಗೂ ಉಪದ್ರವ ಕೊಡದ ಆನೆ ಸೌಮ್ಯ ಸ್ವಭಾವದ್ದು. ಇಂಥಹ ಆನೆಗಳನ್ನು ಸರ್ಕಸ್ ಕಂಪನಿಗಳಲ್ಲಿ ಬಳಸಿಕೊಂಡರೆ ಒಳ್ಳೆ ಪರ್‍ಪಾರ್‍ಮೆನ್ಸ್ ಕೊಡುತ್ತದೆಯಂತೆ. ಹಾಗಾಗಿ ಅರಣ್ಯ ಅಧಿಕಾರಿಗಳು ಗುಜರಾತಿನ ಸರ್ಕಸ್ ಕಂಪನಿಯ ಆಮೀಷಕ್ಕೆ ಒಳಗಾಗಿ ಅವರೊಂದಿಗೆ ಸೇರಿಕೊಂಡು ಆನೆಯನ್ನು ಕದ್ದೊಯ್ದಿದ್ದಾರೆ ಅನ್ನೋದು ಆರೋಪ. ಕಳೆದ ತಿಂಗಳು ಆನೆಯ ಆರೋಗ್ಯ ಪರೀಕ್ಷೆ ನಡೆಸಿ ಬಂದಿದ್ವಿ. ಆದರೂ ಇದ್ದಕಿದ್ದ ಹಾಗೆ ಅರಣ್ಯ ಇಲಾಖಾ ಆಧಿಕಾರಿಗಳು ಬಂದು ಆನೆ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದೆ ಆಪರೇಷನ್ ಮಾಡಬೇಕು ಎಂದು ಸರ್ಕಸ್ ಕಂಪನಿ ಲಾರಿ ಮತ್ತು ಅವರ 8 ಜನ ಮಾವುತರನ್ನು ಕರೆತಂದು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅರ್ಧದಾರಿಯಲ್ಲಿ ಮಾರ್ಗ ಬದಲಿಸಿ ಅಪಹರಿಸಿದ್ದಾರೆ.

ಅಪಹರಿಸಿದ ಆನೆ ಲಕ್ಷ್ಮೀ ನಿನ್ನೆ ಸಂಜೆ ವೇಳೆ ಕುಣಿಗಲ್ ತಾಲೂಕಿನ ಹಳ್ಳಿಯೊಂದರಲ್ಲಿ ಪತ್ತೆಯಾಗಿದೆ. ಮಠದವರು ಲಾರಿ ಮೂಲಕ ಆನೆಯನ್ನು ವಾಪಸ್ ಮನೆಗೆ ಕರೆತಂದಿದ್ದಾರೆ. ಈ ಆನೆ ಸುಮಾರು 40 ಲಕ್ಷ ಬೆಲೆ ಬಾಳುತ್ತದೆಯಂತೆ. ಹಾಗಾಗಿ ಸರ್ಕಸ್ ಕಂಪನಿಯವರಿಗೆ ಆನೆ ಲಕ್ಷ್ಮೀಯನ್ನು ಮಾರಲು ಪ್ಲಾನ್ ನಡೆದಿತ್ತು ಅನ್ನುವ ಗಂಭೀರ ಆರೋಪ ಇದೆ. ಆನೆ ಕದ್ದ ಮಿಸ್ಟರಿ ಏನೇ ಇರಲಿ. ಆದರೆ ಆನೆ ಅಪಹರಣ ಆಯ್ತಂತೆ ಎಂಬ ಸುದ್ದಿ ತುಮಕೂರು ಜಿಲ್ಲೆಯಲ್ಲಿ ಒಂದಿಷ್ಟು ಕುತೂಹಲ ಹುಟ್ಟಿಸಿ ಮಠದತ್ತ ಜನರ ದಂಡೇ ಹರಿದು ಬರತೊಡಗಿದೆ.

error: Content is protected !!