ಆಯೋಧ್ಯೆ ಸಮೀಪ ಭೂಕಂಪನ.. ಆತಂಕದಲ್ಲಿ ಜನರು

ಅಯೋಧ್ಯೆ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಆಯೋಧ್ಯೆ ಸಮೀಪ ಭೂಕಂಪ ಸಂಭವಿಸಿದೆ ಗುರುವಾರ ಮಧ್ಯ ರಾತ್ರಿ ಆಯೋಧ್ಯೆಯಲ್ಲಿ ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3 ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಶುಕ್ರವಾರ ಬೆಳಗ್ಗೆ ತಿಳಿಸಿದೆ.

ಅಯೋಧ್ಯೆ ನಗರದಿಂದ 176 ಕಿ.ಮೀ ದೂರದಲ್ಲಿ ಸಂಭವಿಸಿದ ಭೂಕಂಪನದಿಂದ ಜನರು ಭಯಭೀತಗೊಂಡಿದ್ದಾರೆ. ಭೂಕಂಪನ 15 ಕಿಲೋಮೀಟರ್ ಆಳದಲ್ಲಿ ಕೇಂದ್ರೀಕೃತವಾಗಿದೆ ಎಂದು ಭೂ ಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ call ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ. ಗಾಢ ನಿದ್ರೆಯಲ್ಲಿದ್ದ ಜನರಿಗೆ ಭೂಕಂಪನ ತೀವ್ರ ಕಳವಳ ಸೃಷ್ಟಿಸಿದೆ.

error: Content is protected !!